Fake News - Kannada
 

ಪಾಕಿಸ್ತಾನದಲ್ಲಿ ಭಾರತದ ಧ್ವಜಕ್ಕೆ ಅವಮಾನ ಮಾಡಿದ ವಿಶುವಲ್ ಅನ್ನು ಕೇರಳದ ಘಟನೆ ಎಂದು ಹೇಳಲಾಗಿದೆ

0

ಭಾರತದ ರಾಷ್ಟ್ರಧ್ವಜವನ್ನು ರಸ್ತೆಯ ಮೇಲೆ ಇರಿಸಿ ಅದರ ಮೇಲೆ ವಾಹನಗಳು ಚಾಲನೆ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತದ ಧ್ವಜಕ್ಕೆ ಅಪಮಾನವಾಗುತ್ತಿರುವಾಗ, ರಸ್ತೆಬದಿಯಲ್ಲಿದ್ದವರು ಪಾಕಿಸ್ತಾನದ ಧ್ವಜ ಹಿಡಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ, ಈ ಘಟನೆ ನಡೆದಿರುವುದು ಕೇರಳದಲ್ಲಿ ಎಂಬಂತೆ ಶೇರ್ ಮಾಡಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಕೇರಳದಲ್ಲಿ ಭಾರತದ ಧ್ವಜವನ್ನು ರಸ್ತೆಗೆ ಎಸೆದು ಅದರ ಮೇಲೆ ವಾಹನಗಳು ಚಲಿಸುತಿದೆ.

ಫ್ಯಾಕ್ಟ್: ಈ ಕುರಿತು ಯಾವುದೇ ಸುದ್ದಿ ವಾಹಿನಿಯು ಕೇರಳದಲ್ಲಿ ವರದಿ ಮಾಡಿಲ್ಲ. ಆದರೆ  ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿ ಎಂಬುದು ಸ್ಪಷ್ಟವಾಗುತ್ತದೆ. ವೀಡಿಯೊದಲ್ಲಿ ಕಂಡುಬರುವ ಸ್ಥಳಗಳು ಕರಾಚಿಯ ದೆಹಲಿ ಮರ್ಕೆಂಟೈಲ್ ಸೊಸೈಟಿ ಪ್ರದೇಶ ಎಂದು ಗೂಗಲ್ ಮ್ಯಾಪ್ ತಿಳಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಕೇರಳದಲ್ಲಿ ಇಂತಹ ಘಟನೆಗಳು ವರದಿಯಾಗಿಲ್ಲ. ಇನ್ನು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ ಎಂಬುದಕ್ಕೆ ಪುಷ್ಟಿನೀಡುತ್ತಿದೆ.

ವೈರಲ್ ವೀಡಿಯೊದಲ್ಲಿ, 3:38 ಟೈಮ್‌ಸ್ಟ್ಯಾಂಪ್‌ನಲ್ಲಿ, ‘ದಿ ಹುನಾರ್ ಫೌಂಡೇಶನ್’ ಎಂದು ಬರೆಯಲಾದ ಬಿಳಿ ವ್ಯಾನ್ ಹಾದುಹೋಗುವುದನ್ನು ಕಾಣಬಹುದು. ಇದರ ಆಧಾರದ ಮೇಲೆ, ‘ದಿ ಹುನಾರ್ ಫೌಂಡೇಶನ್‘ ವೆಬ್‌ಸೈಟ್‌ನಲ್ಲಿ ಹುಡುಕಿದಾಗ ಈ ಸಂಸ್ಥೆಯು ಕರಾಚಿಯಿಂದ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸುತ್ತದೆ. ಈ ಸಂಸ್ಥೆಯು ಪಾಕಿಸ್ತಾನದ ಯುವಕರಿಗೆ ಕೌಶಲ್ಯ ಅಭಿವೃದ್ಧಿ/ತಾಂತ್ರಿಕ ತರಬೇತಿ ಮತ್ತು ನೈಪುಣ್ಯತೆಯನ್ನು ನೀಡುತ್ತದೆ. ಕರಾಚಿಯ ಪ್ರಿಂಟಿಂಗ್ ಶಾಪ್‌ನ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ವಾಹನಗಳ ಫೋಟೋಗಳನ್ನು ಕಾಣಬಹುದು.

ವೀಡಿಯೋದಲ್ಲಿ 3:44 ಸೆಕೆಂಡ್ನಲ್ಲಿ, ಹಳದಿ ನಂಬರ್ ಪ್ಲೇಟ್‌ನ ಮೇಲೆ ‘BFK-625’ ಎಂದು ಬರೆದಿರುವ ಕಾರನ್ನು ನೋಡಬಹುದು. ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ಇದೇ ರೀತಿಯ ನಂಬರ್ ಪ್ಲೇಟ್‌ಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ವೈರಲ್ ವೀಡಿಯೊದಲ್ಲಿರುವಂತೆಯೇ ವಾಹನದ ನಂಬರ್ ಪ್ಲೇಟ್‌ಗಳ ಚಿತ್ರಗಳನ್ನು ಪ್ರಕಟಿಸಿದ ಸುದ್ದಿ ಲೇಖನಗಳನ್ನು ಇಲ್ಲಿ ಅಲ್ಲಿ ಕಾಣಬಹುದಾಗಿದೆ.

ವೀಡಿಯೊದ ಆರಂಭದಲ್ಲಿ, ‘ಸನಮ್’ ಹೆಸರಿನ ಅಂಗಡಿಯನ್ನು ನೋಡಬಹುದು. ಇದರ ಆಧಾರದ ಮೇಲೆ, ಗೂಗ್ಲ್ನಲ್ಲಿ ಹುಡುಕಾಡಿದಾಗ ನಮಗೆ ಎರಡು ವೆಬ್‌ಸೈಟ್‌ಗಳನ್ನು ಕಂಡುಹಿಡಿದಿದೆ. ಅದು ಕರಾಚಿಯಲ್ಲಿ (ಇಲ್ಲಿ ಮತ್ತು ಇಲ್ಲಿ) ‘ಸನಮ್’ ಹೆಸರಿರುವ  ಅಂಗಡಿಯ ಸ್ಥಳವನ್ನು ಪಟ್ಟಿ ಮಾಡಿದೆ. ಈ ವೆಬ್‌ಸೈಟ್‌ಗಳಲ್ಲಿನ ‘ಸನಮ್’ ಲೋಗೋ ನಾವು ವೀಡಿಯೊದಲ್ಲಿ ನೋಡುತ್ತಿರುವಂತೆಯೇ ಇರುವುದನ್ನು ಗಮನಿಸಬಹುದು.

ಮೇಲೆ ತಿಳಿಸಿದ ವೆಬ್‌ಸೈಟ್‌ಗಳ ಪ್ರಕಾರ ಅಂಗಡಿಯು ಕರಾಚಿಯಲ್ಲಿರುವ ತಾರಿಕ್ ರಸ್ತೆ, ದೆಹಲಿ ಮರ್ಕೆಂಟೈಲ್ ಸೊಸೈಟಿಯಲ್ಲಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಗೂಗಲ್ ಮ್ಯಾಪ್ ನಲ್ಲಿ ಹುಡುಕಿದಾಗ ಅದೇ ಹೆಸರಿನ ಅಂಗಡಿಯೊಂದು ಕರಾಚಿಯಲ್ಲಿ ಪತ್ತೆಯಾಗಿದೆ. ಗೂಗಲ್ ಸ್ಟ್ರೀಟ್ ವ್ಯೂ ಮೂಲಕ ನೋಡಿದಾಗ, ಅಂಗಡಿಯ ಚುಪ್ಪಕ್ಕಳ ಪ್ರದೇಶವು ವೈರಲ್ ವೀಡಿಯೊದಲ್ಲಿ ಕಂಡುಬರುವ ಪ್ರದೇಶದಂತೆ ಭಾಸವಾಗುತ್ತದೆ. ಹಾಗಾಗಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಘಟನೆಯು ಕರಾಚಿಯಲ್ಲಿ ನಡೆದಿದೆಯೇ ಹೊರತು ಕೇರಳದಲ್ಲಿ ಅಲ್ಲ ಎಂಬುವುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಪಾಕಿಸ್ತಾನದ ಕರಾಚಿಯಲ್ಲಿಭಾರತ ಧ್ವಜವನ್ನು ಅವಮಾನಗೊಳಿಸಿದ ಘಟನೆಯನ್ನು ಕೇರಳದಲ್ಲಿ ಜರಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

Share.

Comments are closed.

scroll