ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪತಿಭಟನೆಗಳ ನಡುವೆಯೂ (ಇಲ್ಲಿ, ಇಲ್ಲಿ), ಬೃಹತ್ ರಾಲಿಯೊಂದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಾಗಿ ಶೇರ್ ಮಾಡಲಾಗಿದೆ. ಈ ದೃಶ್ಯಗಳು ಬಾಂಗ್ಲಾದೇಶದ ಢಾಕಾದಲ್ಲಿ ಹಿಂದೂಗಳು ತಮ್ಮ ಮೇಲಿನ ಇತ್ತೀಚಿನ ದಾಳಿಗಳ ವಿರುದ್ಧ ಪ್ರತಿಭಟಿಸಲು ನಡೆಸಿದ ರಾಲಿ ಎಂದು ಹೇಳಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ದೊಡ್ಡ ಜನಸಮೂಹವಿದ್ದು, ಹೆಚ್ಚಿನ ಜನರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ಹಿಂದೂಗಳು ತಮ್ಮ ಮೇಲಿನ ದಾಳಿಯನ್ನು ವಿರೋಧಿಸಲು ನಡೆಸಿದ ರಾಲಿಯೊಂದನ್ನು ಹಳೆಯ ಸಂಬಂಧವಿಲ್ಲದ ವಿಡಿಯೋವನ್ನು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್: ವೈರಲ್ ಆಗಿರುವ ವೀಡಿಯೊ ಸೆಪ್ಟೆಂಬರ್ 2023ರದ್ದು. ಇದು ಬಾಂಗ್ಲಾದೇಶದಲ್ಲಿ ಹಿಂದೂಗಳು ನಡೆಸಿದ ಪ್ರತಿಭಟನಾ ರಾಲಿಗೆ ಸಂಬಂಧಿಸಿದ್ದಲ್ಲ. ಬಾಂಗ್ಲಾದೇಶದಲ್ಲಿ ಸೆಪ್ಟೆಂಬರ್ 2023 ರಲ್ಲಿ ಶೇಖ್ ಹಸೀನಾ ಪಾರ್ಟಿಯಾದ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾದ ಛಾತ್ರ ಲೀಗ್ ಆಯೋಜಿಸಿದ್ದ ರಾಲಿಯನ್ನು ಈ ವೈರಲ್ ವೀಡಿಯೊ ತೋರಿಸುತ್ತದೆ. ಶೇಖ್ ಹಸೀನಾ, ಢಾಕಾದ ಸುಹ್ರವರ್ದಿ ಉದ್ಯಾನದಲ್ಲಿ ಬಾಂಗ್ಲಾದೇಶ ಛಾತ್ರ ಲೀಗ್ ಆಯೋಜಿಸಿದ್ದ ಸಭೆಯಲ್ಲಿ ಈ ರಾಲಿಯಲ್ಲಿಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಮಾಜಿ ಪ್ರಧಾನಿ ಶೇಖ್ ಅವರ ನಂತರ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ವಿರುದ್ಧ ನೂರಾರು ಜನರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 09 ಆಗಸ್ಟ್ 2024 ರಂದು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು. ಹಸೀನಾ 05 ಆಗಸ್ಟ್ 2024 ರಂದು ದೇಶವನ್ನು ತ್ಯಜಿಸಿ ಪರಾರಿಯಾಗಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಬಾಂಗ್ಲಾದೇಶದಲ್ಲಿ ಜುಲೈ 2024 ರಂದು ಕೋಟಾ ವಿರೋಧಿ ಪ್ರತಿಭಟನೆಗಳು ಪ್ರಾರಂಭವಾಗಿ ಮಾರಣಾಂತಿಕ ಹಲ್ಲೆಗಳಿಗೆ ಸಾಕ್ಷಿಯಾಗಿದೆ. ಹಾಗಾಗಿ ಇತ್ತೀಚಿಗೆ ನಡೆಯುತ್ತಿರುವ ಈ ಸಾಮೂಹಿಕ ಪ್ರತಿಭಟನೆಗಳು ಸರ್ಕಾರದ ವಿರೋಧಿ ದಂಗೆಯಾಗಿ ರೂಪಾಂತರಗೊಂಡಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಾರಾಗಿಯಾದ ನಂತರದಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಪ್ರತಿಭಟನಾಕಾರರು ಢಾಕಾದಲ್ಲಿನ ಅವರ ಅಧಿಕೃತ ನಿವಾಸವನ್ನು ವಶಪಡಿಸಿಕೊಂಡು ಆವರಣವನ್ನು ಲೂಟಿ ಮಾಡಿ ಧ್ವಂಸಗೊಳಿಸಿದ್ದಾರೆ (ಇಲ್ಲಿ ಮತ್ತು ಇಲ್ಲಿ).
ಮಾಹಿತಿಗಳ ಪ್ರಕಾರ ಕೆಲ ಗುಂಪುಗಳು ಅಲ್ಪಸಂಖ್ಯಾತರ ಮನೆಗಳಿಗೆ ಮತ್ತು ಅವರ ವ್ಯವಹಾರಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಹಿಂದೂಗಳ ಬೆಲೆಬಾಳುವ ವಸ್ತುಗಳನ್ನು (ಇಲ್ಲಿ) ಮತ್ತು ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿ ಹಾಕಿರುವ ಹಚ್ಚಿದ ವರದಿಗಳು ಲಭಿಸಿದೆ (ಇಲ್ಲಿ).
ಇತ್ತೀಚಿನ ವರದಿಗಳ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 09 ಆಗಸ್ಟ್ 2024 ಮತ್ತು ತದನಂತರ ದೇಶದ ಇತರ ಭಾಗಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು 05 ಆಗಸ್ಟ್ 2024 ರಂದು ದೇಶದಿಂದ ಪಾರಾಗಿಯಾದ ನಂತರದಿಂದ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ವಿರುದ್ಧ ನೂರಾರು ಜನರು ಪ್ರತಿಭಟನೆ ನಡೆಸಿದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಆದಾಗ್ಯೂ, ವೈರಲ್ ವೀಡಿಯೊದಲ್ಲಿನ ದೃಶ್ಯಗಳು ಬಾಂಗ್ಲಾದೇಶದಲ್ಲಿ ಹಿಂದೂಗಳ ಇತ್ತೀಚಿನ ಯಾವುದೇ ಪ್ರತಿಭಟನೆಯನ್ನು ತೋರಿಸುವುದಿಲ್ಲ.
ಈ ವೈರಲ್ ವೀಡಿಯೊದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು, ನಾವು ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಮೂಲಕ 02 ಸೆಪ್ಟೆಂಬರ್ 2023 ರಂದು ಅವಾಮಿ ಲೀಗ್ ನಾಯಕ ಮತ್ತು ಮಾಜಿ ಸಂಸದ ಶೇಖ್ ತನ್ಮೋಯ್ ಅವರ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ (@sheikhtonmoymp) ಹಂಚಿಕೊಂಡ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು, ಇದರಲ್ಲಿ ಕೀಫ್ರೇಮ್‌ಗಳನ್ನು ಒಳಗೊಂಡಿರುವ ಒಂದು ಫೋಟೋವಿದೆ. ಈ ಪೋಸ್ಟ್ ಪ್ರಕಾರ, ಈ ದೃಶ್ಯಗಳು ಸುಹ್ರವರ್ದಿ ಉದ್ಯಾನದಲ್ಲಿ ಬಾಂಗ್ಲಾದೇಶ ಛತ್ರ ಲೀಗ್ ಆಯೋಜಿಸಿದ್ದ ವಿದ್ಯಾರ್ಥಿ ಕಾರ್ಯಕ್ರಮದಲ್ಲಿ ಶೇಖ್ ಹಸೀನಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಎಂದು ತಿಳಿಸುತ್ತದೆ.
ಹಾಗೆಯೆ, 01 ಸೆಪ್ಟೆಂಬರ್ 2023 ರಂದು ಬಾಂಗ್ಲಾದೇಶ ಛಾತ್ರ ಲೀಗ್‌ನ ನೆಟ್ರೊಕೋನಾ ಜಿಲ್ಲಾ ಘಟಕದ ಫೇಸ್‌ಬುಕ್ ಪೇಜ್ನಲ್ಲಿ ಹಂಚಿಕೊಂಡಿರುವ ರಾಲಿಯ ಇನ್ನು ಹೆಚ್ಚಿನ ಫೋಟೋಗಳು ನಮಗೆ ದೊರಕಿವೆ. ಇಲ್ಲಿ ನೀಡಿದ ಶೀರ್ಷಿಕೆಯ ಪ್ರಕಾರ, ಈ ಕಾರ್ಯಕ್ರಮವನ್ನು ಬಾಂಗ್ಲಾದೇಶ ಛತ್ರ ಲೀಗ್ (BCL) ಆಯೋಜಿಸಿದೆ. ಗಫರ್ಗಾಂವ್ ಉಪಜಿಲಾ ಛತ್ರ ಲೀಗ್, ಮತ್ತು ಮುನ್ಸಿಪಲ್ ಛತ್ರ ಲೀಗ್ ‘ರಾಷ್ಟ್ರಪಿತ’ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ ನೆಚಾ ಮುಜೀಬ್ ಅವರ ನೆನಪಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಡಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ‘ಅನಾರುಲ್ ಇಸ್ಲಾಂ’ ಎಂದು ಬರೆದಿರುವುದನ್ನು ನೋಡಬಹುದು. ಇದನ್ನು ಕ್ಲೂ ಆಗಿ ತೆಗೆದುಕೊಂಡು ಮತ್ತಷ್ಟು ಹುಡುಕಿದಾಗ, ಅದೇ ವೈರಲ್ ವೀಡಿಯೊವನ್ನು 02 ಸೆಪ್ಟೆಂಬರ್ 2023 ರಂದು ‘ಅನಾರುಲ್ ಇಸ್ಲಾಂ’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದಲ್ಲಿ ನೀಡಿದ ವಿವರಣೆಯ ಪ್ರಕಾರ, ಈ ರಾಲಿಯು ಗಫರ್‌ಗಾಂವ್ ಉಪಜಿಲಾದ ಢಾಕಾದಲ್ಲಿ ಸುಹ್ರವರ್ದಿ ಉದ್ಯಾನ ನಡೆದ ಕಾರ್ಯಕ್ರಮವಾಗಿದೆ. ರ‍್ಯಾಲಿಯ ನೇತೃತ್ವವನ್ನು ಗಫರ್‌ಗಾಂವ್ ಉಪಜಿಲಾ ಪ್ರದೇಶದ ಮೈಮೆನ್‌ಸಿಂಗ್ ಸ್ಥಾನದಿಂದ ಮಾಜಿ ಸಂಸದ ಫಾಹ್ಮಿ ಗುಲಾಂದಜ್ ಬಾಬೆಲ್ ವಹಿಸಿದ್ದರು. ಈ ಚಾನಲ್ ನಲ್ಲಿ 2023 ರ ಸೆಪ್ಟೆಂಬರ್‌ನಲ್ಲಿ ಢಾಕಾದ ಸುಹ್ರವರ್ದಿ ಉದ್ಯಾನದಲ್ಲಿ ನಡೆದ ರಾಲಿಯ ಸಭೆಯ ಇತರ ವೀಡಿಯೊಗಳನ್ನು ಸಹ ಪೋಸ್ಟ್ ಮಾಡಿದೆ.
ಯೂಟ್ಯೂಬ್‌ನಲ್ಲಿ ಯೂಟ್ಯೂಬ್ ನಲ್ಲಿಯೂ ನಮಗೆ ಇದೇ ರೀತಿಯ ವಿಡಿಯೋ ದೊರಕಿದೆ. 01 ಸೆಪ್ಟೆಂಬರ್ 2023 ರಂದು ‘ಚಾನಲ್ 24’ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ‘Vow to resist BNP in Chhatra League rally’ Awami League Somabesh BSL | Channel 24′. ಎನ್ನುವ ಟೈಟಲ್ ಅನ್ನು ಕಾಣಬಹುದು. ವಿಡಿಯೋದಾದ ಶೀರ್ಷಿಕೆಯ ಪ್ರಕಾರ 01 ಸೆಪ್ಟೆಂಬರ್ 2023 ರಂದು ಸುಹ್ರವರ್ದಿ ಉದ್ಯಾನದಲ್ಲಿ (ಗಾರ್ಡನ್) ವಿದ್ಯಾರ್ಥಿ ಕೂಟದಲ್ಲಿ ದೇಶದ ವಿವಿಧ ಭಾಗಗಳಿಂದ BCL ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊದಲ್ಲಿನ ದೃಶ್ಯಗಳು ಸೆಪ್ಟೆಂಬರ್ 2023 ರಲ್ಲಿ ಶೇಖ್ ಹಸೀನಾ ಅವರ ಪಕ್ಷದ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛತ್ರ ಲೀಗ್ ಆಯೋಜಿಸಿದ್ದ ರಾಲಿಯನ್ನು ತೋರಿಸುತ್ತವೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ನಡೆದ ಛತ್ರ ಲೀಗ್ ರಾಲಿಯ ಹಳೆಯ ವೀಡಿಯೊವನ್ನು 2024 ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳು ತಮ್ಮ ಮೇಲಿನ ದಾಳಿಯನ್ನು ವಿರೋಧಿಸಲು ಇತ್ತೀಚೆಗೆ ನಡೆಸಿದ ರಾಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.