Fake News - Kannada
 

ರಾಹುಲ್ ಗಾಂಧಿಯವರ ಸಭೆಗಳ ಸಮಯದಲ್ಲಿ ವ್ಯಕ್ತಿಯೋರ್ವ ಒಂದು ಸಂದರ್ಭದಲ್ಲಿ ಪೋರ್ಟರ್ ಆಗಿ ಮತ್ತು ಇನ್ನೊಂದು ಸಂದರ್ಭದಲ್ಲಿ DU ವಿದ್ಯಾರ್ಥಿಯಾಗಿ ನಟಿಸಿದ್ದಾರೆ ಎಂಬ ಹೇಳಿಕೆ ಸುಳ್ಳು

0

ರಾಹುಲ್ ಗಾಂಧಿಯವರು ದೆಹಲಿ ವಿಶ್ವವಿದ್ಯಾಲಯದ (DU) ರೈಲ್ವೆ ಪೋರ್ಟರ್‌ಗಳು ಮತ್ತು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವನ್ನು ತೋರಿಸುವ ಎರಡು ಫೋಟೋಗಳ ಕೊಲಾಜ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮೊದಲು ರೈಲ್ವೆ ಪೋರ್ಟರ್‌ಗಳೊಂದಿಗಿನ ಸಭೆಯಲ್ಲಿ ಪೋರ್ಟರ್ ಆಗಿ ಕಾಣಿಸಿಕೊಂಡು ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ  (ಇಲ್ಲಿ) ಎಂದು ಹೇಳಲಾಗಿದೆ. ಹಾಗಾದರೆ  ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ರಾಹುಲ್ ಗಾಂಧಿಯವರು ಈ ಹಿಂದೆ ರೈಲ್ವೆ ಪೋರ್ಟರ್‌ಗಳೊಂದಿಗಿನ ಸಂವಾದದ ಸಮಯದಲ್ಲಿ ಪೋರ್ಟರ್ ಆಗಿ ಕಾಣಿಸಿಕೊಂಡಿದ್ದ ವ್ಯಕ್ತಿ, ನಂತರ ಮೇ 2025 ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ಸಮಯದಲ್ಲಿ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. 

ಫ್ಯಾಕ್ಟ್: ವೈರಲ್ ಫೋಟೋಗಳಲ್ಲಿ ಸುತ್ತುವರೆದಿರುವ ಇಬ್ಬರೂ ವ್ಯಕ್ತಿಗಳು ಬೇರೆ ಬೇರೆ ಜನರು. ಮೊದಲ ಫೋಟೋದಲ್ಲಿರುವ  ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಪ್ರಸ್ತುತ ಜಂಟಿ ಕಾರ್ಯದರ್ಶಿ ಲೋಕೇಶ್ ಚೌಧರಿ. ಇನ್ನೊಂದು ಫೋಟೋದಲ್ಲಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿರುವ ಕೇದಾರ್ ಲಾಲ್ ಮೀನಾ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ತಪ್ಪು.

ವೈರಲ್ ಆಗಿರುವ ಫೋಟೋಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಮೊದಲ ಫೋಟೋವನ್ನು ಮೇ 27, 2025 ರಂದು ಕಾಂಗ್ರೆಸ್ ಮತ್ತು ಭಾರತೀಯ ಯುವ ಕಾಂಗ್ರೆಸ್‌ನ ಅಧಿಕೃತ X ಅಕೌಂಟ್ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಕ್ಯಾಪ್ಶನ್ ಪ್ರಕಾರ, ಈ ಫೋಟೋವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳ ನಡುವಿನ ಸಭೆಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಮೇ 22, 2025 ರಂದು, ರಾಹುಲ್ ಗಾಂಧಿ ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವನ್ನು ಭೇಟಿಯಾದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಹೆಚ್ಚಿನ ತನಿಖೆಯಲ್ಲಿ ನಾವು ವೈರಲ್ ಫೋಟೋದಲ್ಲಿರುವ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) ಪ್ರಸ್ತುತ ಜಂಟಿ ಕಾರ್ಯದರ್ಶಿ ಲೋಕೇಶ್ ಚೌಧರಿ ಎಂದು ತಿಳಿದುಬಂದಿದೆ. ಅವರು X ನಲ್ಲಿ (ಹಿಂದೆ ಟ್ವಿಟರ್) 28 ಮೇ 2025 ರಂದು ಪೋಸ್ಟ್ ಮಾಡಿದ್ದನ್ನು ಸಹ ನಾವು ಕಂಡುಕೊಂಡಿದ್ದೇವೆ. ವೈರಲ್ ಕ್ಲೈಮ್‌ಗೆ ಪ್ರತಿಕ್ರಿಯೆಯಾಗಿ, ಚೌಧರಿ ಅದನ್ನು ಅಲ್ಲಗೆಳೆದಿದ್ದಾರೆ.  ಈ ಫೋಟೋಗಳನ್ನು ಬಿಜೆಪಿ ಪರ ಸಾಮಾಜಿಕ ಮಾಧ್ಯಮ ಯೂಸೆರ್ಸ್ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಹಲವಾರು ಫ್ಯಾಕ್ಟ್-ಚೆಕ್ ಸಂಸ್ಥೆಗಳು ಅವರನ್ನು ಸಂಪರ್ಕಿಸಿದ್ದು, ಅವರು ವೈರಲ್ ಕ್ಲೈಮ್ ಸುಳ್ಳು ಮತ್ತು ಅವರು ಇತರ ಫೋಟೋದಲ್ಲಿ ತೋರಿಸಿರುವ ಪೋರ್ಟರ್ ಅಲ್ಲ ಎಂದು ದೃಢಪಡಿಸಿದರು (ಇಲ್ಲಿ, ಇಲ್ಲಿ).

ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಎರಡನೇ ಫೋಟೋವನ್ನು ಮಾರ್ಚ್ 01, 2025 ರಂದು ರಾಹುಲ್ ಗಾಂಧಿ ನವದೆಹಲಿಯಲ್ಲಿ ರೈಲ್ವೆ ಪೋರ್ಟರ್‌ಗಳ ಗುಂಪನ್ನು ಭೇಟಿಯಾದಾಗ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ). ಈ ಪೋರ್ಟರ್‌ಗಳು ನವದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತದ ಸಮಯದಲ್ಲಿ ಪ್ರಯಾಣಿಕರನ್ನು ಹೇಗೆ ರಕ್ಷಿಸಿದರು ಎಂಬುದರ ಕುರಿತು ಮಾತನಾಡಿದರು. ಫೆಬ್ರವರಿ 15, 2025 ರ ರಾತ್ರಿ (ಇಲ್ಲಿ) ನಡೆದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡರು. ರಾಹುಲ್ ಗಾಂಧಿ ನವದೆಹಲಿ ರೈಲ್ವೆ ನಿಲ್ದಾಣದ ಪೋರ್ಟರ್‌ಗಳೊಂದಿಗಿನ ಈ ಸಭೆಯ ವೀಡಿಯೊ ಮತ್ತು ಫೋಟೋಗಳನ್ನು ಮಾರ್ಚ್ 01, 2025 ರಂದು ತಮ್ಮ ಅಧಿಕೃತ X (ಹಿಂದಿನ ಟ್ವಿಟರ್) ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ತನಿಖೆಯ ಸಮಯದಲ್ಲಿ, ಮಾರ್ಚ್ 01, 2025 ರಂದು ANI ಪ್ರಕಟಿಸಿದ ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಅದರಲ್ಲಿ ವೈರಲ್ ಚಿತ್ರದಲ್ಲಿ ಸುತ್ತುವರೆದಿರುವ ಪೋರ್ಟರ್‌ನ ಫೋಟೋವನ್ನು ಸ್ಪಷ್ಟವಾಗಿ ಕಾಣಬಹುದು. ಇದನ್ನು ವೈರಲ್ ಕೊಲಾಜ್‌ನಲ್ಲಿರುವ ವ್ಯಕ್ತಿಗಳ ಫೋಟೋಗಳೊಂದಿಗೆ ಹೋಲಿಸಿದಾಗ, ಅವರು ಬೇರೆ ಬೇರೆ ಜನರು ಎಂದು ನಾವು ಕಂಡುಕೊಂಡಿದ್ದೇವೆ. 

ಇದಲ್ಲದೆ, ವೈರಲ್ ಪೋಸ್ಟ್‌ಗಳಲ್ಲಿ ಮುಖವನ್ನು ವೃತ್ತಾಕಾರದಲ್ಲಿ ಚಿತ್ರಿಸಲಾದ ಪೋರ್ಟರ್ ಅನ್ನು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಗುರುತಿಸಿದೆ. ಅವರನ್ನು ಸಂಪರ್ಕಿಸಿದಾಗ, ಮೀನಾ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ಗೆ ದೃಢಪಡಿಸಿದರು, ಅವರು ವೈರಲ್ ಫೋಟೋದಲ್ಲಿ ಇತರ ಪೋರ್ಟರ್‌ಗಳು ಮತ್ತು ರಾಹುಲ್ ಗಾಂಧಿಯೊಂದಿಗೆ ಕುಳಿತಿರುವ ವ್ಯಕ್ತಿ ಬೇರೆ ಬೇರೆ ಎಂದು ತಿಳಿಸಿದರು. ಆದರೆ ಅವರು DUSU ಫೋಟೋದಲ್ಲಿರುವ ವ್ಯಕ್ತಿ ಅಲ್ಲ. ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಪ್ರಕಾರ, ಮೀನಾ ರಾಜಸ್ಥಾನದ ದೌಸಾ ಮೂಲದವರು ಮತ್ತು 2012 ರಿಂದ ನವದೆಹಲಿ ರೈಲ್ವೆ ನಿಲ್ದಾಣದ ಅಜ್ಮೇರಿ ಗೇಟ್‌ನಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಇಂಡಿಯಾ ಟುಡೇಗೆ ತಮ್ಮ ಇತ್ತೀಚಿನ ಛಾಯಾಚಿತ್ರವನ್ನು ಸಹ ನೀಡಿದ್ದಾರೆ. 

ಈ ಎಲ್ಲಾ ಮಾಹಿತಿಯಿಂದ, ವೈರಲ್ ಫೋಟೋಗಳಲ್ಲಿ ವೃತ್ತಾಕಾರದಲ್ಲಿ ಚಿತ್ರಿಸಲಾದ ಇಬ್ಬರು ವ್ಯಕ್ತಿಗಳು ವಿಭಿನ್ನ ಜನರು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರ ಸಭೆಗಳ ಸಮಯದಲ್ಲಿ ವ್ಯಕ್ತಿಯೋರ್ವ  ಒಂದು ಸಂದರ್ಭದಲ್ಲಿ ಪೋರ್ಟರ್ ಆಗಿ ಮತ್ತು ಇನ್ನೊಂದು ಸಂದರ್ಭದಲ್ಲಿ DU ವಿದ್ಯಾರ್ಥಿಯಾಗಿ ಪೋಸ್ ನೀಡಿದ್ದಾರೆ ಎಂಬ ಕ್ಲೇಮ್  ಸುಳ್ಳು.

Share.

Comments are closed.

scroll