Fake News - Kannada
 

ಒಡಿಶಾ ರೈಲು ಅಪಘಾತದ ಸ್ಥಳದ ಪಕ್ಕದಲ್ಲಿರುವುದು ಇಸ್ಕಾನ್ ದೇವಾಲಯ, ಮಸೀದಿಯಲ್ಲ

0

ಒಡಿಶಾದ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 275 ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದಾರೆ. ಆದರೆ  ಈ ಘಟನೆಯ ನಂತರ  ಬಹನಾಗಾ ಬಜಾರ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಮೊಹಮ್ಮದ್ ಷರೀಫ್ ಈ ದುರ್ಘಟನೆ ನಡೆದ ನಂತರದಿಂದ ಕರೆಯಾಗಿದ್ದರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಅಪಘಾತದ ಸ್ಥಳದ ಸಮೀಪದಲ್ಲಿ ಒಂದು ಮಸೀದಿಯಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಹಾಗಾಗಿ ಇದು ನಿರ್ದಿಷ್ಟ ಸಮುದಾಯದಿಂದ ನಡೆಸಿದ ಅಪಘಾತ ಸಂಭವಿಸಿದೆ ಎಂದು ಸೂಚಿಸುತ್ತದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್‌ಗಳನ್ನು ಪರಿಶೀಲಿಸೋಣ.

ಕ್ಲೇಮ್ : ಬಹನಾಗಾ ಬಜಾರ್ ರೈಲ್ವೆ ಸ್ಟೇಷನ್ ಮಾಸ್ಟರ್ ಮೊಹಮ್ಮದ್ ಷರೀಫ್ ಅಪಘಾತ ಸಂಭವಿಸಿದಾಗಿನಿಂದ ತಲೆಮರೆಸಿಕೊಂಡಿದ್ದು, ಅಪಘಾತದ ಸ್ಥಳದ ಸಮೀಪದಲ್ಲಿರುವ ರಚನೆಯು ಮಸೀದಿಯಾಗಿದೆ.

ಫ್ಯಾಕ್ಟ್ : ಅಪಘಾತದ ಸಮಯದಲ್ಲಿ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸಹಾಯಕ ಸ್ಟೇಷನ್ ಮಾಸ್ಟರ್ ಎಸ್‌ಬಿ ಮೊಹಂತಿ ಅವರ ಕುರಿತು ಪ್ರಸ್ತುತ ರೈಲ್ವೆ ಅಧಿಕಾರಿಗಳಿಂದ ತನಿಖೆ ನಡೆಸುತ್ತಿದ್ದಾರೆ. ಇದಲ್ಲದೆ, ಅಪಘಾತದ ಸ್ಥಳದ ಸಮೀಪವಿರುವ ರಚನೆಯು ವಾಸ್ತವವಾಗಿ ಇಸ್ಕಾನ್ ದೇವಾಲಯವಾಗಿದೆ ಮತ್ತು ಮಸೀದಿ ಅಲ್ಲ ಎಂದು ದೃಢಪಡಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.

ಆಗ್ನೇಯ ರೈಲ್ವೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ರೈಲ್ವೇ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಿಗ್ನಲ್ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ. ಅಪಘಾತದ ನಂತರ ಸಹಾಯಕ ಸ್ಟೇಷನ್ ಮಾಸ್ಟರ್ ಎಸ್ ಬಿ ಮೊಹಂತಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ಹಿಂದಿನ ವರದಿಗಳು ಸೂಚಿಸಿವೆ. ಆದಾಗ್ಯೂ, ಅಪಘಾತದ ಸಂದರ್ಭದಲ್ಲಿ ಠಾಣೆಯ ಉಸ್ತುವಾರಿ ವಹಿಸಿದ್ದ ಎಸ್‌ಬಿ ಮೊಹಾಂತಿ ಅವರ ಕುರಿತು ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ ಎಂದು ನಿಲ್ದಾಣದ ವ್ಯವಸ್ಥಾಪಕರಲ್ಲಿ ಒಬ್ಬರಾದ ಎಸ್‌ಕೆ ಪಾಟ್ ನಾಯಕ್ ನಂತರ ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿಯಾಗಿ, ಅಪಘಾತದ ಬಗ್ಗೆ ಬಾಲಸೋರ್ ಜಿಆರ್‌ಪಿಎಸ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಆದರೆ ಇಲ್ಲಿ ಷರೀಫ್ ಎಂಬ ಯಾವುದೇ ವ್ಯಕ್ತಿ ಅಥವಾ ಅಪಘಾತದ ನಂತರ ತಲೆಮರೆಸಿಕೊಂಡಿರುವ ಯಾವುದೇ ವ್ಯಕ್ತಿಯನ್ನು ಉಲ್ಲೇಖಿಸಿಲ್ಲ. ಈ ಮಾಹಿತಿಯನ್ನು ಪರಿಶೀಲಿಸಲು, ನಾವು ಬಾಲಸೋರ್ ಜಿಆರ್‌ಪಿಎಸ್ ಸಬ್-ಇನ್ಸ್‌ಪೆಕ್ಟರ್ ಪಾಪು ಕುಮಾರ್ ನಾಯಕ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ಈ ಘಟನೆಯಲ್ಲಿ ಶರೀಫ್ ಎಂಬ ಠಾಣಾಧಿಕಾರಿ ಭಾಗಿಯಾಗಿಲ್ಲ ಎಂದು ಖಚಿತಪಡಿಸಿದರು ಮತ್ತು ಅದನ್ನು ಸುಳ್ಳು ಸುದ್ದಿ ಎಂದಿದ್ದಾರೆ.

ಅಪಘಾತದ ಸ್ಥಳದ ಪಕ್ಕದ ರಚನೆಗೆ ಸಂಬಂಧಿಸಿದಂತೆ, ವಿವಿಧ ಮಾಧ್ಯಮಗಳು ಪ್ರಕಟಿಸಿದ ದೃಶ್ಯಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಇದು ಮಸೀದಿಗಿಂತ ದೇವಸ್ಥಾನವನ್ನು ಹೋಲುತ್ತದೆ ಎಂದು ಸೂಚಿಸುತ್ತದೆ.

ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು, ನಾವು ಗೂಗಲ್ ಅರ್ಥ್ ಮತ್ತು ಗೂಗಲ್ ನಕ್ಷೆಗಳಲ್ಲಿ ಹುಡುಕಾಟವನ್ನು ನಡೆಸಿದ್ದೇವೆ, ಇದು ರಚನೆಯು ನಿಜವಾಗಿಯೂ ‘ಬಹಂಗಾ ಇಸ್ಕಾನ್ ದೇವಾಲಯ’ ಎಂದು ದೃಢಪಡಿಸಿತು.

ಜೊತೆಗೆ, ಸ್ಥಳೀಯ ಪತ್ರಕರ್ತರೊಬ್ಬರು ಅಪಘಾತದ ಸ್ಥಳದಿಂದ ಈ ಇಸ್ಕಾನ್ ದೇವಾಲಯದ ದೃಶ್ಯಗಳನ್ನು ಹಲವಾರು  ಸೈಟ್‌ಗಳಲ್ಲಿ ಶೇರ್ ಮಾಡಿದ್ದಾರೆ (ಇಲ್ಲಿ, ಇಲ್ಲಿ).

ಇದಲ್ಲದೆ, ಒಡಿಶಾ ಪೊಲೀಸರು ಅಂತಹ ಯಾವುದೇ ಕೋಮುವಾದದ ತಪ್ಪು ಮಾಹಿತಿಯನ್ನು ಹಂಚಿಕೊಳ್ಳದಂತೆ ಬಳಕೆದಾರರಿಗೆ ಮನವಿ ಮಾಡಿದ್ದಾರೆ ಮತ್ತು ಅಂತಹ ಸುಳ್ಳುಗಳನ್ನು ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಪಘಾತದ ಸಮಯದಲ್ಲಿ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದ ಇನ್‌ಚಾರ್ಜ್ ಸ್ಟೇಷನ್ ಮಾಸ್ಟರ್ ಎಸ್‌ಬಿ ಮೊಹಂತಿ ಪ್ರಸ್ತುತ ತನಿಖೆಯಲ್ಲಿದ್ದಾರೆ. ಇದಲ್ಲದೆ, ಅಪಘಾತದ ಸ್ಥಳದ ಪಕ್ಕದಲ್ಲಿರುವ ಮಸೀದಿ ಅಲ್ಲ ಇಸ್ಕಾನ್ ದೇವಾಲಯ ಎಂದು ಗುರುತಿಸಲಾಗಿದೆ.

Share.

Comments are closed.

scroll