ಮಹಿಳೆಯೊಬ್ಬರು ಹಿಂದೂಗಳಿಗೆ ಮತ್ತೊಂದು ಸಮುದಾಯದ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡುತ್ತಿರುವ ವೀಡಿಯೊವೊಂದು ವೈರಲ್ ಆಗುತ್ತಿದ್ದು, ತಾನು ಮುಸ್ಲಿಂ ಮಹಿಳೆ ಎಂದು ಬ್ರಾಹ್ಮಣ ಸಭೆಯಲ್ಲಿ ಹಿಂದೂಗಳಿಗೆ ಎಚ್ಚರಿಕೆ ನೀಡುತ್ತಿರುವುದನ್ನು ತೋರಿಸಲಾಗಿದೆ. ವೀಡಿಯೊದಲ್ಲಿನ ಮಹಿಳೆ ತಾಲಿಬಾನ್, ಕನ್ಹಯ್ಯಾ ಲಾಲ್ ಮತ್ತು ನೂಪುರ್ ಶರ್ಮಾ ಘಟನೆಗಳನ್ನು ಉಲ್ಲೇಖಿಸುವುದನ್ನು ಕೇಳಬಹುದು. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಹಿಂದೂ ಸಮುದಾಯಕ್ಕೆ ಸಲಹೆ ನೀಡುತ್ತಿರುವ ಮುಸ್ಲಿಂ ಮಹಿಳೆಯ ವೀಡಿಯೊ.
ಫ್ಯಾಕ್ಟ್: ವೀಡಿಯೊದಲ್ಲಿ ತೋರಿಸಿರುವ ವ್ಯಕ್ತಿ ಪ್ರಸಿದ್ಧ ಹಿಂದೂ ವೈದಿಕ ಪ್ರಚಾರಕಿ. ಹಲವಾರು ಸುದ್ದಿ ವರದಿಗಳು ಅವರನ್ನು ಹಿಂದೂ ಎಂದು ಗುರುತಿಸಿವೆ. ವೈರಲ್ ಕ್ಲೇಮ್ ಗೆ ಪ್ರತಿಕ್ರಿಯೆಯಾಗಿ, ಅವರ ಮೇಲಿನ ಆರೋಪಗಳನ್ನು ಸುಳ್ಳು ಎಂದು ತಿಳಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯು ಹಿಂದೂಗಳಿಗೆ ಎಚ್ಚರಿಕೆ ನೀಡುವ ಈ ಹೇಳಿಕೆಗಳನ್ನು ನೀಡಿದ್ದಾರೆ; ಆದರೆ, ಆಕೆ ಮುಸ್ಲಿಂ ಅಲ್ಲ, ಹಿಂದೂ ಎಂಬುದನ್ನು ಗಮನಿಸುವುದು ಮುಖ್ಯ. ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಅದೇ ದೃಶ್ಯಗಳನ್ನು ತೋರಿಸುವ ಯುಟ್ಯೂಬ್ನ ಕಿರು ವೀಡಿಯೊಗೆ ಕಾರಣವಾಯಿತು. ಈ ಕಿರು ವೀಡಿಯೊವನ್ನು 26 ನವೆಂಬರ್ 2023 ರಂದು ವಿದುಷಿ ಅಂಜಲಿ ಆರ್ಯ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಚಾನೆಲ್ ಅವರ ಧರ್ಮೋಪದೇಶಗಳನ್ನು ಪ್ರದರ್ಶಿಸುವ ಹಲವಾರು ವೀಡಿಯೊಗಳನ್ನು ಒಳಗೊಂಡಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಡಿದ ನಂತರ, ಆ ಮಹಿಳೆಯ ಕುರಿತು 2019 ರ ಸುದ್ದಿ ವರದಿಯನ್ನು ನಮಗೆ ದೊರಕಿದೆ. ಈ ರೆಪೋರ್ನಲ್ಲಿ ಆಕೆಯನ್ನು ಆರ್ಯ ಸಮಾಜದೊಂದಿಗೆ ಸಂಯೋಜಿತವಾಗಿರುವ ಅಂಜಲಿ ಆರ್ಯ ಎಂದು ಗುರುತಿಸಿದೆ. ಮತ್ತಷ್ಟ ಮಾಹಿತಿಯ ಪ್ರಕಾರ, ಅಂಜಲಿಯ ತಂದೆಯ ಹೆಸರು ಧನಿರಾಮ್, ಆಕೆಯ ತಾಯಿ ನಿರ್ಮಲಾ ದೇವಿ ಮತ್ತು ಆಕೆಯ ಅಜ್ಜ ಓಂ ಪ್ರಕಾಶ್ ಆರ್ಯ ಅವರು ಆಕೆಯ ಬಾಲ್ಯದಲ್ಲಿ ಆರ್ಯ ಸಮಾಜ ಸಮ್ಮೇಳನಗಳಿಗೆ ಅವರೊಂದಿಗೆ ಹೋಗುತ್ತಿದ್ದರು ಎಂದು ತಿಳಿಸಿದೆ. ಈ ವಿವರಗಳು ಆಕೆಯ ಹಿಂದೂ ಕುಟುಂಬದ ಹಿನ್ನೆಲೆಯನ್ನು ಸೂಚಿಸುತ್ತವೆ.

ಈಕೆಯನ್ನು ವೈದಿಕ ಪ್ರಚಾರಕಿ ಎಂದು ಗುರುತಿಸಿದ ಮತ್ತೊಂದು ರಿಪೋರ್ಟ್ನ್ನು ಇಲ್ಲಿ ಕಾಣಬಹುದು. ವೀಡಿಯೊ ವೈರಲ್ ಆಗುತ್ತಿದ್ದಂತೆ, ಮಾಧ್ಯಮ ಸಂಸ್ಥೆ ಲಲ್ಲಂಟಾಪ್ ವೈರಲ್ ಹೇಳಿಕೆಯ ಕುರಿತು ಸ್ಪಷ್ಟೀಕರಣಕ್ಕಾಗಿ ಅವರನ್ನು ಸಂಪರ್ಕಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ತಾನು ಮುಸ್ಲಿಂ ಅಲ್ಲ ಬದಲಾಗಿ ಸನಾತನ ಕುಟುಂಬಕ್ಕೆ ಸೇರಿದವರು ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೊದಲ್ಲಿ ಹಿಂದೂಗಳಿಗೆ ಸಲಹೆ ನೀಡುತ್ತಿರುವ ವ್ಯಕ್ತಿ ಮುಸ್ಲಿಂ ಅಲ್ಲ,ಬದಲಿಗೆ ಜನಪ್ರಿಯ ವೈದಿಕ ಪ್ರಚಾರಕಿ ಎಂಬುವುದು ಸ್ಪಷ್ಟವಾಗಿದೆ.