₹5000 ನೋಟಿನ ಚಿತ್ರವನ್ನು ಒಳಗೊಂಡಿರುವ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ಹೊಸ ₹5000 ನೋಟನ್ನು ಬಿಡುಗಡೆ ಮಾಡಲಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ₹5000 ಹೊಸ ನೋಟನ್ನು ಬಿಡುಗಡೆ ಮಾಡಲಿದೆ.
ಫ್ಯಾಕ್ಟ್: ಭಾರತೀಯ ರಿಸರ್ವ್ ಬ್ಯಾಂಕ್ (RBI) ₹5000 ನೋಟಿನ ಬಗ್ಗೆ ಯಾವುದೇ ಸುತ್ತೋಲೆಯನ್ನು ಬಿಡುಗಡೆ ಮಾಡಿಲ್ಲ ಅಥವಾ ಹೊರಡಿಸಿಲ್ಲ. ಇನ್ನು ಹೆಚ್ಚಾಗಿ ಹೇಳುವುದಾದರೆ, ಜನವರಿ 04, 2025 ರಂದು PIB ಫ್ಯಾಕ್ಟ್ ಚೆಕ್‌ನ ಅಫೀಷಿಯಲ್ X ಹ್ಯಾಂಡಲ್‌ನಲ್ಲಿರುವ ಪೋಸ್ಟ್ ಈ ಹೇಳಿಕೆಯನ್ನು ‘ನಕಲಿ’ ಎಂದು ತಿಳಿಸುವುದರ ಜೊತೆಗೆ ₹5000 ನೋಟುಗಳ ಬಿಡುಗಡೆಯ ಬಗ್ಗೆ RBI ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಇದನ್ನು ಪರಿಶೀಲಿಸಲು ನಾವು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಅಫೀಷಿಯಲ್ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಅಲ್ಲಿ ₹5000 ನೋಟಿನ ಬಿಡುಗಡೆಯ ಬಗ್ಗೆಯಾಗಲಿ ಅಥವಾಮುಂಬರುವರು ದಿನಗಳಲ್ಲಿ ಪರಿಚಯಿಸುವ ಯೋಜನೆಯ ಬಗ್ಗೆ ಯಾವುದೇ ಸುತ್ತೋಲೆ ಅಥವಾ ಪ್ರಕಟಣೆ ಕಂಡುಬಂದಿಲ್ಲ. RBI ನಿಯಮಿತವಾಗಿ ತನ್ನ ವೆಬ್‌ಸೈಟ್‌ನಲ್ಲಿ ಅಫೀಷಿಯಲ್ ಸುತ್ತೋಲೆಗಳ ಮೂಲಕ ಸಾರ್ವಜನಿಕರಿಗೆ ಹೊಸ ಕರೆನ್ಸಿ ನೋಟುಗಳ ಬಗ್ಗೆ ತಿಳಿಸುತ್ತದೆ.
ಸಾಮಾನ್ಯವಾಗಿ RBI ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ಕರೆನ್ಸಿ ನೋಟುಗಳ ವಿವರಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ‘ಪೈಸಾ ಬೋಲ್ಟಾ ಹೈ’ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಆದರೆ ಈ ₹5000 ನೋಟನ್ನು ಈ ಪಟ್ಟಿಯಲ್ಲಿ ಎಲ್ಲಿಯೂ ಸೇರಿಸಿಲ್ಲ.

ಹೆಚ್ಚುವರಿಯಾಗಿ, ಜನವರಿ 04, 2025 ರಂದು ಪಿಐಬಿ ಫ್ಯಾಕ್ಟ್ ಚೆಕ್‌ನ ಅಫೀಷಿಯಲ್ X ಹ್ಯಾಂಡಲ್‌ನಲ್ಲಿ ಈ ಹೇಳಿಕೆಯನ್ನು ‘ನಕಲಿ/ಫೇಕ್’ ಎನ್ನುವ ಪೋಸ್ಟ್ (ಆರ್ಕೈವ್) ನಮಗೆ ಕಂಡುಬಂದಿದೆ. ಈ ಮೂಲಕ RBI ₹5000 ನೋಟುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿಲ್ಲ ಎಂದು ತಿಳಿಸಿದೆ.
ಫ್ಯಾಕ್ಟ್ಲಿ ಈ ಹಿಂದೆಯೂ ಭಾರತೀಯ ರಿಸರ್ವ್ ಬ್ಯಾಂಕ್ ₹5000 ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ ಎಂದು ವೈರಲ್ ಆಗಿದ್ದ ಇದೇ ರೀತಿಯ ಹೇಳಿಕೆಯನ್ನು ನಿರಾಕರಿಸಿತ್ತು (ಇಲ್ಲಿ ಓದಿ).
ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ರಿಸರ್ವ್ ಬ್ಯಾಂಕ್ ₹5000 ನೋಟನ್ನು ಬಿಡುಗಡೆ ಮಾಡಿಲ್ಲ ಅಥವಾ ಈ ಬಗ್ಗೆ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ.