Fake News - Kannada
 

ಸ್ಮೃತಿ ಸಿಂಗ್ ಬಗ್ಗೆ ಮಾನಹಾನಿಕರ ಹೇಳಿಕೆಗಾಗಿ ವ್ಯಕ್ತಿಯೋರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಸಂಬಂಧವಿಲ್ಲದ ಫೋಟೋವನ್ನು ಶೇರ್ ಮಾಡಲಾಗಿದೆ

0

ಕೀರ್ತಿ ಚಕ್ರ ಪ್ರಶಸ್ತಿ ಪುರಸ್ಕೃತ ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ಬಗ್ಗೆ ‘ಅಹ್ಮದ್ ಕೆ’ ಹೆಸರಿನ  ಪ್ರೊಫೈಲ್ ನಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ಗಳು ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ. ಈ ಬಗ್ಗೆ  ಅಶ್ಲೀಲ ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳೊಂದಿಗೆ ಮುಖವಾಡ ಧರಿಸಿದ ವ್ಯಕ್ತಿಯ ಫೋಟೋ ವೈರಲ್ ಆಗಿದ್ದು,  ದೆಹಲಿ ಪೊಲೀಸರು  ಬಂಧಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ  ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ಮೇಲೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ದೆಹಲಿ ಪೊಲೀಸರು ಬಂಧಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರ ಫೋಟೋ.

ಫ್ಯಾಕ್ಟ್: 02 ಜುಲೈ 2024 ರಂದು ದೆಹಲಿ ಪೊಲೀಸರು ದರೋಡೆಕೋರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೊಹಮ್ಮದ್ ಕಾಸಿಮ್ ಅನ್ನು  ಫೋಟೋ ತೋರಿಸುತ್ತದೆ. ಜುಲೈ 5, 2024 ರ ನಂತರ ಪ್ರಾರಂಭವಾದ ಸ್ಮೃತಿ ಸಿಂಗ್ ಅವರನ್ನು ಒಳಗೊಂಡ ಅಶ್ಲೀಲ ಕಾಮೆಂಟ್ ವಿವಾದಕ್ಕೂ  ಈ ಫೋಟೋಗೂ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಮೊದಲಿಗೆ, ನಾವು ಸ್ಮೃತಿ ಸಿಂಗ್ ಅವರ ಫೋಟೋದೊಂದಿಗೆ ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ, ಇದರ ಆಧಾರದ ಮೇಲೆ ಅವಹೇಳನಕಾರಿ ಕಾಮೆಂಟ್ ಮಾಡಲಾಗಿದೆ. 5 ಜುಲೈ 2024 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಶೌರ್ಯ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಮಾಧ್ಯಮದ ಪ್ರಕಾರ (ಇಲ್ಲಿ ಮತ್ತು ಇಲ್ಲಿ), ಈ ಸಮಾರಂಭ ಸಂಜೆ 5:00 ರ ನಂತರ (IST) ನಂತರ ನಡೆಯಿತು.

ಬಂಧಿತ ವ್ಯಕ್ತಿಯ ವೈರಲ್ ಫೋಟೋಗೆ ಸಂಬಂಧಿಸಿದಂತೆ, ರಿವರ್ಸ್ ಇಮೇಜ್ ಹುಡುಕಾಟವು 06 ಜುಲೈ 2024 ರಂದು ‘ಡಿಸಿಪಿ ಸೆಂಟ್ರಲ್ ದೆಹಲಿ’ ನ X ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಅದೇ ಫೋಟೋಗೆ ನಮ್ಮನ್ನು ಕರೆದೊಯ್ಯಿತು (ಆರ್ಕೈವ್). ಪೋಸ್ಟ್ನಲ್ಲಿರುವ ವ್ಯಕ್ತಿಯನ್ನು ಮೊಹಮ್ಮದ್ ಕಾಸಿಮ್ ಎಂದು ಗುರುತಿಸಲಾಗಿದೆ ಆದರೆ ಆತ ದರೋಡೆಕೋರನೆ ಹೊರತು ವೈರಲ್ ಕಾಮೆಂಟ್ ಗೆ ಸಂಬಂದಿಸಿದ ವ್ಯಕ್ತಿಯಲ್ಲ.

ಹೆಚ್ಚಿನ ಪರಿಶೀಲನೆಯು ನಮ್ಮನ್ನು ಯೂಟ್ಯೂಬ್ ಚಾನೆಲ್‌ಗಳಾದ ISD ಕ್ರೈಮ್ 24×7 ಮತ್ತು ಕಾಪ್ ನ್ಯೂಸ್ (ಆರ್ಕೈವ್) ಕರೆದೊಯಿತು. ಜುಲೈ 5, 2024 ರಂದು ಅದೇ ವ್ಯಕ್ತಿಯನ್ನು ಹೋಲುವ ವೀಡಿಯೊವನ್ನು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿವರಗಳ ಪ್ರಕಾರ, ಆರೋಪಿ ಮೊಹಮ್ಮದ್ ಕಾಸಿಂ 2018 ರಿಂದ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 02 ಜುಲೈ 2024 ರಂದು, ಹೌಜ್ ಖಾಜಿ ಪೊಲೀಸ್ ಠಾಣೆಯ ತಂಡವು ಕಾಸಿಂನನ್ನು ದೆಹಲಿಯ ಅವನ ನಿವಾಸದಿಂದ ಬಂಧಿಸಲಾಗಿದೆ. 

ಇದಲ್ಲದೆ, ವಿವಿಧ OSINT ಪರಿಕರಗಳು (ಇಲ್ಲಿ ಮತ್ತು ಇಲ್ಲಿ) ಕಾಸಿಮ್ ಒಳಗೊಂಡಿರುವ ಯೂಟ್ಯೂಬ್ ವೀಡಿಯೊವನ್ನು 05 ಜುಲೈ 2024 ರಂದು 11:32 AM IST ಕ್ಕೆ ಅಪ್‌ಲೋಡ್ ಮಾಡಲಾಗಿದೆ ಎಂದು ಸೂಚಿಸುತ್ತದೆ, ಆದರೆ ಈ ಸಮಾರಂಭ ಪ್ರಾರಂಭವಾಗಿದ್ದುಸುಮಾರು 5 ರಂದು. ಈ ಮೂಲಕ ಆತನ ಸ್ಮೃತಿ ಸಿಂಗ್ ಕುರಿತಾದ ಕಾಮೆಂಟ್ ಈ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ಸೂಚಿಸುತ್ತದೆ.  ದೆಹಲಿ ಪೊಲೀಸರು ಬಂಧಿಸಿರುವ ವ್ಯಕ್ತಿಯ ವೈರಲ್ ಫೋಟೋ ಈ ಅಶ್ಲೀಲ ಕಾಮೆಂಟ್ ವಿವಾದಕ್ಕೆ ಸಂಬಂಧಿಸಿಲ್ಲ ಎಂಬುವುದು ನಿಖರವಾಗಿ ತಿಳಿಯುತ್ತದೆ.

ಇದಲ್ಲದೆ, 08 ಜುಲೈ 2024 ರಂದು, ಸ್ಮೃತಿ ಸಿಂಗ್ ಅವರ ಫೋಟೋದಲ್ಲಿ ‘ಅಹ್ಮದ್ ಕೆ’ ಅವರು ಮಾಡಿದ ಅವಹೇಳನಕಾರಿ ಕಾಮೆಂಟ್ ಬಗ್ಗೆ ತಿಳಿದ ನಂತರ, ರಾಷ್ಟ್ರೀಯ ಮಹಿಳಾ ಆಯೋಗ (NCW) ದೆಹಲಿಯ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ನಿವೇದನೆಯನ್ನು ಮಾಡಿದ್ದಾರೆ. ವ್ಯಕ್ತಿಯ ವಿರುದ್ಧ ಫಸ್ಟ್ ಇನ್ಫಾರ್ಮಶನ್ ರಿಪೋರ್ಟ್ (ಎಫ್‌ಐಆರ್) ಸಲ್ಲಿಸಿ ಆತನನ್ನು ಬಂಧಿಸಲಾಗಿದೆ.  ಆಯೋಗವು ಈ ವಿಷಯದ ಬಗ್ಗೆ ನ್ಯಾಯಯುತ ಮತ್ತು ಸಮಯೋಚಿತ ತನಿಖೆಗೆ ಒತ್ತಾಯಿಸಿದೆ ಮತ್ತು ಮೂರು ದಿನಗಳಲ್ಲಿ ವಿವರವಾದ ಕ್ರಮ-ತೆಗೆದುಕೊಂಡ ವರದಿಯನ್ನು ಕೋರಿದೆ. ಪ್ರಕರಣದ ಸ್ಥಿತಿಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದ್ದರಿಂದ, ಈ ವಿಷಯದ ಬಗ್ಗೆ FACTLY ದೆಹಲಿ ಪೊಲೀಸರನ್ನು ಸಂಪರ್ಕಿಸಿದೆ. ಅಗತ್ಯವಿರುವ ಮಾಹಿತಿಯನ್ನು ಪಡೆದ ನಂತರ ಈ ಲೇಖನವನ್ನು ನವೀಕರಿಸಲಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಪೊಲೀಸರು ಸ್ಮೃತಿ ಸಿಂಗ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದನ್ನು ತಪ್ಪಾಗಿ ಫೋಟೋಗೆ ಮತ್ತು  ಸಂಬಂಧವಿಲ್ಲದ ಫೋಟೋಗೆ ಲಿಂಕ್ ಮಾಡಿ ಶೇರ್ ಮಾಡಲಾಗಿದೆ.

Share.

Comments are closed.

scroll