Fake News - Kannada
 

ಜ್ಞಾನವಾಪಿ ಮಸೀದಿಯಲ್ಲಿ ಕಂಡುಬರುವ ‘ಶಿವಲಿಂಗ’ದ ದೃಶ್ಯಗಳೆಂದು ಸಂಬಂಧವಿಲ್ಲದ ಚಿತ್ರಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯ ವೇಳೆ ಕಂಡುಬಂದ ‘ಶಿವಲಿಂಗ’ ಎಂದು ಹೇಳಲಾದ ಕೆಲವು ಪೋಟೋ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ವಾರಾಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದ ಸ್ಥಳವನ್ನು ಬಂದ್ ಮಾಡಿದ್ದು, ಸಮೀಕ್ಷೆ ನಡೆಸಲು ಕೋರ್ಟ್ ನೇಮಿಸಿದ್ದ ವಕೀಲ ಕಮಿಷನರ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆದಿದ್ದು ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ‘ಲೈವ್ ಲಾ’ ಸುದ್ದಿ ವರದಿ ಮಾಡಿದೆ” ಎಂದು ಹಲವು ಫೋಟೊಗಳನ್ನು ಷೇರ್ ಮಾಡಲಾಗುತ್ತಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚಿನ ಸಮೀಕ್ಷೆಯ ಸಂದರ್ಭದಲ್ಲಿ ಕಂಡುಬಂದಿರುವ ‘ಶಿವಲಿಂಗ’ದ ಫೋಟೋಗಳು.

ನಿಜಾಂಶ : ಪೋಸ್ಟ್ ಮಾಡಿದ ಫೋಟೋಗಳು ವಾರಣಾಸಿ (ಯುಪಿ) ಯ ಜ್ಞಾನವಾಪಿ ಮಸೀದಿಯಲ್ಲಿ ಕಂಡುಬಂದಿರುವ ಶಿವಲಿಂಗದ ಫೋಟೋ ಅಲ್ಲ.  ಬೃಹತ್ ಶಿವಲಿಂಗ ಫೋಟೋ ಒಡಿಶಾದ ಬಾಬಾ ಭುಸಂದೇಶ್ವರ ದೇವಸ್ಥಾನದದ್ದಾಗಿದ್ದರೆ, ಕಾರಂಜಿ ಫೋಟೋವನ್ನು ರಾಜಸ್ಥಾನದ ಅಜ್ಮೀರ್ ಶರೀಫ್ ದರ್ಗಾದಿಂದ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯು ತಪ್ಪಾಗಿದೆ.

ಫೋಟೋ 1:

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಫೋಟೋವನ್ನು ರನ್ ಮಾಡಿದಾಗ, ಫೋಟೋ ಒಡಿಶಾದಲ್ಲಿರುವ ಬಾಬಾ ಭುಸಂದೇಶ್ವರ ದೇವಾಲಯಕ್ಕೆ ಸಂಬಂಧಿಸಿದೆ ಎಂದು ಕಂಡುಬಂದಿದೆ. ಆ ದೇವಾಲಯದ ಇತರ ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾಗಿ, ಪೋಸ್ಟ್ ಮಾಡಿದ ಫೋಟೋದಲ್ಲಿ ಜ್ಞಾನವಾಪಿ ಮಸೀದಿಯಲ್ಲಿರುವ ‘ಶಿವಲಿಂಗ’ ಕಾಣಿಸುತ್ತಿಲ್ಲ.

ಫೋಟೋ 2:

ಜ್ಞಾನವಾಪಿ ಮಸೀದಿಯಲ್ಲಿರುವ ಕಾರಂಜಿಯನ್ನು ಶಿವಲಿಂಗ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ  ತಪ್ಪಾಗಿ ಭಾವಿಸಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಆದರೆ ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡುವಾಗ, ಪೋಸ್ಟ್ ನಲ್ಲಿ ಮಾಡಿದ ಫೋಟೋವು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿಲ್ಲ ಎಂದು  ಕಂಡುಬಂದಿದೆ. ‘ಅಲಾಮಿ’ ಸ್ಟಾಕ್ ವೆಬ್‌ಸೈಟ್‌ನಲ್ಲಿ, ಅದೇ ಫೋಟೋವನ್ನು ಈ ಕೆಳಗಿನ ವಿವರಣೆಯೊಂದಿಗೆ ಕಾಣಬಹುದು – ರಾಜಸ್ಥಾನದ “ಅಜ್ಮೀರ್ ಷರೀಫ್ ದರ್ಗಾದಲ್ಲಿರುವ “ವ್ಯಭಿಚಾರ ಕೊಳ” ಎಂಬ ಹೆಸರಿನಿಂದ ಕರೆಯಲ್ಪಡುವ ಸ್ಥಳವಾಗಿದೆ. ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ವಸ್ತು ಕಾರಂಜಿಯೇ ಹೊರತು ‘ಶಿವಲಿಂಗ’ ಅಲ್ಲ, ಪೋಸ್ಟ್ ಮಾಡಿರುವ ಫೋಟೋ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿಲ್ಲ ಎಂದು ಜ್ಞಾನವಾಪಿ ಮಸೀದಿ ಪರ ವಕೀಲರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಫೋಟೋ 3:

ಜ್ಞಾನವಾಪಿ ಮಸೀದಿಯಲ್ಲಿರುವ ಕಾರಂಜಿಯನ್ನು ‘ಶಿವಲಿಂಗ’ ಎಂದು ತಪ್ಪಾಗಿ ಭಾವಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಮತ್ತೊಂದು ಫೋಟೋವನ್ನು ಸಹ ಹಂಚಿಕೊಳ್ಳಲಾಗುತ್ತಿದೆ. ಆದರೆ, ಫೋಟೋ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಈ ದೃಶ್ಯವನ್ನು ಆಗ್ರಾ (ಉತ್ತರ ಪ್ರದೇಶ) ದಲ್ಲಿರುವ ‘ಟಾಂಬ್ ಆಫ್ ಇತಿಮಾದ್-ಉದ್-ದೌಲಾ‘ದ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಕಾಣಬಹುದು.

ಫೋಟೋ4:

ಈ ಫೋಟೋ ಕೂಡ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿಲ್ಲ. ವಾಸ್ತವವಾಗಿ, ಈ ಫೋಟೋ ಭಾರತದಲ್ಲ ಇದು ವಿಯೆಟ್ನಾಂನಲ್ಲಿ ಕಂಡುಬರುವ ‘ಶಿವಲಿಂಗ’ ಎಂದು ತಿಳಿದುಬಂದಿದೆ. ಫೋಟೋದಲ್ಲಿರುವ ‘ಶಿವಲಿಂಗ’ಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಭಾರತದ ಮಂತ್ರಿಗಳು ಮಾಡಿದ ಕೆಲವು ಟ್ವೀಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಶೇರ್ ಆಗುತ್ತಿದೆ. ವೀಡಿಯೊದ ನಿಖರವಾದ ಸ್ಥಳವನ್ನು ನಾವು ಕಂಡುಹಿಡಿಯಲಾಗದಿದ್ದರೂ, ವೀಡಿಯೊ ಕನಿಷ್ಠ ಒಂದು ವರ್ಷ ಹಳೆಯದು ಎಂದು ಕಂಡುಬಂದಿದೆ. ಹಾಗಾಗಿ ಇತ್ತೀಚೆಗಷ್ಟೇ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆದಿರುವ ಹಿನ್ನೆಲೆಯಲ್ಲಿ ಹಳೆಯ ವಿಡಿಯೋವೊಂದು ಶೇರ್ ಆಗುತ್ತಿದೆ.

ಫೋಟೋ 5:

ಜ್ಞಾನವಾಪಿ ಮಸೀದಿಯಲ್ಲಿರುವ ಕಾರಂಜಿಯನ್ನು ಇದು ‘ಶಿವಲಿಂಗ’ ಎಂದು ತಪ್ಪಾಗಿ ಗ್ರಹಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆದರೂ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‍ ಮಾಡಿದ ಫೋಟೋದಲ್ಲಿ ಇರುವುದು “ನಖೋಡಾ ಮಸೀದಿಯಲ್ಲಿ ಕಾಣುವ ನೀರಿನ ಕೊಳ”  ಎಂದು ಕಂಡುಬಂದಿದೆ.. ನಖೋಡಾ ಮಸೀದಿಯು ಕೋಲ್ಕತ್ತಾದಲ್ಲಿದ್ದು (ಪಶ್ಚಿಮ ಬಂಗಾಳ)  ಅದರ ಇತರ ಬೇರೆ ದೃಶ್ಯಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜ್ಞಾನವಾಪಿ ಮಸೀದಿಯಲ್ಲಿ ಕಂಡುಬರುವ ‘ಶಿವಲಿಂಗ’ದ ದೃಶ್ಯಗಳೆಂದು ಸಂಬಂಧವಿಲ್ಲದ ಚಿತ್ರಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll