Fake News - Kannada
 

ಒಂದು ಕಾಲ್ಪನಿಕ ಕಥೆಯನ್ನು ಮಲಪ್ಪುರಂ ಜಿಲ್ಲಾಧಿಕಾರಿಯ ನಿಜ ಜೀವನದ ಘಟನೆಗಳು ಎಂದು ಹಂಚಿಕೊಳ್ಳಲಾಗಿದೆ

0

ಶಾಲಾ ವಿದ್ಯಾರ್ಥಿಗಳು ಮತ್ತು ಕೇರಳದ ಮಲಪ್ಪುರಂ ಜಿಲ್ಲಾಧಿಕಾರಿ ರಾಣಿ ಸೋಯಾಮೊಯ್ ನಡುವಿನ ಸಂಭಾಷಣೆಯ ಆಯ್ದ ಭಾಗಗಳು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ಆಯ್ದ ಭಾಗದ ಪ್ರಕಾರ, ಕಲೆಕ್ಟರ್ ತನ್ನ ಬಾಲ್ಯದಲ್ಲಿ ಮೈಕಾ ಗಣಿಯಲ್ಲಿ ಕೆಲಸ ಮಾಡಿದ ಕಷ್ಟಗಳನ್ನು ವಿವರಿಸುತ್ತಾರೆ. ಇದಲ್ಲದೆ, ಅವರು ಯಾವ ಕಾರಣಕ್ಕೆ ಮೇಕಪ್ ಮಾಡುವುದಿಲ್ಲ ಎಂದು ವಿವರಿಸುತ್ತಾರೆ ಎಂದು ಪ್ರತಿಪಾದಿಸಲಾಗಿದೆ. ಈ ಲೇಖನದ ಮೂಲಕ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮಲಪ್ಪುರಂ ಜಿಲ್ಲಾಧಿಕಾರಿ ರಾಣಿ ಸೋಯಾಮೊಯ್ ಅವರ ನಿಜ ಜೀವನದ ಕಥೆ.

ಫ್ಯಾಕ್ಟ್‌ಚೆಕ್;  ಮಲಪ್ಪುರಂ ಜಿಲ್ಲಾಧಿಕಾರಿಯ ಬಗ್ಗೆ ಹೇಳಲಾದ ಕಥೆಯು ಕಾಲ್ಪನಿಕವಾಗಿದೆ. ಈ ಕಥೆಯನ್ನು ಮಲಯಾಳಿ ಲೇಖಕ ಹಕೀಂ ಮೊರೆಯೂರ್ ಅವರ ‘ಮೂರು ಮಹಿಳೆಯರು’ ಎಂಬ ಸಣ್ಣ ಕಥಾ ಸಂಕಲನದಿಂದ ತೆಗೆದುಕೊಳ್ಳಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಕಲೆಕ್ಟರ್  ಹೆಸರನ್ನು ಸಹ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ  ಹಕೀಂ ಮೊರೆಯೂರ್ ಅವರೇ ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೊ ಶೈನಾಮೋಲ್ ಐಎಎಸ್ ಅವರದ್ದೆ ಆಗಿದೆ, ಅವರು ಈ ಹಿಂದೆ ಮಲಪ್ಪುರಂ ಕಲೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಮಲಪ್ಪುರಂ ಜಿಲ್ಲಾಧಿಕಾರಿ ರಾಣಿ ಸೋಯಾಮೊಯಿ ಅವರ ಹೆಸರಿನಲ್ಲಿ ಹೇಳಲಾದ ಕಥೆ ಕಾಲ್ಪನಿಕವಾಗಿದೆ. ಇದು ಹಕೀಂ ಮೊರೆಯೂರ್ ಬರೆದ ಮಲಯಾಳಿ ಸಣ್ಣ ಕಥಾ ಸಂಕಲನದಿಂದ ಆಯ್ದ ಭಾಗವಾಗಿದೆ.

ಹಕೀಮ್ ಮೊರೆಯೂರ್ ಫೇಸ್‌ಬುಕ್ ಪೋಸ್ಟ್ ಮೂಲಕ ವೈರಲ್ ಆದ ಕಥೆಯನ್ನು ತಮ್ಮ ಕಾಲ್ಪನಿಕ ಸಣ್ಣ ಕಥಾ ಸಂಕಲನ ‘ಮೂರು ಮಹಿಳೆಯರು’ ದಿಂದ ಹೊರತೆಗೆಯಲಾಗಿದೆ ಎಂದು ಖಚಿತಪಡಿಸಿದ್ದಾರೆ. ಅವರ ಪುಸ್ತಕದ ‘ಶೈನಿಂಗ್ ಫೇಸಸ್’ ಎಂಬ ಸಣ್ಣ ಕಥೆಯನ್ನು ರಾಣಿ ಸೋಯಾಮೊಯ್ ಅವರ ಹೆಸರಿನಲ್ಲಿ ನೈಜ ಕಥೆಯಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಅವರ ಪುಸ್ತಕದಲ್ಲಿನ ಮುಖ್ಯ ಪಾತ್ರದ ಹೆಸರೂ ಆಗಿತ್ತು. ಅವರು ತಮ್ಮ ಪ್ರತಿಪಾದನೆಯನ್ನು ದೃಢೀಕರಿಸಲು ತಮ್ಮ ಪುಸ್ತಕದಿಂದ ಕಥೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚಿತ್ರವು ಶೈನಾಮೋಲ್ ಐಎಎಸ್ ಆಗಿದೆ, ಅವರು ಈ ಹಿಂದೆ ಮಲಪ್ಪುರಂ ಕಲೆಕ್ಟರ್ ಆಗಿ ಕೆಲಸ ಮಾಡಿದ್ದಾರೆ ಅವುಗಳ ಸ್ಪಷ್ಟನೆಗಾಗಿ ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. ಆದರಿಂದ  ಮಲಪ್ಪುರಂ ಜಿಲ್ಲಾಧಿಕಾರಿ ಹೆಸರಲ್ಲಿ ಕಾಲ್ಪನಿಕ ಕಥೆಯೊಂದು ಹರಿದಾಡುತ್ತಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಲ್ಪನಿಕ ಕಥೆಯನ್ನು ಮಲಪ್ಪುರಂ ಕಲೆಕ್ಟರ್‌ನ ನಿಜ ಜೀವನದ ಘಟನೆಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ..

Share.

About Author

Comments are closed.

scroll