Fake News - Kannada
 

ಈ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅಲ್ಲ

0

13 ಜುಲೈ 2024 ರಂದು, USA ನ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ US ಅಧ್ಯಕ್ಷೀಯ ಚುನಾವಣಾ ರಾಲಿಯಲ್ಲಿ ಮಾಜಿ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಪ್ರಯತ್ನಿಸಲಾಯಿತು. ಈ ಘಟನೆಯಲ್ಲಿ ಟ್ರಂಪ್ ಅವರ ಕಿವಿಯ ಮೇಲ್ಭಾಗಕ್ಕೆ ಗುಂಡು ತಗುಲಿ ಗಾಯದಿಂದ ರಕ್ತಸ್ರಾವವಾಗಿತ್ತು. ಗುಂಡಿನ ದಾಳಿಯಿಂದ  ಟ್ರಂಪ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ತಕ್ಷಣ ಎಚ್ಚೆತ್ತ ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಶಂಕಿತನನ್ನು ಗುರುತಿಸಿ ಗುಂಡಿಕ್ಕಿ ಕೊಂದಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಟ್ರಂಪ್ ಹತ್ಯೆಯ ಯತ್ನದ ಶಂಕಿತನನ್ನು ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿದೆ. ಈ ಹಿನ್ನಲೆಯಲ್ಲಿ ಟ್ರಂಪ್ ಹತ್ಯೆಯ ಯತ್ನದ ವೀಡಿಯೋ ಎಂದು ಹೇಳಲಾದ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ “ನನ್ನ ಹೆಸರು ಥಾಮಸ್ ಮ್ಯಾಥ್ಯೂ ಕ್ರೂಕ್ಸ್, ನಾನು ರಿಪಬ್ಲಿಕನ್ನರನ್ನು ದ್ವೇಷಿಸುತ್ತೇನೆ, ನಾನು ಟ್ರಂಪ್ ಅವರನ್ನು ದ್ವೇಷಿಸುತ್ತೇನೆ” ಎಂದು ಹೇಳುವ ವ್ಯಕ್ತಿಯನ್ನು ನಾವು ಈ ವೀಡಿಯೊದಲ್ಲಿ ನೋಡಬಹುದು. ವೀಡಿಯೊದಲ್ಲಿರುವ ವ್ಯಕ್ತಿ ಟ್ರಂಪ್‌ರ ಶೂಟರ್ ಎಂದು ಹೇಳಿಕೊಂಡು ಹಲವಾರು ಪ್ರಮುಖ ಮಾಧ್ಯಮಗಳು ಕಥೆಗಳನ್ನು ಪ್ರಕಟಿಸಿವೆ.  ಹಾಗಾಗಿ ಇಲ್ಲಿ ಮಾಡಲಾದ ಕ್ಲೇಮ್ ಎಷ್ಟರಮಟ್ಟಿಗೆ ನಿಜ ಎಂಬುದನ್ನು ಪರಿಶೀಲಿಸೋಣ. 

ಕ್ಲೇಮ್: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಟ್ರಂಪ್ ಹತ್ಯೆಗೆ ಯತ್ನಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅಲ್ಲ. ಟ್ರಂಪ್ ಹತ್ಯೆಗೆ ಯತ್ನಿಸಿದ ಶೂಟರ್‌ನ ಫೋಟೋವನ್ನು ಹಲವು ಮಾಧ್ಯಮಗಳು ಪ್ರಸಾರ ಮಾಡಿದ್ದಾರೆ.  ‘@jewgazing’ ಎಂಬ X(Twitter) ಬಳಕೆದಾರರು ಟ್ರಂಪ್ ಅವರ ಶೂಟರ್ ಅವರಿಗೆ ಸಾಕಷ್ಟು ಹೋಲಿಕೆಯನ್ನು ಹೊಂದಿರುವುದರಿಂದ ತಮಾಷೆಗಾಗಿ ಈ ವೀಡಿಯೊವನ್ನು ರಚಿಸಿ, ಹಂಚಿಕೊಂಡಿದ್ದಾರೆ. ಟ್ರಂಪ್ ಹತ್ಯೆಗೆ ಯತ್ನಿಸಿದ ನಿಜವಾದ ಶೂಟರ್ ಎಂದು ಹೇಳಿಕೊಳ್ಳುವ ಈ ವೀಡಿಯೊ ವೈರಲ್ ಆಗಿದ್ದು, @jewgazing ಅವರು ತಮ್ಮ X(ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿ ಅವರು ಥಾಮಸ್ ಅಲ್ಲ ಮತ್ತು ಟ್ರಂಪ್ ಹತ್ಯೆಗೆ ಯತ್ನಿಸಿದ ನಿಜವಾದ ಶೂಟರ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಯುಎಸ್ ಸೀಕ್ರೆಟ್ ಸರ್ವಿಸ್ ಏಜೆಂಟರು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ತಕ್ಷಣವೇ ಗುರುತಿಸಿ ಗುಂಡಿಕ್ಕಿ ಕೊಂದಿದ್ದಾರೆ. ಇದಾದ ನಂತರವೂ  ವೀಡಿಯೊದಲ್ಲಿರುವ ವ್ಯಕ್ತಿಯ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ತಿಳಿದಿಲ್ಲ.  ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ಈ ವೀಡಿಯೊದ ಕುರಿತಾದ ಮಾಹಿತಿಗಾಗಿ ಮತ್ತು ಪ್ರಸ್ತುತ  ವೈರಲ್ ಆಗಿರುವ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಅನೇಕ X(ಟ್ವಿಟ್ಟರ್) ಪೋಸ್ಟ್‌ಗಳು ಕಂಡುಬಂದಿವೆ, ವೀಡಿಯೊದಲ್ಲಿರುವ ವ್ಯಕ್ತಿ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಂತಕ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅಲ್ಲ (ಇಲ್ಲಿ, & ಇಲ್ಲಿ). ಅಲ್ಲದೆ, ಕೆಲವು X(Twitter) ಬಳಕೆದಾರರು ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯನ್ನು X(Twitter) ಬಳಕೆದಾರ @jewgazing ಎಂದು ಗುರುತಿಸಿದ್ದಾರೆ.

ತದನಂತರ ನಾವು X(Twitter) ನಲ್ಲಿ @jewgazing ಅವರ ಪ್ರೊಫೈಲ್ ಅನ್ನು ನೋಡಿದೆವು. ಅಲ್ಲಿ ನಮಗೆ  ಕೇವಲ ಆರು ಪೋಸ್ಟ್‌ಗಳು ಮಾತ್ರ ಕಂಡುಬಂದಿವೆ. ಅಲ್ಲದೆ, ಅವರು ಕೆಲವು ಗಂಟೆಗಳ ಹಿಂದೆ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ ಎಂದು ಕಂಡುಕೊಂಡಿದ್ದೇವೆ. 

ಕೆಲವು X (Twitter) ಬಳಕೆದಾರರು ‘@jewgazing’ ನ ಹಳೆಯ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದರಿಂದ, ನಾವು ಈ ಖಾತೆಯ ಹಳೆಯ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಹುಡುಕಿದ್ದೇವೆ. ಇಲ್ಲಿ ಹಲವಾರು ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು (ಇಲ್ಲಿ) ಕಂಡುಕೊಂಡೆವು. ಈ ಆರ್ಕೈವ್ ಮಾಡಿದ ಪೋಸ್ಟ್‌ಗಳನ್ನು ನೋಡಿದಾಗ,ಟ್ರಂಪ್ ಹತ್ಯೆಗೆ ಯತ್ನಿಸಿದ ಶೂಟರ್ (ಇಲ್ಲಿ) ನಂತೆಯೇ  ನೀಲಿ ಟೀ ಶರ್ಟ್ ಮತ್ತು ಉದ್ದನೆಯ ಕೂದಲಿನೊಂದಿಗೆ @jewgazing X(Twitter) ನಲ್ಲಿ ಶೂಟರ್‌ನ ಸೈಡ್ ಪ್ರೊಫೈಲ್ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಅಲ್ಲದೆ, ವೈರಲ್ ವೀಡಿಯೊವನ್ನು ಮತ್ತೊಂದು ಪೋಸ್ಟ್‌ನಲ್ಲಿ (ಇಲ್ಲಿ) ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ.

ಟ್ರಂಪ್ ಹತ್ಯೆಗೆ ಯತ್ನಿಸಿದ ನಿಜವಾದ ಶೂಟರ್ ಎಂದು ಹೇಳುವ ವೀಡಿಯೊ ವೈರಲ್ ಆದ ನಂತರ, @jewgazing ಅವರು ಅದನ್ನು ತಮಾಷೆಗಾಗಿ (ಇಲ್ಲಿ) ಮಾಡಿದ್ದೇನೆ ಎಂದು ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಹಾಕಬಾರದಿತ್ತು ಎಂದೂ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.  ಅಲ್ಲದೆ, ಅವರು ಅದು  ಥಾಮಸ್ ಅಲ್ಲ ಮತ್ತು ಟ್ರಂಪ್ ಹತ್ಯೆಗೆ ಯತ್ನಿಸಿದ ನಿಜವಾದ ಶೂಟರ್ ಅಲ್ಲ ಎಂದು ಸ್ಪಷ್ಟಪಡಿಸುವ ಪೋಸ್ಟ್ (ಇಲ್ಲಿ) ಕಂಡುಬಂದಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಮೆರಿಕದ ರಹಸ್ಯ ಸೇವಾ ಏಜೆಂಟರು ತಕ್ಷಣವೇ ಗುರುತಿಸಿ ಅಲ್ಲೇ  ಗುಂಡಿಕ್ಕಿ ಕೊಂದಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಈ ಘಟನೆಯ ನಂತರದ  ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಆಧಾರದ ಮೇಲೆ, ಈ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿಲ್ಲ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇನ್ನು ತಿಳಿದು ಬಂದಿಲ್ಲ.

ಕೊನೆಯದಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಯುಎಸ್ಎ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅಲ್ಲ.

Share.

Comments are closed.

scroll