Fake News - Kannada
 

ಗೋಧಿ ಹಿಟ್ಟನ್ನು ಲೀಟರ್ ಲೆಕ್ಕದಲ್ಲಿ ಹೇಳಿದ ರಾಹುಲ್ ಗಾಂಧಿ ತಕ್ಷಣ ತಪ್ಪನ್ನು ಸರಿಪಡಿಸಿಕೊಂಡರು

0

ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ “ಹಲ್ಲಾ ಬೋಲ್” ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರದ ಆಡಳಿತಾರೂಢ BJP ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹಿಂದೆ ₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು, ಈಗ ಲೀಟರ್‌ಗೆ ₹40 ಆಗಿದೆ’ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ‘ಹಿಟ್ಟನ್ನು ಕೆ.ಜಿ ಲೆಕ್ಕದಲ್ಲಿ ಮಾರುತ್ತಾರೋ ಅಥವಾ ಲೀಟರ್‌ ಲೆಕ್ಕದಲ್ಲಿ ಮಾರುತ್ತಾರೊ ಎಂಬುದು ರಾಹುಲ್ ಗಾಂಧಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಲಾಗುತ್ತಿದೆ. ಈ ವಿಡಿಯೊ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ರಾಹುಲ್ ಗಾಂಧಿ ಅವರು ಗೋಧಿ ಹಿಟ್ಟುನ್ನು ಲೀಟರ್‍ನಲ್ಲಿ ಅಳತೆ ‘ ಮಾಡುತ್ತಾರೆ ಎಂದು ಹೇಳಿದ್ದಾರೆ.

ನಿಜಾಂಶ : 04 ಸೆಪ್ಟೆಂಬರ್ 2022 ರಂದು ನವದೆಹಲಿಯಲ್ಲಿ ನಡೆದ ‘ಹಲ್ಲಾ ಬೋಲ್’ ರ್ಯಾಲಿಯಲ್ಲಿ ವಿವಿಧ ಸರಕುಗಳ ಬೆಲೆಗಳನ್ನು ಹೋಲಿಸುವಾಗ ರಾಹುಲ್ ಗಾಂಧಿ ಅವರು ಲೀಟರ್‌ನಲ್ಲಿ ಹಿಟ್ಟು ಮಾಪನವನ್ನು ತಪ್ಪಾಗಿ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿ ಅದನ್ನು ಕಿಲೋಗ್ರಾಂನಲ್ಲಿ ಅಳೆಯಲಾಗುತ್ತದೆ ಎಂದು ಹೇಳಿದರು. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ಮಾಡಿದ ವೀಡಿಯೊದಲ್ಲಿ ರಾಹುಲ್ ಗಾಂಧಿ ತಮ್ಮ ತಪ್ಪನ್ನು ಸರಿಪಡಿಸುವ ಭಾಗವನ್ನು ತೋರಿಸಲಾಗಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊದ ವಿವರಗಳನ್ನು ಗೂಗಲ್ ಸರ್ಚ್ ಮಾಡಿದಾಗ, ವೀಡಿಯೊದ ವಿಸ್ತೃತ ಆವೃತ್ತಿಯು 04 ಸೆಪ್ಟೆಂಬರ್ 2022 ರಂದು ‘ANI’ ಮಾಡಿದ ಟ್ವೀಟ್‌ನಲ್ಲಿ ಲಭ್ಯವಾಗಿದೆ. ANI ವೀಡಿಯೊವನ್ನು ಟ್ವೀಟ್ ಮಾಡಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಭಾನುವಾರ ಆಯೋಜಿಸಿದ್ದ ಮಹಂಗಾಯಿ ಪೆ ಹಲ್ಲಾ ಬೋಲ್ ‍ರ್ಯಾಲಿಯಲ್ಲಿ ರಾಹುಲ್ ಮಾತನಾಡಿದ್ದರು. ₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು, ಈಗ ಲೀಟರ್‌ಗೆ ₹40 ಆಗಿದೆ ಎಂದು ರಾಹುಲ್ ಹೇಳಿದರು. ಆದರೆ ತಕ್ಷಣವೇ ಕೆ.ಜಿಗೆ ಎಂದು ತಿದ್ದಿಕೊಂಡರು.

‘ಹಲ್ಲಾ ಬೋಲ್’ ರ್ಯಾಲಿಯ ಪೂರ್ಣ ವೀಡಿಯೊವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯೂಟ್ಯೂಬ್ ಚಾನೆಲ್‌ನಲ್ಲಿ 04 ಸೆಪ್ಟೆಂಬರ್ 2022 ರಂದು ಪ್ರಕಟಿಸಲಾಗಿದೆ. ವೀಡಿಯೊದ 1:52:14 ಸಮಯದ ಸ್ಟ್ಯಾಂಪ್‌ನಿಂದ, ರಾಹುಲ್ ಗಾಂಧಿಯವರು, “2014 ರಲ್ಲಿ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 410 ರೂ. ಇಂದು 1050 ರೂಪಾಯಿ. ಪೆಟ್ರೋಲ್ ಲೀಟರ್‌ಗೆ 70 ರೂ ಇತ್ತು. ಇಂದು ಪ್ರತಿ ಲೀಟರ್‌ಗೆ ಸುಮಾರು 100 ರೂ. ಡೀಸೆಲ್ ಲೀಟರ್‌ಗೆ 55 ರೂ., ಇಂದು 90 ರೂ. ಸಾಸಿವೆ ಎಣ್ಣೆ ಲೀಟರ್‌ಗೆ 90 ರೂ., ಇಂದು 200 ರೂ. ಹಾಲು ಲೀಟರ್‌ಗೆ 35 ರೂ., ಇಂದು 60 ರೂ. ಅಟ್ಟ ಲೀಟರಿಗೆ 22 ರೂ., ಇಂದು 40 ರೂ. ಆಹ್… ಕೆಜಿ”. 2014 ಮತ್ತು ಈಗ ವಿವಿಧ ಸರಕುಗಳ ಬೆಲೆಗಳನ್ನು ಹೋಲಿಸಿದಾಗ, ರಾಹುಲ್ ಗಾಂಧಿಯವರು ಗೋದಿ ಹಿಟ್ಟನ್ನು ಲೀಟರ್ ಎಂದು ತಪ್ಪಾಗಿ ಹೇಳಿದ್ದಾರೆ. ಆದರೆ ಅವರು ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಕಿಲೋಗ್ರಾಂಗಳಲ್ಲಿ (ಕೆಜಿ) ಅಳೆಯಲಾಗುತ್ತದೆ ಎಂದು ಹೇಳಿದರು. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ಮಾಡಿದ ವೀಡಿಯೊದಲ್ಲಿ ರಾಹುಲ್ ಗಾಂಧಿ ತಮ್ಮ ತಪ್ಪನ್ನು ಸರಿಪಡಿಸುವ ಭಾಗವನ್ನು ತೋರಿಸಿಲ್ಲ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ಹಲ್ಲಾ ಬೋಲ್ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರ ಭಾಷಣವನ್ನು ಮಾತ್ರ ನಿರ್ದಿಷ್ಟವಾಗಿ ತೋರಿಸುವ ಮತ್ತೊಂದು ವೀಡಿಯೊವನ್ನು ಪ್ರಕಟಿಸಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯ ಭಾಗವನ್ನು ಕ್ಲಿಪ್ ಮಾಡಲಾಗಿದೆ, “ಅಂದು ಗೋದಿ ಹಿಟ್ಟು ಲೀಟರ್‌ಗೆ 22 ರೂ. ಇಂದು ಪ್ರತಿ ಲೀಟರ್‌ಗೆ 40 ರೂ” ಎಂದು ಹೇಳಿ ಮತ್ತೊಮ್ಮೆ ಅದನ್ನು ಸರಿಪಡಿಸಿಕೊಂಡು ಮತ್ತು ಗೋಧಿ ಹಿಟ್ಟು ಯೂನಿಟ್ ಅನ್ನು ಕಿಲೋಗ್ರಾಂನಲ್ಲಿ ಹೇಳಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಅವರು ಗೋಧಿ ಹಿಟ್ಟಿನ ಅಳತೆಯ ಘಟಕವನ್ನು ಲೀಟರ್ ಎಂದು ಉಲ್ಲೇಖಿಸಿದ್ದಾರೆ ಆದರೆ ಅವರು ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದರು ಮತ್ತು ಅದನ್ನು ಕಿಲೋಗ್ರಾಂನಲ್ಲಿ ಅಳೆಯಲಾಗುತ್ತದೆ ಎಂದು ಹೇಳಿದರು. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll