Fake News - Kannada
 

ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜಗುರು ಅವರನ್ನು ಫೆಬ್ರವರಿ 14 ಪ್ರೇಮಿಗಳ ದಿನದಂದು ಗಲ್ಲಿಗೇರಿಸಲಾಗಿತ್ತು ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ

0

ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಪ್ರೇಮಿಗಳ ದಿನವಾದ ಫೆಬ್ರವರಿ 14, 1931 ರಂದು ಗಲ್ಲಿಗೇರಿಸಲಾಯಿತು ಎನ್ನುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಹಕ್ಕನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು 14 ಫೆಬ್ರವರಿ 1931 ರಂದು (ಪ್ರೇಮಿಗಳ ದಿನ) ಗಲ್ಲಿಗೇರಿಸಲಾಯಿತು.

ಸತ್ಯಾಂಶ: ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಗಿದ್ದು, ಪ್ರೇಮಿಗಳ ದಿನದಂದು ಅಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ತ್ಯಾಗದ ನೆನಪಿಗಾಗಿ ಪ್ರತಿ ವರ್ಷ ಮಾರ್ಚ್ 23 ಅನ್ನು ‘ಶಹೀದ್ ದಿವಾಸ್/ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತದೆ. ಹುತಾತ್ಮರ ದಿನದಂದು ಪ್ರಸಾರವಾಗಿರುವ ‘ಡಿಡಿ ನ್ಯೂಸ್’ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು.

ಅವರ ಮರಣದಂಡನೆಗೆ ಸಂಬಂಧಿಸಿದಂತೆ ಮಾರ್ಚ್ 25, 1931 ರಂದು ‘ದಿ ಟ್ರಿಬ್ಯೂನ್’ ಪ್ರಕಟಿಸಿದ ಲೇಖನವನ್ನು ‘ಪ್ರಸಾರ್ ಭಾರತಿ’ ಟ್ವೀಟ್‌ ಅನ್ನು ಇಲ್ಲಿ ನೋಡಬಹುದು. 24 ಮಾರ್ಚ್ 1931 ರಂದು ಪ್ರಕಟವಾದ ‘ದಿ ಹಿಂದೂ’ ಪತ್ರಿಕೆಯ ಲೇಖನವನ್ನು ಇಲ್ಲಿ ಓದಬಹುದು.

ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಪೋರ್ಟಲ್‌ನಿಂದ, ಫ್ಯಾಕ್ಟ್ಲಿ ಸಂಸ್ಥೆಯು 1931 ರ ಮಾರ್ಚ್ ತಿಂಗಳಿನಲ್ಲಿ ಭಾರತದ ಆಂತರಿಕ ರಾಜಕೀಯ ಪರಿಸ್ಥಿತಿಯ ಹದಿನೈದು ವರದಿಗಳನ್ನು ಕಂಡುಕೊಂಡಿತು. ಈ ವರದಿಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಮಾಸಿಕ ಆಧಾರದ ಮೇಲೆ ಕಳುಹಿಸಲಾಗಿದೆ. ಸುಖದೇವ್ ಮತ್ತು ರಾಜ್‌ಗುರು ಅವರೊಂದಿಗೆ ಭಗತ್ ಸಿಂಗ್ ಅವರ ಮರಣದಂಡನೆ ಮಾರ್ಚ್ 23, 1931 ರ ಸಂಜೆ ನಡೆದಿದೆ ಎಂದು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಗಿತ್ತು. ಆದರೆ ಪ್ರೇಮಿಗಳ ದಿನದಂದು ಅಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ.

Share.

About Author

Comments are closed.

scroll