Fake News - Kannada
 

ಉದ್ದವ್ ಠಾಕ್ರೆ ಕಚೇರಿಯಲ್ಲಿ ಮೊದಲಿನಿಂದಲೂ ಶಿವಾಜಿ ಮತ್ತು ಬಾಳ್ ಠಾಕ್ರೆ ಫೋಟೋಗಳು ಇದ್ದವು

0

ಸಾಮಾಜಿಕ ಮಾಧ್ಯಮದಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಈ ಮೊದಲು ಉದ್ದವ್ ಠಾಕ್ರೆ ಕಚೇರಿಯಲ್ಲಿ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಅವರ ಫೋಟೋಗಳು ಕಾಣುತ್ತಿರಲಿಲ್ಲ. ಶಿವಸೇನೆ ಶಾಸಕರ ಬಂಡಾಯದ ನಂತರ ಉದ್ಧವ್ ಠಾಕ್ರೆ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಅವರನ್ನು ನೆನಪಿಸಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಎರಡು ಫೋಟೋಗಳ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಉದ್ದವ್ ಠಾಕ್ರೆ ಈ ಮೊದಲು ತಮ್ಮ ಕಚೇರಿಯಲ್ಲಿ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಫೋಟೋವನ್ನು ಇರಿಸಿರಲಿಲ್ಲವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಶಿವಸೇನೆ ಶಾಸಕರ ಇತ್ತೀಚಿನ ಬಂಡಾಯದ ಎದ್ದ ನಂತರ ಉದ್ಧವ್ ಠಾಕ್ರೆ ಅವರು ಶಿವಾಜಿ ಮತ್ತು ಬಾಳ್ ಠಾಕ್ರೆ ಅವರ ಫೋಟೋಗಳನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಹಿಂದೆ ಈ ಫೋಟೋಗಳು ಇರಲಿಲ್ಲ.

ನಿಜಾಂಶ: ಶಿವಸೇನೆಯ ಶಾಸಕರು ಬಂಡಾಯವೇಳುವ ಮೊದಲು ಸಹ ಉದ್ಧವ್ ಠಾಕ್ರೆ ಅವರು ತಮ್ಮ ಕಚೇರಿಯಲ್ಲಿ ಶಿವಾಜಿಯ ವಿಗ್ರಹ ಮತ್ತು ಬಾಳ್ ಠಾಕ್ರೆ ಅವರ ಫೋಟೋ ಇಟ್ಟುಕೊಂಡಿದ್ದರು.  ಅವರು ಜನವರಿ 2022 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಹ ಅವುಗಳನ್ನು ನೋಡಬಹುದು. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ಎರಡು ಫೋಟೋಗಳ ವಿವರಗಳನ್ನು ತಿಳಿಯಲು ಉದ್ಧವ್ ಠಾಕ್ರೆ ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಎರಡು ಫೋಟೋಗಳನ್ನು ಅವರು ಪೋಸ್ಟ್ ಮಾಡಿದ ವೀಡಿಯೊಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದಿದೆ. ಮೊದಲ ಫೋಟೋವನ್ನು ಏಪ್ರಿಲ್ 2021 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ನೋಡಬಹುದು, ಆದರೆ ಎರಡನೇ ಫೋಟೋವನ್ನು 22 ಜೂನ್ 2022 ರಂತೆ ಪೋಸ್ಟ್ ಮಾಡಿದ ವೀಡಿಯೊದಿಂದ ನೋಡಬಹುದಾಗಿದೆ.

ಆದರೆ, ಪೋಸ್ಟ್ ಪ್ರಕಾರ, ಶಿವಸೇನೆ ಶಾಸಕರು ಬಂಡಾಯವೆದ್ದ ನಂತರವೇ ಉದ್ಧವ್ ಠಾಕ್ರೆ ಅವರು ತಮ್ಮ ಹಿಂದೆ ಶಿವಾಜಿ ಪ್ರತಿಮೆ ಮತ್ತು ಬಾಳ್ ಠಾಕ್ರೆ ಅವರ ಫೋಟೋವನ್ನು ಕಚೇರಿಯಲ್ಲಿ ಹಾಕಲಿಲ್ಲ. ಮೊದಲಿನಿಂದಲೂ ಅವರನ್ನು ಕಚೇರಿಯಲ್ಲಿ ಆ ಫೋಟೊಗಳಿದ್ದವು. ಅವರು ಜನವರಿ 2022 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಹ ಅವುಗಳನ್ನು ನೋಡಬಹುದು.

ಅಲ್ಲದೆ, 2020 ಮತ್ತು 2021 ರಲ್ಲಿ ವಿವಿಧ ಸಮಯಗಳಲ್ಲಿ ಅವರು ಇತರ ಶಿವಾಜಿ ಪ್ರತಿಮೆಗಳು ಮತ್ತು ಅವರ ಹಿಂದೆ ಬಾಳ್ ಠಾಕ್ರೆ ಅವರ ಫೋಟೋಗಳೊಂದಿಗೆ ಮಾತನಾಡಿದ್ದರು, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಶಿವಸೇನೆ ಶಾಸಕರು ಬಂಡಾಯ ಏಳುವ ಮುಂಚೆಯೂ ಉದ್ಧವ್ ಠಾಕ್ರೆ ಕಚೇರಿಯಲ್ಲಿ ಶಿವಾಜಿಯ ಪ್ರತಿಮೆಯನ್ನು ಮತ್ತು ಬಾಳ್ ಠಾಕ್ರೆ ಅವರ ಫೋಟೋ ಇರುವುದನ್ನು ಕಾಣಬಹುದು. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll