ಇತ್ತೀಚಿನ ಇಸ್ರೇಲಿ-ಪ್ಯಾಲೇಸ್ಟಿನಿಯನ್ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲಿ ಸೈನ್ಯವು ಮಸೀದಿಯ ಮೇಲೆ ಬಾಂಬ್ ದಾಳಿ ನಡೆಸಿದೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ಇಸ್ರೇಲ್-ಪ್ಯಾಲೇಸ್ಟಿನಿಯನ್ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಸೈನ್ಯವು ಮಸೀದಿಯನ್ನು ನೆಲಸಮಗೊಳಿಸುವ ವಿಡಿಯೋ.ನ
ಿಜಾಂಶ: ಈ ವೀಡಿಯೊದಲ್ಲಿನ ದೃಶ್ಯಗಳನ್ನು CNN TURK 2014 ರಲ್ಲಿ ಪ್ರಕಟಿಸಿದ ಸುದ್ದಿ ಲೇಖನದಲ್ಲಿ ನೋಡಬಹುದು. ವೀಡಿಯೊದಲ್ಲಿರುವ ಕಟ್ಟಡವು ಸಿರಿಯಾದಲ್ಲಿದ್ದು, ಆ ಸಮಯದಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯಿಂದ ಸ್ಫೋಟಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿನ ವೀಡಿಯೊದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಕ ಹುಡುಕಿದಾಗ ರಷ್ಯಾದ ಅಧಿಕೃತ ಸುದ್ದಿ ಸಂಸ್ಥೆ RT 2016 ರಲ್ಲಿ ಪ್ರಕಟಿಸಿದ ಸುದ್ದಿ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳನ್ನು ನೋಡಬಹುದು. ಆದರೆ ಆ ದೃಶ್ಯಗಳು ಯಾವ ಘಟನೆಗೆ ಸಂಬಂಧಿಸಿವೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಿಲ್ಲ.
ಹಲವು ಮಾಧ್ಯಮಗಳು ವೀಡಿಯೊದಲ್ಲಿನ ಕಟ್ಟಡವು ಸಿರಿಯಾದ ವೀಸೆಲ್ ಕರಣಿ ಸಮಾಧಿ ಕಟ್ಟಡ ಎಂದು ಉಲ್ಲೇಖಿಸಲಾಗಿದೆ. ಆ ಸುದ್ದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಕುರಿತು ಮತ್ತಷ್ಟು ಹುಡುಕಿದಾಗ, ಪೋಸ್ಟ್‌ನಲ್ಲಿನ ವೀಡಿಯೊವನ್ನು 2014 ರಲ್ಲಿ ‘ಸಿಎನ್‌ಎನ್ ಟರ್ಕ್ ಪ್ರಕಟಿಸಿದ ಸುದ್ದಿ ಲೇಖನ ಕಂಡುಬಂದಿದೆ. ಆ ಸಮಯದಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯು ಆ ಕಟ್ಟಡವನ್ನು ಸ್ಫೋಟಿಸಲಾಗಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿರುವ ವೀಡಿಯೊಗೆ ಪ್ರಸ್ತುತ ನಡೆಯುತ್ತಿರುವ ಇಸ್ರೇಲಿ-ಪ್ಯಾಲೇಸ್ಟಿನಿಯನ್ ದಾಳಿಗೆ ಯಾವುದೇ ಸಂಬಂಧವಿಲ್ಲ ಎಂದು ಖಚಿತವಾಗಿ ಹೇಳಬಹುದಾಗಿದೆ.
ಒಟ್ಟಾರೆಯಾಗಿ ಈ ವೀಡಿಯೊದಲ್ಲಿ ಕಾಣುವ ಮಸೀದಿಯನ್ನು ಇಸ್ರೇಲ್ ಸೇನೆಯು ನೆಲಸಮ ಮಾಡಿಲ್ಲ..