Fake News - Kannada
 

ವೈರಲ್‌ ವಿಡಿಯೊದಲ್ಲಿ ಡ್ಯಾನ್ಸ್ ಮಾಡುತ್ತಿರುವ ಮಗು ಇತ್ತೀಚೆಗೆ ಶಿಕ್ಷಕನಿಂದ ಕೊಲೆಯಾದ ಇಂದ್ರ ಮೇಘ್ವಾಲ್ ಅಲ್ಲ

0

ಬಾಲಕನೊಬ್ಬ ರಾಜಸ್ಥಾನಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ ಮಾಡುತ್ತಿರುವ ಬಾಲಕನನ್ನು, ಇತ್ತೀಚೆಗೆ ರಾಜಸ್ಥಾನದ ಜಲೋರ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ತನ್ನ ಶಾಲಾ ಶಿಕ್ಷಕನಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟ 9 ವರ್ಷದ ದಲಿತ ವಿದ್ಯಾರ್ಥಿ ಇಂದ್ರ ಕುಮಾರ್ ಮೇಘ್ವಾಲ್ ಎಂದು ಪ್ರತಿಪಾದಿಸಿ ವಿಡಿಯೊವನ್ನು ವೈರಲ್ ಮಾಡಲಾಗಿದೆ.

ಪ್ರತಿಪಾದನೆ : ಒಂಬತ್ತು ವರ್ಷದ ಬಾಲಕ ಇಂದ್ರ ಮೇಘವಾಲ್‌ನ ಹಳೆಯ ನೃತ್ಯದ ವೀಡಿಯೋ, ಶಿಕ್ಷಕನಿಂದ ಹೊಡೆದು ಸಾಯಿಸಲಾಗಿದೆ ಎಂದು ಹೇಳಲಾಗಿದೆ.

ನಿಜಾಂಶ : ವೀಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಹುಡುಗ ಹರೀಶ್ ಭೀಲ್, ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಚೋಹ್ತಾನ್ ಬ್ಲಾಕ್‌ನ ಗೋಮ್ರಖ್ ಧಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ2ನೇ ತರಗತಿ ವಿದ್ಯಾರ್ಥಿ. ಶಿಕ್ಷಕರೊಬ್ಬರು ಹೊಡೆದು ಕೊಂದಿದ್ದಾರೆ ಎನ್ನಲಾದ ಇಂದ್ರ ಮೇಘವಾಲ್ ಅಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇಂದ್ರ ಮೇಘವಾಲ್‌ನ ಚಿತ್ರಗಳನ್ನು ವೈರಲ್ ವೀಡಿಯೊದಲ್ಲಿ ನೃತ್ಯ ಮಾಡುತ್ತಿರುವ ಹುಡುಗನೊಂದಿಗೆ ಹೋಲಿಕೆ ಮಾಡಿದಾಗ ಎರಡೂ ಚಿತ್ರಗಳು ವಿಭಿನ್ನವಾಗಿವೆ ಎಂದು ಕಂಡುಕೊಂಡಿದ್ದೇವೆ.

ವೀಡಿಯೊವನ್ನು ಕೀಫ್ರೇಮ್‍ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 04 ಆಗಸ್ಟ್ 2022 ರಂದು “ಜೀವರಾಜ್ CTN ಬಾರ್ಮರ್” ಅವರು ಅಪ್‌ಲೋಡ್ ಮಾಡಿದ ಹಳೆಯ ವೀಡಿಯೊವನ್ನು YouTube ನಲ್ಲಿ ಲಭ್ಯವಾಗಿದೆ. ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವ ಹಾಡನ್ನು ರಾಜಸ್ಥಾನಿ ಜಾನಪದ ಗೀತೆ ಎಂದು ಗುರುತಿಸಲಾಗಿದೆ.

 ಕೆಲವು  ಸಂಬಂಧಿತ ಕೀವರ್ಡ್‍ಗಳನ್ನುತೆಗೆದುಕೊಂಡು ಸರ್ಚ್ ಮಾಡಿದಾಗ ಜುಲೈ 30, 2022 ರಂದು ಗುಮ್ರಖ್ ಧಾಮ್ ತಾರಾತ್ರಾ, ಚೋಹ್ತಾನ್, ಬಾರ್ಮರ್ ಅವರು ಫೇಸ್‌ಬುಕ್‌ನಲ್ಲಿ ಅಪ್‍ಲೋಡ್‍ ಮಾಡಲಾದ ವೀಡಿಯೊವನ್ನು ಕಂಡುಕೊಂಡಿದ್ದೇವೆ, (ಬ್ಯಾಗ್ ರಹಿತ ದಿನದಂದು, 2 ನೇ ತರಗತಿ ವಿದ್ಯಾರ್ಥಿ ಹರೀಶ್ ಅವರಿಂದ ಅದ್ಭುತ ಮತ್ತು ಆತ್ಮವಿಶ್ವಾಸದ ಪ್ರದರ್ಶನ). ವೈರಲ್ ವೀಡಿಯೊ ಈ ವೀಡಿಯೊದ ಎಡಿಟ್ ಮಾಡಿದ ಆವೃತ್ತಿಯಾಗಿದೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ತಾರ್ ಚೋಹ್ತಾನ್ ಗ್ರಾಮದ ಗೋಮ್ರಖ್ ಧಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಫೇಸ್‌ಬುಕ್ ಪ್ರೊಫೈಲ್ ಲಭ್ಯವಾಗಿದ್ದು, ಪ್ರೊಫೈಲ್ ಅನ್ನು ಮತ್ತಷ್ಟು ಸರ್ಚ್ ಮಾಡಿದಾಗ, ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಅದೇ ಶಾಲೆಯ ಶಿಕ್ಷಕ ಕೈಲಾಶ್ ಭಾಟಿ ಎಂ ಸ್ಪಷ್ಟಪಡಿಸಿರುವ ಪೋಸ್ಟ್‍ ಲಭ್ಯವಾಗಿದೆ.  “ಸಹೋದರರೇ ಇದು ಇಂದ್ರ ಕುಮಾರ್ ಮೇಘ್ವಾಲ್ ಅಲ್ಲ. ಈ ಮಗು ಹರೀಶ್ ಭಿಲ್ ಹೈಯರ್ ಪ್ರೈಮರಿ ಸ್ಕೂಲ್ ಗೋಮಾರ್ಖ್ ಧಾಮ್ (ಬಾರ್ಮರ್) ನಲ್ಲಿ ವಿದ್ಯಾರ್ಥಿ. ದಯವಿಟ್ಟು ತಪ್ಪು ವಿಡಿಯೋ ಶೇರ್ ಮಾಡಬೇಡಿ”

ವೈರಲ್ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಬಾಲಕ ಇಂದ್ರ ಕುಮಾರ್ ಮೇಘ್ವಾಲ್‌ ಅಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವೈರಲ್ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ಬಾಲಕನ ಚಿತ್ರ, ಥಳಿತಕ್ಕೊಳಗಾಗಿ ಸಾವನಪ್ಪಿದ ದಲಿತ ವಿದ್ಯಾರ್ಥಿ ಇಂದ್ರ ಮೇಘ್ವಾಲ್‌ ಚಿತ್ರವನ್ನು ಹೋಲಿಕೆ ಮಾಡಿದಾಗ ಎರಡು ಬೇರೆ ಬೇರೆ ಎಂಬುದು ಸ್ಪಷ್ಟವಾಗುತ್ತದೆ. ಈ ಫೋಟೋಗಳ ನಡುವೆ ವ್ಯತ್ಯಾಸಗಳಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ಹಾಡಿಗೆ ನೃತ್ಯ ಮಾಡುತ್ತಿರುವ ಬಾಲಕನ ಹೆಸರು ಹರೀಶ್ ಎಂದಾಗಿದೆ. ಈ ಮಗು ರಾಜಸ್ಥಾನದ ಬಾರ್ಮರ್‌ನಲ್ಲಿರುವ ಗೋಮ್ರಖ್ ಧಾಮ್ ಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ರಾಜಸ್ಥಾನ ಸರ್ಕಾರದ ಜನಸೂಚ್ನಾ ಪೋರ್ಟಲ್‌ನಿಂದ ಹರೀಶ್ ಭೀಲ್ ಅವರ ವಿದ್ಯಾರ್ಥಿ ವಿವರಗಳನ್ನು ನಾವು ಕಂಡುಕೊಂಡಿದ್ದೇವೆ.

ಇದರಿಂದ ಸುಳಿವು ಪಡೆದು, ನಾವು ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಕುಟುಂಬದ ಸಂಪರ್ಕ ವಿವರಗಳನ್ನು ಹುಡುಕಿದ್ದೇವೆ ಮತ್ತು ಅವರ ತಂದೆ ಪೂಂಜಾ ರಾಮ್ ಅವರ ವಿವರಗಳು ಮತ್ತು ಸಂಪರ್ಕ ಸಂಖ್ಯೆ ಕಂಡುಬಂದಿದೆ. ಆದರೆ ಸದ್ಯಕ್ಕೆ ಅವರ ನಂಬರ್ ರೀಚ್ ಆಗಿಲ್ಲ. ನಾವು ಅಗತ್ಯವಿರುವ ಮಾಹಿತಿಯನ್ನು ಪಡೆದಾಗ ನಾವು ಈ ಲೇಖನವನ್ನು ಅಪ್ಡೇಟ್ ಮಾಡಲಾಗುವುದು.

ಒಟ್ಟಾರೆಯಾಗಿ ಹೇಳುವುದಾದರೆ, ವೀಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಹುಡುಗ ಹರೀಶ್ ಭೀಲ್, ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಚೋಹ್ತಾನ್ ಬ್ಲಾಕ್‌ನ ಗೋಮ್ರಖ್ ಧಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ2ನೇ ತರಗತಿ ವಿದ್ಯಾರ್ಥಿ. ಶಿಕ್ಷಕರೊಬ್ಬರು ಹೊಡೆದು ಕೊಂದಿದ್ದಾರೆ ಎನ್ನಲಾದ ಇಂದ್ರ ಮೇಘವಾಲ್ ಅಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll