Fake News - Kannada
 

ರಾಮ ನನ್ನ ಆದರ್ಶ ಎಂದು ಅಜಂ ಖಾನ್ ಹೇಳಿಕೆಯ ಹಳೆಯ ವಿಡಿಯೊವನ್ನು ಇ‍ತೀಚಿನದ್ದು ಎಂದು ಹಂಚಿಕೆ

0

ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್ ಇತ್ತೀಚೆಗೆ ಮೇ 2022 ರಲ್ಲಿ ಸುಮಾರು 27 ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದರು. ಈ ಹಿನ್ನೆಲೆಯಲ್ಲಿ, ಭಗವಾನ್ ರಾಮನೇ ತನ್ನ ಆದರ್ಶ ಎಂದು ಅಜಂ ಖಾನ್ ಹೇಳುವ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ಅವರು ಇತ್ತೀಚೆಗೆ ಈ ಮಾತುಗಳನ್ನು ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವರ ಹಿಂದಿ ಭಾಷಣದ ಅನುವಾದವು ‘ಯೋಗಿ ಜಿ ಮೊಘಲ್ ನಮ್ಮ ಆದರ್ಶವಲ್ಲ, ನಮ್ಮ ಆದರ್ಶ ರಾಮ್, ನಮ್ಮ ಆದರ್ಶ ಕಿಶನ್ ಜಿ ಕೂಡ. ಎಂದಿದ್ದಾರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಪ್ರತಿಪಾದನೆ : ಭಗವಾನ್ ರಾಮನು ತನ್ನ ಆದರ್ಶ ಮತ್ತು ಮೊಘಲರಲ್ಲ ಎಂದು ಅಜಂ ಖಾನ್ ಇತ್ತೀಚೆಗೆ ಹೇಳಿಕೊಂಡಿದ್ದರು.

ನಿಜಾಂಶ : ಭಗವಾನ್ ರಾಮ ಮತ್ತು ಕೃಷ್ಣ ತನ್ನ ಆದರ್ಶಗಳು ಮತ್ತು ಮೊಘಲರಲ್ಲ ಎಂದು ಅಜಂ ಖಾನ್ ಹೇಳಿದ್ದು ನಿಜ. ಆದಾಗ್ಯೂ, ಅವರು 2017 ರಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತಾ ಹಾಗೆ ಹೇಳಿದ್ದರು. ಆಗ ಅವರ ಹೇಳಿಕೆಗಳನ್ನು ಹಲವು ಸುದ್ದಿ ವರದಿಗಳು ವರದಿ ಮಾಡಿವೆ. ಜೈಲಿನಿಂದ ಬಿಡುಗಡೆಯಾದ ನಂತರ ಅವರು ಇತ್ತೀಚೆಗೆ ಅದೇ ರೀತಿ ಪುನರುಚ್ಚರಿಸಿದ ಯಾವುದೇ ವರದಿಗಳಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸದಲ್ಲಿದ್ದ ಅಜಂ ಖಾನ್‌ಗೆ ಮೇ 2022 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅವರು ಪ್ರಸ್ತುತ ಅಜಂಗಢ ಲೋಕಸಭೆಯ ಉಪಚುನಾವಣೆಗೆ ಪ್ರಚಾರ ಮಾಡುತ್ತಿದ್ದಾರೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರು ಭಗವಾನ್ ರಾಮನು ತನ್ನ ಆದರ್ಶ ಎಂದು ಹೇಳಿದ್ದು ನಿಜವಾಗಿದ್ದರೂ, ಅವರು ಇದನ್ನು ಇತ್ತೀಚೆಗೆ ಹೇಳಲಿಲ್ಲ, ಆದರೆ 2017 ರ ಹಿಂದೆಯೇ ಹೇಳಿದ್ದರು.

ಸಂಬಂಧಿತ ಕೀವರ್ಡ್‌ಗಳೊಂದಿಗೆ Google ಸರ್ಚ್ ನಡೆಸಿದಾಗ 2017 ರ ಸುದ್ದಿ ವರದಿಗಳನ್ನು ಲಭ್ಯವಾಗಿವೆ, ಇದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ (ಇಲ್ಲಿ ಮತ್ತು ಇಲ್ಲಿ) ಅಜಂ ಖಾನ್ ಅವರ ಹೇಳಿಕೆಗಳನ್ನು ವರದಿ ಮಾಡಿದೆ.

ಮಾಹಿತಿಗಾಗಿ ಮತ್ತಷ್ಟು ಸರ್ಚ್ ನಡೆಸಿದಾಗ ಎಸ್‌ಪಿಯ ರಾಷ್ಟ್ರೀಯ ಸಮಾವೇಶದ ವೀಡಿಯೊ ತುಣುಕನ್ನು ಲಭ್ಯವಾಗಿದೆ. ಇದರಲ್ಲಿ ಅಜಂ ಖಾನ್ ಈ ಮಾತುಗಳನ್ನು ಹೇಳಿದ್ದಾರೆ. ವೀಡಿಯೊದ 15:13 ಸಮಯದಲ್ಲಿ, “ಭಗವಾನ್ ರಾಮ ಮತ್ತು ಕೃಷ್ಣ ಅವರ ಆದರ್ಶಗಳು ಮತ್ತು ಮೊಘಲರಲ್ಲ” ಎಂಬ ನಿಖರವಾದ ಮಾತುಗಳನ್ನು ಆಜಮ್ ಹೇಳುವುದನ್ನು ನಾವು ಕೇಳಬಹುದು. ಇದಲ್ಲದೆ, ಜೈಲಿನಿಂದ ಬಿಡುಗಡೆಯಾದ ನಂತರ ಅವರು ಅದೇ ರೀತಿ ಹೇಳಿಕೆ ನೀಡಿದ ಯಾವುದೇ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಭಗವಾನ್ ರಾಮನೇ ತನ್ನ ಆದರ್ಶ ಎಂದು ಅಜಂ ಖಾನ್ ಹೇಳಿರುವ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂಬಂತೆ ಪ್ರಸಾರ ಮಾಡಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll