“ಭಾರತ ಗಾಢ ನಿದ್ರೆಯಲ್ಲಿದೆ. ಇಸ್ಲಾಂ ಧರ್ಮವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಸಾವಿರಾರು ಮುಸ್ಲಿಮರು ಪೊಲೀಸ್, ಸೈನ್ಯ ಮತ್ತು ಅಧಿಕಾರಿಗಳಾಗಿ ಪ್ರಮುಖ ಸಂಸ್ಥೆಗಳಿಗೆ ಪ್ರವೇಶಿಸಿದ್ದಾರೆ. ಇಸ್ಲಾಂ ಭಾರತದಲ್ಲಿ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ಪ್ರಸ್ತುತ ಭಾರತ ಅಳಿವಿನಂಚಿನಲ್ಲಿದೆ. ಒಂದು ರಾಷ್ಟ್ರ ಹುಟ್ಟಬೇಕಾದರೆ ಎಷ್ಟು ಸಮಯಬೇಕೋ ಅದು ನಾಶವಾಗಲು ಅಷ್ಟೇ ಸಮಯ ಬೇಕಾಗುತ್ತದೆ. ಆದರೆ ಭಾರತ ಅಷ್ಟು ಬೇಗ ಕೊನೆಗಾಣುವುದಿಲ್ಲ. ಮುಸ್ಲಿಮರಾದ ನಾವು ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಇದಲ್ಲ ನಾಳೆ ಭಾರತ ಖಂಡಿತವಾಗಿಯೂ ನಾಶವಾಗುತ್ತದೆ”, ಎಂದು ಸೌದಿ ಪ್ರೊಫೆಸರ್ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಹೇಳಿದ್ದಾರೆ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಎಡೆಯಿಲ್ಲದೆ ಹರಿದಾಡುತ್ತಿದೆ. ಪೋಸ್ಟ್‌ನ ಪ್ರಕಾರ, ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅವರು ಪ್ರಸ್ತುತ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು 25% ಕ್ಕಿಂತ ಹೆಚ್ಚಿದ್ದು, 2050 ರ ವೇಳೆಗೆ ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಹಾಗಾದರೆ ಈ ಲೇಖನದ ಮೂಲಕ ಈ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಸೌದಿ ಪ್ರೊಫೆಸರ್ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಭಾರತದಲ್ಲಿ ಇಸ್ಲಾಂನ ವೇಗವಾಗಿ ಹರಡುವಿಕೆಯ ಬಗ್ಗೆ ಹೇಳಿಕೆ.
ಫ್ಯಾಕ್ಟ್: ಸೌದಿಯ ಬೋಧಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಉಲ್ಲೇಖಿಸಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ, ಹೊರತು ಭಾರತ ಬಗ್ಗೆ ಅಲ್ಲ. 2004 ರಲ್ಲಿ ಅಲ್-ಮಜ್ದ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯುಸ್ ವಿರುದ್ಧ ಇರಾಕಿನ ಪ್ರತಿರೋಧಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ ನಾಸರ್ ಅಲ್-ಒಮರ್, ಅಮೆರಿಕವು ತನಗೆ ತಿಳಿಯದಂತೆ ಕುಸಿಯುತ್ತಿದೆ ಮತ್ತು ವಿನಾಶದ ಹಾದಿಯಲ್ಲಿದೆ ಎಂದು ಹೇಳಿದ್ದಾರೆ. ಸಾವಿರಾರು ಮುಸ್ಲಿಮರು ಈಗಾಗಲೇ ಅಮೆರಿಕನ್ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ. ಇಸ್ಲಾಂ ಅಮೆರಿಕದಲ್ಲಿ ಎರಡನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
2050 ರ ವೇಳೆಗೆ ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗುವ ಬಗ್ಗೆ ಸೌದಿ ಪ್ರಾಧ್ಯಾಪಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿದ್ದಾರೆಯೇ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ನಮಗೆ ಯಾವುದೇ ಅರ್ಹ ವರದಿಗಳು ಕಂಡುಬಂದಿಲ್ಲ.
ಹೆಚ್ಚಿನ ವಿವರಗಾಳಿಗಾಗಿ ಪರಿಶೀಲಿಸಿದಾಗ, ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅವರು 2004 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಉಲ್ಲೇಖಿಸಿ ಇದೇ ರೀತಿಯ ಹೇಳಿಕೆಗಳನ್ನು ನೀಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಜೂನ್ 2004 ರಲ್ಲಿ ಅಲ ಅಜಾದ್ ಚಾನೆಲ್ಗೆ ನೀಡಿದ ಇಂಟರ್ವ್ಯೂ ನಲ್ಲಿ, “ಅಮೆರಿಕಾ ಬಾಹ್ಯವಾಗಿ ಕುಸಿಯುತ್ತಿದೆ. ಇಸ್ಲಾಂ ಒಂದು ಸ್ಥಿರವಾದ ಯೋಜನೆಯ ಪ್ರಕಾರ ಮುಂದುವರಿಯುತ್ತಿದೆ, ಹತ್ತಾರು ಮುಸ್ಲಿಮರು ಅಮೇರಿಕನ್ ಸೈನ್ಯಕ್ಕೆ ಸೇರಿದ್ದಾರೆ ಮತ್ತು ಇಸ್ಲಾಂ ಅಮೇರಿಕಾದಲ್ಲಿ ಎರಡನೇ ಅತಿದೊಡ್ಡ ಧರ್ಮವಾಗಿದೆ. ಇಂದು ಅಮೆರಿಕ ಸೋಲುತ್ತಿದೆ. ತನ್ನ ಹಲ್ಲವನ್ನು ತಾನೇ ತೋಡಿಕೊಳ್ಳುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ”, ಎಂದು ಹೇಳಿದ್ದಾರೆ.

ಇದಲ್ಲದೆ, ನಾಸರ್ ಬಿನ್ ಸುಲೇಮಾನ್ ಅಲ್-ಒಮರ್, 2006 ರಲ್ಲಿ ಅಲ್-ಜಜೀರಾ ಎಂಬ ಸುದ್ದಿ ಸೈಟ್‌ನಲ್ಲಿ ಉಪನ್ಯಾಸ ನೀಡುವಾಗ, “ಇಸ್ಲಾಮಿಕ್ ರಾಷ್ಟ್ರವು ಈಗ ಜಿಹಾದ್‌ನ ದೊಡ್ಡ ಹಂತವನ್ನು ಎದುರಿಸುತ್ತಿದೆ. ಅಫ್ಘಾನಿಸ್ತಾನ, ಪ್ಯಾಲೆಸ್ಟೈನ್, ಇರಾಕ್, ಚೆಚೆನ್ಯಾ, ಕಾಶ್ಮೀರ ಮತ್ತು ಫಿಲಿಪೈನ್ಸ್ ನಂತಹ ಜಪ್ರದೇಶಗಳಲ್ಲಿ ಜಿಹಾದ್ ಸರಿಯಾದ ಕ್ರಮದಲ್ಲಿ ಸಾಗುತ್ತಿದೆ.” ಆದಾಗ್ಯೂ, ಸುಲೇಮಾನ್ ಅಲ್-ಒಮರ್ ಅವರು ಮೇಲಿನ ಎಲ್ಲಾ ಹೇಳಿಕೆಗಳನ್ನು ಭಾರತದಲ್ಲಿ ಇಸ್ಲಾಂನ ವೇಗವಾದ ಹಾರುಡುವಿಕೆಯ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ.

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ಕೇವಲ ‘14.2%’ ಆಗಿತ್ತು. ‘ಪ್ಯೂ ರಿಸರ್ಚ್ ಸೆಂಟರ್’ ಪ್ರಕಟಿಸಿದ 2021 ರ ವರದಿಯ ಪ್ರಕಾರ, 2020 ರ ಹೊತ್ತಿಗೆ, ಭಾರತೀಯ ಜನಸಂಖ್ಯೆಯ ಸರಿಸುಮಾರು 15% ಮುಸ್ಲಿಮರು ಎಂಬುವುದು ತಿಳಿದು ಬಂದಿದೆ. ಅಧ್ಯಯನದ ಪ್ರಕಾರ, ಇಸ್ಲಾಮಿಕ್ ನಿದಾನವಾಗಿ ಹರಡುತ್ತಿದೆ ಎಂದಿದೆ. ಮತ್ತು 2050 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ 18.4% ರಷ್ಟಿದೆ ಬರಬಹುದು ಎಂದು ಊಹಿಸಲಾಗಿದೆ. ಸಂಶೋಧನಾ ಅಧ್ಯಯನವು 2050 ರ ವೇಳೆಗೆ ಭಾರತದಲ್ಲಿ ಬಹುಸಂಖ್ಯಾತ ಧರ್ಮವಾಗಿ ಬೆಳೆಯಬಹುದು ಎಂದು ಊಹಿಸಿದೆ. ಭಾರತದಲ್ಲಿನ ಮುಸ್ಲಿಂ ಜನಸಂಖ್ಯೆ ಮತ್ತು ಅವರ ಜನನ ಪ್ರಮಾಣಕ್ಕೆ ಸಂಬಂಧಿಸಿದ ಇದೇ ರೀತಿಯ ಕ್ಲೇಮ್ ಅನ್ನು ಈ ಹಿಂದೆಯೂ ಫಾಕ್ಳ್ಯ್ ಪ್ರಕಟಿಸಿದ್ದು ಆ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೌದಿ ಪ್ರಾಧ್ಯಾಪಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅವರು 2050 ರ ವೇಳೆಗೆ ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಲಿದೆ ಎಂದು ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂಬುವುದು ತಿಳಿದು ಬಂದಿದೆ.