ನೂಡಲ್ಸ್ ಉತ್ಪಾದನೆಯ ದೃಶ್ಯಗಳನ್ನು ತೋರಿಸಲು ವೀಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಇದರ ಹಿಂದಿನ ಸತ್ಯತೆಯನ್ನು ತಿಳಿಯೋಣ.
ಕ್ಲೇಮ್: ಈ ವೀಡಿಯೊ ನೂಡಲ್ಸ್ ಉತ್ಪಾದನೆಗೆ ಸಂಬಂಧಿಸಿದ ದೃಶ್ಯಗಳನ್ನು ತೋರಿಸುತ್ತದೆ.
ಫ್ಯಾಕ್ಟ್: ಈ ವೀಡಿಯೊ ನೂಡಲ್ ತಯಾರಿಕೆಯನ್ನು ತೋರಿಸುತ್ತಿಲ್ಲ. ಬದಲಾಗಿ ಇದು ಸಾಬೂನು ತಯಾರಿಕೆಯ ದೃಶ್ಯಗಳನ್ನು ತೋರಿಸುತ್ತಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್-ಇಮೇಜ್ ಮಾಡಿ ನೋಡಿದಾಗ, A2Z ಸ್ಕಿಲ್ಸ್ ಎಂಬ ಬಹ್ರೇನ್ ಮೂಲದ YouTube ಚಾನಲ್‌ನಲ್ಲಿ ನಾವು ಇದೇ ರೀತಿಯ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಈ ಚಾನಲ್ ಮ್ಯಾನುಫ್ಯಾಕ್ಚರಿಂಗ್ ಕಂಟೆಂಟ್ ಅನ್ನು ಪ್ರಸಾರ ಮಾಡುತ್ತದೆ. ಈ YouTube ಶಾರ್ಟ್ ‘CV ಸೋಪ್ ಮೇಕಿಂಗ್ ಪ್ರಕ್ರಿಯೆ’ ಎನ್ನುವ ವೀಡಿಯೊ ಲೇಬಲ್ವನ್ನು ಆಗಸ್ಟ್ 2024 ರಲ್ಲಿ ಮಾಡಿದೆ.
ಇದಲ್ಲದೆ, ವೈರಲ್ ವೀಡಿಯೊದಲ್ಲಿರುವ ಜನರು ಅದೇ ಚಾನಲ್‌ನಲ್ಲಿ ಮತ್ತೊಂದು ರೀತಿಯ ವೀಡಿಯೊವನ್ನು ಹಂಚಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಸೋಪ್ ತಯಾರಿಕೆ ಪ್ರಕ್ರಿಯೆಯನ್ನು ತೋರಿಸುವ ಈ ವೀಡಿಯೊವನ್ನು ಈ ಚಾನಲ್‌ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಅಲ್ ಸ್ಕಿಲ್ಸ್ ಎಂಬ ಯೂಟ್ಯೂಬ್ ಚಾನೆಲ್ ಕೂಡ ಇದೇ ರೀತಿಯ ವೀಡಿಯೊವನ್ನು ಸೋಪ್ ಉತ್ಪಾದನೆಯ ಪ್ರಕ್ರಿಯೆ ಎಂದು ತಿಳಿಸಿರುವುದನ್ನು ನಾವು ಗಮನಿಸಿದ್ದೇವೆ (ಇಲ್ಲಿ ಮತ್ತು ಇಲ್ಲಿ) ಅಂತಹ ವೀಡಿಯೊಗಳನ್ನು ಚಾನಲ್‌ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಸಾಬೂನು ತಯಾರಿಕೆಯ ವೀಡಿಯೋಗಳಿಗಾಗಿ ಮತ್ತಷ್ಟು ಹುಡುಕುತ್ತಿರುವಾಗ, ಸಾಬೂನು ತಯಾರಿಕೆಯ ಪ್ರಕ್ರಿಯೆಯನ್ನು ತೋರಿಸುವ (ಇಲ್ಲಿ ಮತ್ತು ಇಲ್ಲಿ) ಇದೇ ರೀತಿಯ ಇನ್ನೂ ಹೆಚ್ಚಿನ ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ. ನೂಡಲ್ಸ್ ಉತ್ಪಾದಿಸುವ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಕೊನೆಯದಾಗಿ ಹೇಳುವುದಾದರೆ, ಈ ವೀಡಿಯೊ ನೂಡಲ್ ತಯಾರಿಕೆಯ ಬಗ್ಗೆ ಅಲ್ಲ ಬದಲಾಗಿ ಸೋಪ್ ತಯಾರಿಕೆಯ ಕುರಿತಾಗಿದೆ.