Fake News - Kannada
 

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಾರತ-ಚೀನಾ ಗಡಿ ಘರ್ಷಣೆಯ ಹಿನ್ನೆಲೆಯಲ್ಲಿ ಹಳೆಯ ವಿಡಿಯೋಗಳನ್ನು ಮತ್ತೆ ಹಂಚಿಕೊಳ್ಳಲಾಗುತ್ತಿದೆ

0

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ (15 ಜೂನ್ 2020) ನಡೆದ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿದ ದೃಶ್ಯಗಳು ಎಂದು ಹೇಳಿ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಚೀನಾದ ಸಾವುನೋವುಗಳ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಆದರೆ, ಅನಧಿಕೃತ ಅಂಕಿಅಂಶಗಳ ಪ್ರಕಾರ ಸುಮಾರು 30 ಚೀನೀ ಸೈನಿಕರ ಸಾವಾಗಿದೆ. ಈ ಹಲವು ವಿಡಿಯೋಗಳಲ್ಲಿ ಪ್ರತಿಪಾದಿಸಿರುವುದರ ಸಂಗತಿಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಪ್ರತಿಪಾದನೆ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಇತ್ತೀಚಿನ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು.

ನಿಜಾಂಶ: ಈ ವೀಡಿಯೊಗಳು ಹಳೆಯವು. ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ (15 ಜೂನ್ 2020) ನಡೆದ ಭಾರತ-ಚೀನಾ ಘರ್ಷಣೆಗಳಿಗೆ ಅವು ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾಗಿರುವ ವಾದ ಸುಳ್ಳು.

ವಿಡಿಯೋ 01: (ಆರ್ಕೈವ್ ಆವೃತ್ತಿ)

ಭಾರತ ಮತ್ತು ಚೀನಾ ಮಧ್ಯೆ ಯಾವುದೇ ಗಡಿ ವಿದಾದ ಸಂಭವಿಸಿದರೂ ಅನೇಕ ಸುದ್ದಿ ಸಂಸ್ಥೆಗಳು ಇದನ್ನು ಪ್ರಾತಿನಿಧಿಕ ವೀಡಿಯೊವಾಗಿ ಬಳಸಿಕೊಳ್ಳುತ್ತಿವೆ ಮತ್ತು ಇದು ಸಾಮಾಜಿಕ ಮಾಧ್ಯಮಗಳಲ್ಲೂ ಕಾಣಿಸಿಕೊಳ್ಳತೊಡಗುತ್ತದೆ. ಆದರೆ, ಈ ವಿಡಿಯೋ ಆಗಸ್ಟ್ 15, 2017 ರಂದು ಲಡಾಖ್‌ನ ಪಾಂಗೊಂಗ್ ಸರೋವರದ ಬಳಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ. ಅದೇ ವೀಡಿಯೊವನ್ನು ಈ ಹಿಂದೆ ಕೂಡ ಫ್ಯಾಕ್ಟ್ಲಿ ಅನೇಕ ಬಾರಿ ಫ್ಯಾಕ್ಟ್ ಚೆಕ್ ಮಾಡಿದೆ.

ವಿಡಿಯೋ 02: (ಆರ್ಕೈವ್ ಆವೃತ್ತಿ)

ಈ ‘ಎಕ್ಸ್‌ಕ್ಲೂಸಿವ್’ ವಿಡಿಯೊವು 15 ಜೂನ್ 2020 ರ ರಾತ್ರಿ ನಡೆದ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿಲ್ಲ. ಇದೇ ವೀಡಿಯೊ ಕನಿಷ್ಠ 2020 ರ ಮೇ ತಿಂಗಳಿನಿಂದಲೂ ಅಂತರ್ಜಾಲದಲ್ಲಿದೆ. ಈ ವಿಡಿಯೋಗೆ ಸಂಬಂಧಿಸಿದ ಸ್ಥಳ ಮತ್ತು ಸಂದರ್ಭದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಇದು 15 ಜೂನ್ 2020 ರಂದು ನಡೆದ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.

ವಿಡಿಯೋ 03: (ಆರ್ಕೈವ್ ಆವೃತ್ತಿ)

ಈ ವೀಡಿಯೊ ಹಳೆಯದು. ಇದು ಇತ್ತೀಚಿನ ಯಾವುದೇ ಘಟನೆಗೆ ಸಂಬಂಧಿಸಿಲ್ಲ. ಈ ವೀಡಿಯೊವನ್ನು ಆಗಸ್ಟ್ 25, 2014 ರಂದು ‘ಜೀ ನ್ಯೂಸ್‌’ ಚಾನೆಲ್ ಪ್ರಸಾರ ಮಾಡಿತ್ತು. ಪ್ರಸಾರದ ವರದಿಯಲ್ಲಿ, ಚೀನಾದ ಪಡೆಗಳು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಉದ್ದಕ್ಕೂ ಗಡಿ ಗೋಡೆಯನ್ನು ನಾಶಮಾಡಲು ಪ್ರಯತ್ನಿಸಿದವು, ಆದರೆ, ಭಾರತೀಯ ಪಡೆಗಳು ಚೀನೀ ಸೈನ್ಯವನ್ನು ತಡೆದವು ಎಂದು ಹೇಳಿತ್ತು. ಘಟನೆಯ ನಿಖರ ಸಮಯವನ್ನು ಚಾನೆಲ್ ಉಲ್ಲೇಖಿಸಿಲ್ಲ. 2014 ರಲ್ಲಿ ಈ ವೀಡಿಯೊ ಪ್ರಸಾರವಾಗಿರುವುದರಿಂದ ಇದು ಜೂನ್ 2020 ರಲ್ಲಿ ನಡೆದ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು. ಅದೇ ವೀಡಿಯೊವನ್ನು ಈ ಹಿಂದೆ ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ಮಾಡಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಾರತ-ಚೀನಾ ಘರ್ಷಣೆಗಳ ಹಿನ್ನೆಲೆಯಲ್ಲಿ ಹಳೆಯ ವೀಡಿಯೊಗಳನ್ನು ಮತ್ತೆ ಮತ್ತೆ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll