Fake News - Kannada
 

ಬಾಂಗ್ಲಾದೇಶದಲ್ಲಿ ಹುಲಿ ಮಾರುಕಟ್ಟೆ ಇದೆ ಎಂಬ ಈ ವೀಡಿಯೊ AI ಬಳಸಿ ರಚಿಸಲಾಗಿದೆ

0

ರಿಪೋರ್ಟ್ “ಹುಲಿ ಮಾರುಕಟ್ಟೆ”ಯನ್ನು ವರದಿ ಮಾಡುತ್ತಿರುವ ವೀಡಿಯೊ (ಇಲ್ಲಿ) ವೈರಲ್ ಆಗುತ್ತಿದೆ, ಅಲ್ಲಿ ಹುಲಿಗಳನ್ನು ಮಾರಾಟ ಮಾಡಲು ಜನರು ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದು. ಈ ಮಾರುಕಟ್ಟೆ ಬಾಂಗ್ಲಾದೇಶದ ಬಾಗರ್‌ಹ್ಯಾಟ್‌ನಲ್ಲಿದ್ದು, ಅಲ್ಲಿ ರಾಯಲ್ ಬಂಗಾಳ ಹುಲಿಗಳನ್ನು ಮಾರಾಟ ಮಾಡಲಾಗುತ್ತದೆ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.  

ಕ್ಲೇಮ್: ವೈರಲ್ ವೀಡಿಯೊ ಬಾಂಗ್ಲಾದೇಶದ ನಿಜವಾದ ಹುಲಿ ಮಾರುಕಟ್ಟೆಯ ದೃಶ್ಯಗಳನ್ನು ತೋರಿಸುತ್ತದೆ.

ಫ್ಯಾಕ್ಟ್: ವೀಡಿಯೊದಲ್ಲಿ ನಿಜವಾದ ಹುಲಿ ಮಾರುಕಟ್ಟೆಯನ್ನು ಚಿತ್ರಿಸುವುದಿಲ್ಲ. ಇದನ್ನು ಗೂಗಲ್ ನ ‘Veo’ AI ಟೂಲ್ಸ್  ಬಳಸಿ ರಚಿಸಲಾಗಿದೆ ಮತ್ತು ಹಲವಾರು AI ಪತ್ತೆ ಪರಿಕರಗಳು ಇದು AI-ರಚಿತವಾಗಿದೆ ಎಂದು ದೃಢಪಡಿಸಿವೆ. ಆದ್ದರಿಂದ, ಈ ಕ್ಲೇಮ್ ತಪ್ಪು.

ಸತ್ಯವನ್ನು ಕಂಡುಹಿಡಿಯಲು, ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ ಮತ್ತು ಹಲವಾರು ಬದಲಾವಣೆಯನ್ನು ಗಮನಿಸಿದ್ದೇವೆ. ಹುಲಿಗಳು ಮತ್ತು ಜನರ ಮುಖಭಾವಗಳು ಸ್ಥಳಗಳಲ್ಲಿ ಅಸ್ವಾಭಾವಿಕವಾಗಿ ಕಾಣಿಸಿಕೊಂಡವು – ಇದು ಡೀಪ್‌ಫೇಕ್ ಅಥವಾ AI-ರಚಿತ ವಿಷಯದಲ್ಲಿ (ಇಲ್ಲಿ ಮತ್ತು ಇಲ್ಲಿ) ಕಂಡುಬರುವ ಸಾಮಾನ್ಯ ಲಕ್ಷಣ.

ತದನಂತರ ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಅದೇ ವೀಡಿಯೊದ ಹಲವಾರು ವಿಸ್ತೃತ ಆವೃತ್ತಿಗಳಿಗೆ ನಮ್ಮನ್ನು ಕರೆದೊಯ್ಯಿತು. ಇವುಗಳಲ್ಲಿ ವೀಡಿಯೊ AI- ರಚಿತವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಂಚಿಕೊಂಡ ಅದೇ ಕ್ಲಿಪ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ, ಅವುಗಳಲ್ಲಿ ಹಲವು ವೀಡಿಯೊವನ್ನು AI- ರಚಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಹೆಚ್ಚುವರಿಯಾಗಿ, ಕ್ರಾಪ್ ಮಾಡದ ವೀಡಿಯೊದ ಕೆಳಗಿನ ಬಲ ಮೂಲೆಯಲ್ಲಿ (ಇಲ್ಲಿ, ಮತ್ತು ಇಲ್ಲಿ) “Veo” ನ ವಾಟರ್‌ಮಾರ್ಕ್ ಅನ್ನು ನಾವು ನೋಡಬಹುದು. ಈ ವಾಟರ್‌ಮಾರ್ಕ್ ವೈರಲ್ ವೀಡಿಯೊವನ್ನು ಗೂಗಲ್ ನ ‘Veo’ AI ಮಾದರಿಯನ್ನು ಬಳಸಿಕೊಂಡು ರಚಿಸಲಾಗಿದೆ ಎಂದು ಖಚಿತಪಡಿಸುತ್ತದೆ (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ).

ಇದಲ್ಲದೆ, ನಾವು ಗೂಗಲ್ ನ ‘SynthID’ ಉಪಕರಣವನ್ನು ಬಳಸಿದ್ದೇವೆ, ಇದು AI ಮಾದರಿಗಳಿಂದ ಉತ್ಪತ್ತಿಯಾಗುವ ವಿಷಯವನ್ನು ಪತ್ತೆ ಮಾಡುತ್ತದೆ ಮತ್ತು ವೀಡಿಯೊವನ್ನು Google AI ಬಳಸಿ ರಚಿಸಲಾಗಿದೆ ಎಂದು ಅದು ದೃಢಪಡಿಸಿದೆ.

ನಾವು ಹೈವ್‌ನಂತಹ AI ಪತ್ತೆ ಪರಿಕರಗಳನ್ನು ಸಹ ಬಳಸಿದ್ದೇವೆ, ಇದು ವೀಡಿಯೊ 89%  AI- ರಚಿತವಾಗಿದೆ  ಎಂದು ತೋರಿಸಿದೆ. ಇತರ ಸುಪ್ಪೋರ್ಟಿವ್ ಪುರಾವೆಗಳ ಆಧಾರದ ಮೇಲೆ, ವೀಡಿಯೊ AI ಬಳಸಿ ರಚಿಸಲಾದ ಡೀಪ್‌ಫೇಕ್ ಎಂದು ದೃಢಪಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಹುಲಿ ಮಾರುಕಟ್ಟೆಯನ್ನು ಎನ್ನುವ ವೀಡಿಯೊವು AI ಬಳಸಿ ರಚಿಸಲಾಗಿದೆ. 

Share.

Comments are closed.

scroll