ಕೋವಿಡ್ -19 ರೋಗಕ್ಕೆ ಲಸಿಕೆ (ವಾಕ್ಸಿನ್) ಕಂಡುಹಿಡಿದ ಮೊಟ್ಟಮೊದಲ ದೇಶ ರಷ್ಯಾ ಎಂದು ಹೇಳುತ್ತಾ ಒಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಹಂಚಿಕೊಳ್ಳುತ್ತಿದ್ದಾರೆ. ಆ ಪೋಸ್ಟ್ ನಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆಯೆಂದು ನೋಡೋಣ.
ಪ್ರತಿಪಾದನೆ: ರಷ್ಯಾ ಕೋವೀಡ್ -19 ಖಾಯಿಲೆಗೆ ಲಸಿಕೆ ಕಂಡುಹಿಡಿದಿದೆ.
ನಿಜಾಂಶ: ಕೋವಿಡ್ -19 ಪಿಡುಗಿಗೆ ಇನ್ನೂ ಯಾರು ಸಹ ಲಸಿಕೆ ಕಂಡುಹಿಡಿದಿಲ್ಲ. ರಷ್ಯಾದ ಗಮಲೆಯ ಇನ್ಸಿಟ್ಯೂಟ್ ನವರ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದ್ದು, ಪೋಸ್ಟ್ ನಲ್ಲಿ ಹೇಳಿರುವ ಹಾಗೆ ಎಲ್ಲ ಹಂತಗಳ ಕ್ಲಿನಿಕಲ್ ಪ್ರಯೋಗ ಇನ್ನೂ ಮುಗಿದಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ತಪ್ಪು.
ರಷ್ಯಾ ವ್ಯಾಕ್ಸಿನ್ ಬಗ್ಗೆ ಅಂತಾರ್ಜಾಲದಲ್ಲಿ ಹುಡುಕಿದಾಗ, ಪೋಸ್ಟ್ ನಲ್ಲಿ ಹೇಳಿರುವ ‘Financial Express’ ಸುದ್ದಿ ತಪ್ಪು ಎಂದು ತಿಳಿಯುತ್ತದೆ. ‘Financial Express’ನವರು ಪ್ರಕಟಿಸಿದ ಇನ್ನೊಂದು ಲೇಖನದಲ್ಲಿ ರಷ್ಯಾಗೆ ಸಂಬಂಧಿಸಿದ ಸೆಚೆನೋವ್ ವಿಶ್ವವಿದ್ಯಾಲಯದಲ್ಲಿ ಗಮಲೆಯ ಇನ್ಸಿಟ್ಯೂಟ್ ನವರ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಮಾತ್ರವೇ ಮುಗಿದಿದೆ ಎಂದು ಬರೆದಿರುವುದು ಇಲ್ಲಿ ಓದಬಹುದಾಗಿದೆ.
ಸೆಚೆನೊವ್ ವಿಶ್ವವಿದ್ಯಾಲಯದ ಅಂತರ್ಜಾಲತಾಣದಲ್ಲಿಯೂ ಸಹ ಕ್ಲಿನಿಕಲ್ ಪ್ರಯೋಗಗಳೆಲ್ಲವೂ ಮುಗಿದಿದೆ ಎಂದು ಬರೆದಿಲ್ಲ. ಎಷ್ಟನೇ ಹಂತದ ಕ್ಲಿನಿಕಲ್ ಪ್ರಯೋಗ ಪೂರ್ಣಗೊಂಡಿದೆ ಎಂಬುದಾಗಿ ಬರೆಯದಿದ್ದರೂ, ನಂತರದ ಹಂತದ ಕ್ಲಿನಿಕಲ್ ಪ್ರಯೋಗಗಳು ಹೇಗೆ ನಿರ್ವಹಿಸಬೇಕೆಂದು ಗಮಲೆಯ ಇನ್ಸಿಟ್ಯೂಟ್ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು 13 ಜುಲೈ 2020ರಂದು ತಮ್ಮ ಅಂತರ್ಜಾಲತಾಣದಲ್ಲಿ ಪ್ರಕಟಿಸಿದ ಲೇಖನದಲ್ಲಿ ತಿಳಿಸಿದ್ದಾರೆ.
15 ಜುಲೈ 2020ನ ಕೋವೀಡ್- 19 ಲಸಿಕೆಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯವರು ಬಿಡುಗಡೆ ಮಾಡಿರುವ ದಾಖಲೆಯಲ್ಲಿಯೂ ಸಹ ಗಮಲೆಯ ಇನ್ಸ್ಟಿಟ್ಯೂಟ್ ಗೆ ಸಂಬಂಧಿಸಿದ ಲಸಿಕೆಗಳು ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಇದೆಯೆಂದು ಬರೆದಿರುವುದನ್ನು ಓದಬಹುದಾಗಿದೆ. ಬೇರೆ ಸಂಸ್ಥೆಗಳ ಕೆಲವು ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿವೆ ಎಂಬುದನ್ನು ಸಹ ಆ ದಾಖಲೆಯಲ್ಲಿ ಒದಬಹುದಾಗಿದೆ.
ಅಮೆರಿಕಾ ಸರ್ಕಾರದ ಕ್ಲಿನಿಕಲ್ ಪ್ರಯೋಗಗಳ ಅಂತರ್ಜಾಲತಾಣದಲ್ಲಿ ಗಮಲೆಯ ಇನ್ಸಿಟ್ಯೂಟ್ ನವರ ಲಸಿಕೆಗಳಿಗೆ ಸಂಬಂಧಿಸಿದಂತೆ ಇರುವ ಸುದ್ದಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅದೇ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯವರ ಕ್ಲಿನಿಕಲ್ ಪ್ರಯೋಗಳ ಜಾಲತಾಣದಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹದು.
ಸಾಧಾರಣವಾಗಿ ಕ್ಲಿನಿಕಲ್ ಪ್ರಯೋಗಗಳು ನಾಲ್ಕು ಹಂತಗಳಲ್ಲಿ ನಡೆಯುತ್ತವೆಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿ ಹೇಳಿರುವುದನ್ನು ಓದಬಹುದಾಗಿದೆ.
ಕೊನೆಯದಾಗಿ, ರಷ್ಯಾ ಕೋವಿಡ್-19ಗೆ ಇನ್ನೂ ಲಸಿಕೆಯನ್ನು ಕಂಡುಹಿಡಿದಿಲ್ಲ. ಕ್ಲಿನಿಕಲ್ ಪ್ರಯೋಗಗಳು ಜಾರಿಯಲ್ಲಿವೆ.