Fake News - Kannada
 

ತಿರುಮಲ ವೆಂಕಟೇಶ್ವರ ಸ್ವಾಮಿಯ ಹಳೆಯ ವಿಡಿಯೋವನ್ನು ಕೊರೊನಾ ಸಮಯದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

0

ಕೊರೊನಾ ಸಾಂಕ್ರಾಮಿಕದ  ಕಾರಣದಿಂದಾಗಿ ತಿರುಮಲಕ್ಕೆ ಹೋಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಲು ಸಾಧ್ಯವಿಲ್ಲದವರಿಗಾಗಿ ತಿರುಮಲ ತಿರುಪತಿ ದೇವಸ್ಥಾನವು ಇತಿಹಾಸದಲ್ಲಿ ಮೊದಲ ಬಾರಿಗೆ ವೆಂಕಟೇಶ್ವರ ಸ್ವಾಮಿಯ ಮೂಲ ವಿರಾಟ್‌ ವಿಡಿಯೋವವೊಂದನ್ನು ಬಿಡುಗಡೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿರುವ ವಿಡಿಯೋದ ಸತ್ಯಾತ್ಯತೆಯನ್ನು ಈ ಲೇಖನದಲ್ಲಿ ಮೂಲಕ ಪರಿಶೀಲಿಸೋಣ.

ಪ್ರತಿಪಾದನೆ: ‘ಇತಿಹಾಸದಲ್ಲಿ ಮೊದಲ ಬಾರಿಗೆ ತಿರುಮಲಕ್ಕೆ ಹೋಗಲು ಸಾಧ್ಯವಾಗದವರಿಗೆ ಮತ್ತು ಕೊರೊನಾದಿಂದ ಶ್ರೀನಿವಾಸ ಸ್ವಾಮಿ ದೇವರ ದರ್ಶನ ಪಡೆಯದವರಿಗೆ ದೇವಾಲಯವು ಸ್ವಾಮಿಯ ಮೂಲವಿರಾಟ್ ದರ್ಶನದ ವಿಡಿಯೋ ಬಿಡುಗಡೆ ಮಾಡಿದೆ.

ಸತ್ಯಾಂಶ: ಈ ವೀಡಿಯೊ ಹಳೆಯದಾಗಿದ್ದು,  ಇದು 2013 ರಿಂದ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಕೊರೊನಾ ಸಮಯದಲ್ಲಿ ಟಿಟಿಡಿ ಭಕ್ತರಿಗಾಗಿ ವೆಂಕಟೇಶ್ವರ ಸ್ವಾಮಿ ವಿಡಿಯೋ ಬಿಡುಗಡೆ ಮಾಡಿದ ಯಾವುದೇ ಅಧಿಕೃತ ಮಾಹಿತಿ ಅಥವಾ ಸುದ್ದಿ ಲೇಖನಗಳು ಇಲ್ಲ. ಹಾಗಾಗಿ ಪೋಸ್ಟ್ ಮೂಲಕ ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ.

ಕೊರೊನಾ ಸಮಯದಲ್ಲಿ ಈ ವೀಡಿಯೊವನ್ನುಚಿತ್ರಿಕರಿಸಲಾಗಿಲ್ಲ. ಗೂಗಲ್ ಕೀವರ್ಡ್ ಹುಡುಕಾಟದಲ್ಲಿ  2013 ರಲ್ಲಿ ಇದೇ ರೀತಿಯ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿರುವುದು ಕಂಡುಬಂದಿದೆ. ‘Original Tirumala Moolavar – 40 Seconds Video’ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು 2013 ರಲ್ಲಿ ‘ಬಾಲ ಗೋವಿಂದ ದಾಸ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ವೀಡಿಯೊವನ್ನು ಯಾವಾಗ ಚಿತ್ರಿಕರಿಸಲಾಗಿದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ, ಅಥವಾ ಇದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಸಂಬಂಧಿಸಿಲ್ಲವಾದರೂ, ಪ್ರಸ್ತುತ ಕೊರೊನಾ ಸಮಯದಲ್ಲಿ ವೀಡಿಯೊವನ್ನು ಚಿತ್ರಿಕರಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಭಕ್ತರಿಗಾಗಿ ವೆಂಕಟೇಶ್ವರ ಸ್ವಾಮಿಯ ಈ ವಿಡಿಯೋವನ್ನು ಟಿಟಿಡಿ ಬಿಡುಗಡೆ ಮಾಡಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹೀಗೆನಾದರೂ ನಡೆದಿದ್ದರೇ, ಸುದ್ದಿ ಸಂಸ್ಥೆಗಳು ಅದನ್ನು ಪ್ರಕಟಿಸುತ್ತಿದ್ದವು. ಆದರೆ ಈ ವಿಷಯದ ಬಗ್ಗೆ ಯಾವುದೇ ಸುದ್ದಿ ಲೇಖನಗಳು ಪ್ರಕಟವಾಗಿಲ್ಲ.

ಒಟ್ಟಿನಲ್ಲಿ, ಕೊರೊನಾ ಸಮಯದಲ್ಲಿ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನ ವಿಡಿಯೊ ಬಿಡುಗಡೆ ಮಾಡಿದೆ ಎಂದು ವೆಂಕಟೇಶ್ವರ ಸ್ವಾಮಿಯ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll