ಬೆಂಗಳೂರಿನ ಪಾಪ್‌ಕಾರ್ನ್ ಮಾರಾಟಗಾರ ಉಪ್ಪಿನ ಟೇಸ್ಟ್ ಅನ್ನು ಸೇರಿಸಲು ಉಪ್ಪಿನ ಬದಲು ಮೂತ್ರವನ್ನು ಪಾಪ್‌ಕಾರ್ನ್ಗೆ ಸೇರಿಸಿ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾನೆ ಎಂಬ ವ್ಯಾಖ್ಯಾನದೊಂದಿಗೆ ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಮುಸಲ್ಮಾನ ಪಾಪ್‌ಕಾರ್ನ್ ಮಾರಾಟಗಾರ ಉಪ್ಪಿನ ಸುವಾಸನೆ ಬರಲು ತನ್ನ ಮೂತ್ರವನ್ನು ಸೇರಿಸಿ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಫ್ಯಾಕ್ಟ್: ಜೂನ್ 2022 ರಲ್ಲಿ ಪಾಪ್‌ಕಾರ್ನ್ ತಯಾರಿಸಲು ಬಳಸುವ ಅಡುಗೆ ಎಣ್ಣೆಯಲ್ಲಿ ಉಗುಳಿದ್ದಕ್ಕಾಗಿ ನವಾಜ್ ಪಾಶಾ ಎಂಬ ಪಾಪ್‌ಕಾರ್ನ್ ಮಾರಾಟಗಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ನಂತರ, ಆತ ಎಣ್ಣೆಯಲ್ಲಿ ಉಗುಳಿಲ್ಲ ಎಂದು ತಿಳಿದು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಉಪ್ಪಿನ ಬದಲು ಮೂತ್ರವನ್ನು ಬಳಸಿ ಪಾಪ್‌ಕಾರ್ನ್ ತಯಾರಿಸಿದ್ದಕ್ಕಾಗಿ ಆತನ ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಕುರಿತು ಹೆಚ್ಚಿನ ವಿವರಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ಮೂಲಕ ತಿಳಿದುಬಂದದಿರುವುದೇನೆಂದರೆ ಈ ವಿಡಿಯೋ ಜೂನ್ 2022ಲೇ ವರದಿಯಾಗಿದ್ದು, ಹಲವಾರು ಸುದ್ದಿ ವಾಹಿನಿಗಳು ಇದನ್ನು ವರದಿ ಮಾಡಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).
ಸುದ್ದಿ ವರದಿಯ ಪ್ರಕಾರ, ಪಾಪ್‌ಕಾರ್ನ್ ಮಾರಾಟಗಾರನಾದ ನವಾಜ್ ಪಾಷಾ ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನ ಸ್ಟಾಲ್‌ನಲ್ಲಿ ಅಡುಗೆ ಎಣ್ಣೆಗೆ ಉಗುಳಿದ್ದಾರೆ (ಪೋಸ್ಟ್ ಹೇಳುವಂತೆ ಪಾಪ್‌ಕಾರ್ನ್ ಮಾಡಲು ಮೂತ್ರವನ್ನು ಬಳಸುತ್ತಿಲ್ಲ) ಎಂದು ಕೆಲವರು ಆರೋಪಿಸಿದ್ದಾರೆ.
ತದನಂತರ, ಪೊಲೀಸರು ನವಾಜ್‌ನನ್ನು ಕಸ್ಟಡಿಗೆ ತೆಗೆದುಕೊಂಡು (ಎಫ್‌ಐಆರ್ ಪ್ರತಿ) ಆತ ಪಾಪ್‌ಕಾರ್ನ್ ತಯಾರಿಸಲು ಇಟ್ಟುಕೊಂಡಿದ್ದ ಎಣ್ಣೆಯ ಬಾಟಲಿ ಮತ್ತು ಪಾಪ್‌ಕಾರ್ನ್ ಯಂತ್ರವನ್ನೂ ವಶಪಡಿಸಿಕೊಂಡಿದ್ದಾರೆ.
ಆದಾಗ್ಯೂ, ತಾನು ಬಾಟಲಿಗೆ ಎಣ್ಣೆ ಸುರಿಯಲು ಎಣ್ಣೆ ಪ್ಯಾಕೆಟ್ ಹರಿದು ಆ ತುಂಡನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದೆ ಎಂದು ನವಾಜ್ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ತನ್ನ ಬದಿಯ ಹೇಳಿಕೆಯನ್ನು ನೀಡಿದ ನವಾಜ್ ತಾನು ಆ ರೀತಿಯ ಕೆಲಸವನ್ನು ಮಾಡಿಲ್ಲ ಎಂದಿದ್ದಾರೆ.
ವೈರಲ್ ವಿಡಿಯೋದಲ್ಲಿರುವ ಬಾಟಲಿಯಲ್ಲಿ ಮೂತ್ರ ಇರಲಿಲ್ಲ, ಆದರೆ ಎಣ್ಣೆ ಇತ್ತು ಎಂಬುವುದು ತನಿಖೆಯ ನಂತರ ತಿಳಿದು ಬಂದಿದೆ. ಈ ಮೂಲಕ ನವಾಜ್ ಉಗುಳಿಲ್ಲ ಎಂಬುವುದು ದೃಢಪಟ್ಟ ನಂತರ ಪೊಲೀಸರು ಆತನನ್ನು ಜಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಕೊನೆಯದಾಗಿ ಹೇಳುವುದಾದರೆ, ಪಾಪ್‌ಕಾರ್ನ್ ಮಾರಾಟಗಾರ ನವಾಜ್ನನ್ನು ಪಾಪ್‌ಕಾರ್ನ್‌ನಲ್ಲಿ ಮೂತ್ರ ಸೇರಿಸಿದಕ್ಕಾಗಿ ಅಲ್ಲ, ಬದಲಾಗಿ ಅಡುಗೆ ಎಣ್ಣೆಯಲ್ಲಿ ಉಗುಳಿದ್ದಾನೆ ಎಂಬ ಅನುಮಾನದ ಮೇಲೆ ಬಂಧಿಸಲಾಯಿತು.