ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ಅತಿಥಿ ಗೃಹದಲ್ಲಿ ಹುಲಿಯು ಮನುಷ್ಯನ ಮೇಲೆ ದಾಳಿ ಮಾಡುತ್ತಿರುವ ಸಿಸಿಟಿವಿ ದೃಶ್ಯಾವಳಿ ಎಂದು ಹೇಳುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ (ಇಲ್ಲಿ). ಈ ವಿಡಿಯೋದಲ್ಲಿ, ಹೊರಗೆ ಕುಳಿತಿರುವ ವ್ಯಕ್ತಿಯ ಬಳಿ ಹುಲಿಯೊಂದು ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಆತನನ್ನು ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಚಂದ್ರಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ಅತಿಥಿ ಗೃಹದ ಹೊರಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಹುಲಿಯು ದಾಳಿ ಮಾಡುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಫ್ಯಾಕ್ಟ್: ಈ ವಿಡಿಯೋ ಕೃತಕ ಬುದ್ಧಿಮತ್ತೆ (AI) ರಚಿತವಾಗಿದ್ದು, ನಿಜವಾದ ಸಿಸಿಟಿವಿ ರೆಕಾರ್ಡಿಂಗ್ ಅಲ್ಲ. ಅರಣ್ಯಾಧಿಕಾರಿಗಳು ಮತ್ತು ಪಿಐಬಿ (PIB) ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಇದು AI ನಿಂದ ಸೃಷ್ಟಿಯಾಗಿದೆ ಎಂದು ವರದಿ ಮಾಡಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳು.
ಘಟನೆಗೆ ಸಂಬಂಧಿಸಿದಂತೆ ಕೀವರ್ಡ್ ಹುಡುಕಾಟ ನಡೆಸಿದಾಗ, ಅಂತಹ ಯಾವುದೇ ಘಟನೆಯನ್ನು ವರದಿಯಾಗಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳು ನಮಗೆ ಕಂಡುಬಂದಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ, ಕೆಲವು ಫ್ರೇಮ್‌ಗಳಲ್ಲಿ ಹುಲಿ ಮತ್ತು ಆ ವ್ಯಕ್ತಿ ಹಿನ್ನೆಲೆಯೊಂದಿಗೆ ವಿಚಿತ್ರವಾಗಿ ಬೆರೆತುಹೋದಂತೆ ಕಾಣುತ್ತದೆ, ಇದು ವಿಡಿಯೋ ಡಿಜಿಟಲ್ ಆಗಿ ರಚನೆಯಾಗಿರಬಹುದು ಎಂದು ಸೂಚಿಸುತ್ತದೆ.
ಇದಲ್ಲದೆ, ನಾವು ಹೈವ್ ಮಾಡರೇಷನ್ ಎಂಬ AI ಪತ್ತೆ ಉಪಕರಣವನ್ನು ಬಳಸಿ ವಿಡಿಯೋವನ್ನು ವಿಶ್ಲೇಷಿಸಿದ್ದೇವೆ. ಈ ಮೂಲಕ ದೃಶ್ಯಾವಳಿ AI-ಸೃಷ್ಟಿಯಾಗಿರುವ ಸಾಧ್ಯತೆ 94% ರಷ್ಟಿದೆ ಎಂದು ಸೂಚಿಸಿದೆ.

ಇನ್ನಷ್ಟು ಪರಿಶೀಲಿಸಲು, ನಾವು ಚಂದ್ರಪುರದ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದೆವು, ಅವರು ಈ ವಿಡಿಯೋ ನಿಜವಲ್ಲ ಎಂದು ಖಚಿತಪಡಿಸಿದರು.

ಇನ್ನು ಹೆಚ್ಚಾಗಿ ಹೇಳುವುದಾದರೆ, ಪಿಐಬಿ ಮಹಾರಾಷ್ಟ್ರವು X ಪೋಸ್ಟ್ ಮೂಲಕ ಈ ಕ್ಲೈಮನ್ನು ನಿರಾಕರಿಸಿದ್ದು, ವೈರಲ್ ವಿಡಿಯೋ AI ನಿಂದ ಸೃಷ್ಟಿಯಾಗಿದೆ ಹೊರತು ನಿಜವಾದ ಸಿಸಿಟಿವಿ ದೃಶ್ಯಾವಳಿ ಅಲ್ಲ ಎಂದು ಖಚಿತಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬ್ರಹ್ಮಪುರಿ ಅರಣ್ಯ ಅತಿಥಿ ಗೃಹದಲ್ಲಿ ಹುಲಿ ದಾಳಿಯನ್ನು ತೋರಿಸುತ್ತದೆ ಎಂದು ಹೇಳುವ ವಿಡಿಯೋ AI ರಚಿತವಾಗಿದೆ.

