Fake News - Kannada
 

ಪಾಕಿಸ್ತಾನದ ಇಸ್ಲಾಂ ಮುಖ್ಯಸ್ಥನೊಬ್ಬನ ವಿಡಿಯೋವನ್ನು ಆರ್‌ಎಸ್‌ಎಸ್‌, ಬಿಜೆಪಿ ಬಗ್ಗೆ ತಾಲಿಬಾನ್‌ಗಳ ಟೀಕೆ ಎಂದು ಹಂಚಿಕೊಳ್ಳಲಾಗುತ್ತಿದೆ

0

“ಭಾರತದಲ್ಲಿ ಆರ್.ಎಸ್.ಎಸ್ ಬಿಜೆಪಿ ಅತ್ಯಂತ ಶಕ್ತಿಯುತವಾದದ್ದು ಎಂಬ ತಾಲಿಬಾನ್‌ರ  ಆಂತರಿಕ ಸಂಭಾಷಣೆ” ಎನ್ನುವ ವಿಡಿಯೋ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. 

ಪ್ರತಿಪಾದನೆ: ಆರ್.ಎಸ್.ಎಸ್ ಮತ್ತು ಬಿಜೆಪಿ ಅತ್ಯಂತ ಶಕ್ತಿಯುತವಾದವುಗಳು ಎಂಬ ತಾಲಿಬಾನ್‌ರ ಆಂತರಿಕ ಸಂಭಾಷಣೆಯ ವಿಡಿಯೋ.

ನಿಜಾಂಶ: ಈ ವಿಡಿಯೋ 01 ಮಾರ್ಚ್ 2019ರಂದು ರೆಕಾರ್ಡ್ ಮಾಡಲಾಗಿದೆ. ವಿಡಿಯೋದಲ್ಲಿ ಇರುವುದು ಖಾಲಿದ್ ಮೊಹಮದ್ ಅಬ್ಬಾಸಿ. ಖಾಲಿದ್ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಒಬ್ಬ ಇಸ್ಲಾಮಿಕ್ ಪಂಡಿತ. ಆತ 30 ವರ್ಷಗಳ ಕಾಳ ತನ್ಜಿಮ್ –ಇ –ಇಸ್ಲಾಮಿ ಎನ್ನುವ ಸಂಸ್ಥೆಯ ಜೊತೆ ಕೆಲಸ ಮಾಡಿದ್ದಾನೆ. 2018ರಲ್ಲಿ ತನ್ಜಿಮ್ – ಎ- ಇಸ್ಲಾಮನ್ನು ಬಿಟ್ಟು ಆತ ಶುಭ್ಭನ್- ಉಲ್ –ಮುಸ್ಲಿಂ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದನು. ಪ್ರಸ್ತುತ ಇಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಈ ಸಂಸ್ಥೆಗಳಿಗೂ ತಾಲಿಬಾನ್‌ಗಳಿಗೂ ಸಂಬಂಧವಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.  ಆರ್.ಎಸ್.ಎಸ್ ಬಿಜೆಪಿ ಅತ್ಯಂತ ಶಕ್ತಿಯುತವಾದವು ಎಂದು ತಾಲಿಬಾನ್‌ಗಳು ಹೇಳಿರುವ ಹಾಗೆ ಯಾವುದೇ ಸುದ್ದಿ ವರದಿಗಳು ಸಿಕ್ಕಿಲ್ಲ. ಆದ್ದರಿಂದ, ಪೋಸ್ಟ್‌ ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋವನ್ನು ಗಮನಿಸಿದಾಗ, ಅದರ ಮೇಲೆ ‘NWAA ಸ್ಟೂಡಿಯೋಸ್’ ಎನ್ನುವ ಲೋಗೋ ಇರುವುದು ನೋಡಬಹುದು. ಯೂಟ್ಯೂಬ್‌ನಲ್ಲಿ ‘ NWAA Studios ಎಂದು ಹುಡುಕಿದಾಗ, ಅದೇ ದೃಶ್ಯಗಳೊಂದಿಗೆ ಇರುವ ಒಂದು ವಿಡಿಯೋ ಒಂದು ಸಿಕ್ಕಿದೆ. ಈ ಯೂಟ್ಯೂಬ್ ವಿಡಿಯೋ 06 ಆಗಸ್ಟ್ 2020 ರಂದು ಅಪ್ಲೋಡ್ ಆಗಿದೆ. ಆದರೆ ವಿಡಿಯೋ 01 ಮಾರ್ಚ್ 2019ರಂದು ರೆಕಾರ್ಡ್ ಮಾಡಿರುವುದಾಗಿ ತಿಳಿಯುತ್ತದೆ. ಯೂಟ್ಯೂಬ್ ವಿಡಿಯೋವನ್ನು 0.48 ಟೈಂ ಸ್ಟಾಂಪ್ ಹತ್ತಿರ  ಕ್ಲಿಪ್ ಮಾಡಿ 11.23 ಉದ್ದನೆಯ ವಿಡಿಯೋವನ್ನು ಪೋಸ್ಟ್ ಮೂಲಕ ವೈರಲ್ ಮಾಡುತ್ತಿರುವುದಾಗಿ ತಿಳಿಯುತ್ತದೆ. ವಿಡಿಯೋದಲ್ಲಿ ಇರುವುದು ಖಾಲಿದ್ ಮೊಹಮದ್ ಅಬ್ಬಾಸಿ ಎನ್ನುವುದು ಶೀರ್ಷಿಕೆಯ ಮೂಲಕ ತಿಳಿಯುತ್ತದೆ.

ಖಾಲಿದ್ ಅಧಿಕೃತ ಪೇಸ್ಬುಕ್ ಪೇಜ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಖಾಲಿದ್ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರುವ ಒಬ್ಬ ಇಸ್ಲಾಮಿಕ್ ಪಂಡಿತ. 30 ವರ್ಷಗಳ ಕಾಲ ಆತ ತನ್ಜಿಮ್ –ಇ –ಇಸ್ಲಾಮಿ ಎನ್ನುವ ಸಂಸ್ಥೆಯ ಜೊತೆ ಕೆಲಸ ಮಾಡಿದ್ದಾನೆ. 2018ರಲ್ಲಿ ತನ್ಜಿಮ್ – ಎ- ಇಸ್ಲಾಮನ್ನು ಬಿಟ್ಟು ಆತ ಶುಭ್ಭನ್- ಉಲ್ –ಮುಸ್ಲಿಂ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದನು. ಪ್ರಸ್ತುತ ಇಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಈ ಸಂಸ್ಥೆಗಳಿಗೂ ತಾಲಿಬಾನ್‌ಗಳಿಗೂ ಸಂಬಂಧವಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಈ ವಿಡಿಯೋದಲ್ಲಿ ಆರ್.ಎಸ್.ಎಸ್ ಬಿಜೆಪಿ ಮತ್ತು ಸಂಘಪರಿವಾರದ ವಿಚಾರಗಳು ಮತ್ತು ಅವರ ಕಾರ್ಯ ವಿಧಾನಗಳು, ಅವರಿಗೆ ದೇಶದಲ್ಲಿ ಇರುವ ಶಕ್ತಿ ಸಾಮರ್ಥ್ಯಗಳ ಕುರಿತು ಪ್ರಸ್ತಾವಿಸಿರುವ ಹಾಗೆ ತಿಳಿಯುತ್ತದೆ. ಆದರೆ, ಬಿಜೆಪಿ ಅಧಿಕಾರದಲ್ಲಿ ಇರುವಾಗ ಭಾರತದ ಮೇಲೆ ದಾಳಿ ನಡೆಸುವುದು ಕಷ್ಟ ಎಂದು ಈ ವಿಡಿಯೋದಲ್ಲಿ ಹೇಳಲಿಲ್ಲ. ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷ ಎಂದು ವಿಡಿಯೋದಲ್ಲಿದೆ. ಆದರೆ ಭಾರತದ ಮೇಲೆ ದಾಳಿ ಮಾಡಬೇಕೆಂದರೆ ಮೊದಲು ಬಿಜೆಪಿ ಎನ್ನುವ ಪಕ್ಷವನ್ನು ಅಧಿಕಾರದಿಂದ ಇಳಿಸಬೇಕು ಎಂದು ವಿಡಿಯೋದಲ್ಲಿ ಇಲ್ಲ. ಆರ್.ಎಸ್.ಎಸ್ ಬಿಜೆಪಿ ಅತ್ಯಂತ ಶಕ್ತಿಯುತವಾದವು ಎಂದು ತಾಲಿಬಾನ್‌ಗಳು ಹೇಳಿರುವ ಹಾಗೆ ಎಲ್ಲಿಯೂ ಮಾಹಿತಿ ಇಲ್ಲ.

ಒಟ್ಟಿನಲ್ಲಿ, 2019ರಲ್ಲಿ ಒಬ್ಬ ಪಾಕಿಸ್ತಾನಿ ಇಸ್ಲಾಮಿಕ್ ಪಂಡಿತ ಮಾಡಿದ ವಿಡಿಯೋವನ್ನು ಆರ್.ಎಸ್.ಎಸ್, ಬಿಜೆಪಿಗಳ ಮೇಲೆ ತಾಲಿಬಾನ್ ಮಾಡಿದ ಟೀಕೆಗಳೆಂದು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll