ವಿಮಾನವೊಂದರಲ್ಲಿ ಇಬ್ಬರು ವ್ಯಕ್ತಿಗಳು ಮಾತಿನ ಚಕಮಕಿ ದೈಹಿಕ ಜಗಳಕ್ಕೆ ತಿರುಗಿ ಒಬ್ಬರನೊಬ್ಬರು ಎಳೆದಾಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಿಂದೂ ಪ್ರಯಾಣಿಕರೊಬ್ಬರ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ವಿಮಾನದಲ್ಲಿ ದಾಳಿ ಮಾಡುತ್ತಿದ್ದಾನೆ ಎಂದು ವಿಡಿಯೋ ಹೇಳುತ್ತದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದನ್ನು ಚಿತ್ರಿಸುತ್ತದೆ.
ಫ್ಯಾಕ್ಟ್: ಈ ಘಟನೆಯು 26 ಡಿಸೆಂಬರ್ 2022 ರಂದು ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಆಗಮಿಸಿದ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಸಂಭವಿಸಿದೆ. ವರದಿಗಳು ಮತ್ತು ಪೊಲೀಸ್ ಎಫ್‌ಐಆರ್ ಪ್ರಕಾರ, ಈ ಜಗಳವು ಅಮೀದ್ ಮೊಹಮ್ಮದ್ ಹುಸೇನ್ ಮತ್ತು ಎಸ್.ಕೆ. ಅಜರುದ್ದೀನ್ ಎಂಬ ಇಬ್ಬರು ವ್ಯಕ್ತಿಗಳ ನಡುವೆ ನಡೆದಿದೆ. ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ಹುಸೇನ್ ನಿರಾಕರಿಸಿದಾಗ ವಾಗ್ವಾದವು ಉಲ್ಬಣಗೊಂಡಿತು, ಇದು ಅಜರುದ್ದೀನ್ ಮತ್ತು ಇತರ ಪ್ರಯಾಣಿಕರಿಂದ ದೈಹಿಕ ಹಿಂಸೆಗೆ ಕಾರಣವಾಯಿತು. ಈ ಘಟನೆಯಲ್ಲಿ ಯಾವುದೇ ಕೋಮುವಾದದ ರೂಪಗಳಿಲ್ಲ. ಆದ್ದರಿಂದ, ಈ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಹಿಂದಿನ ಸತ್ಯವನ್ನು ಪರಿಶೀಲಿಸಲು, ನಾವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ವಾಗ್ವಾದ ಸಂಭವಿಸಿದೆ ಎಂಬ ಘಟನೆಯನ್ನು ಝೀ ನ್ಯೂಸ್ ವರದಿ ಮಾಡಿದೆ. “#WATCH: Mid-Air fight on #THAISmileAirways Bangkok-Kolkata flight goes viral; netizens react.” ಎಂದು ಝೀ ನ್ಯೂಸ್ ಸಹ ಅದೇ ವೀಡಿಯೊವನ್ನು X ಕ್ಯಾಪ್ಶನ್ ನೊಂದಿಗೆ ಹಂಚಿಕೊಂಡಿದೆ.
ನಮ್ಮ ಹೆಚ್ಚಿನ ತನಿಖೆಯು ದಿ ಹಿಂದೂ ಸೇರಿದಂತೆ ಅನೇಕ ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಾರಣವಾಯಿತು. ಈ ವರದಿಗಳ ಪ್ರಕಾರ, 2022 ರ ಡಿಸೆಂಬರ್ 26 ರಂದು ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು, 37C ನಲ್ಲಿ ಕುಳಿತಿದ್ದ ಅಮಿದ್ ಮೊಹಮ್ಮದ್ ಹುಸೇನ್ ತಮ್ಮ ಆಸನವನ್ನು ನೇರಗೊಳಿಸಲು ಮತ್ತು ಸೀಟ್‌ಬೆಲ್ಟ್ ಧರಿಸುವುದು ಮುಂತಾದ ಪ್ರಮಾಣಿಕ ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇದರಿಂದಾಗಿ ಬೆನ್ನು ನೋವನ್ನು ಅನುಭವಿಸಿದ ಪಕ್ಕದಲ್ಲಿದ್ದ ಇನೋರ್ವ ಪ್ರಯಾಣಿಕ ಸಿಬ್ಬಂದಿಯಿಂದ ಪದೇ ಪದೇ ಮನವಿ ಮಾಡಿದರೂ ಅವರು ಸಹಕರಿಸಲಿಲ್ಲ. ಮತ್ತೊಬ್ಬ ಪ್ರಯಾಣಿಕ ಎಸ್.ಕೆ. ಅಜರುದ್ದೀನ್, ಕೋಪಗೊಂಡು ಹುಸೇನ್ ಅವರಿಗೆ ಕಪಾಳಮೋಕ್ಷ ಮಾಡಿ ಗುದ್ದುವ ಮೂಲಕ ದೈಹಿಕ ವಾಗ್ವಾದವನ್ನು ಪ್ರಾರಂಭಿಸಿದರು. ದಾಳಿಯಲ್ಲಿ ಇತರ ಹಲವಾರು ಪ್ರಯಾಣಿಕರು ಸೇರಿಕೊಂಡರು. ಏರ್‌ಲೈನ್ಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಇದರಿಂದಾಗಿ ವಿಮಾನ ಸ್ವಲ್ಪ ವಿಳಂಬವಾಯಿತು. ತದನಂತರ ಈ ಗಲಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಲಾಯಿತು. ಮಾಧ್ಯಮ ವರದಿಗಳಲ್ಲಿ ಯಾವುದೇ ಕೋಮುವಾದದ ಆಯಾಮವಿಲ್ಲ ಎಂದು ತಿಳಿದು ಬಂದಿದೆ.
ಥಾಯ್ ಸ್ಮೈಲ್ ಏರ್ವೇಸ್ ಈ ಘಟನೆಯನ್ನು ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ವರದಿ ಮಾಡಿದೆ. 37C ಸೀಟಿನಲ್ಲಿದ್ದ ಪ್ರಯಾಣಿಕ ಅಮಿದ್ ಮೊಹಮ್ಮದ್ ಹುಸೇನ್ ಅವರು ಸುರಕ್ಷತಾ ನಿಯಮಗಳನ್ನು ಅನುಸರಿಸಲು ನಿರಾಕರಿಸಿದ್ದು, ಇದು ವಿಮಾನದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ ಎಂದು ವಿಮಾನಯಾನ ಸಂಸ್ಥೆ ಸೂಚಿಸಿದೆ.
ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಗುರುತನ್ನು ಖಚಿತಪಡಿಸಲು, ನಾವು ಕೋಲ್ಕತ್ತಾದ ಬಿಧಾನನಗರ ಪೊಲೀಸ್ ಠಾಣೆಯಿಂದ ಎಫ್‌ಐಆರ್ ಅನ್ನು ಪರಿಶೀಲಿಸಿದ್ದೇವೆ. ಮಿ. ಅಹ್ಮದ್/ಮೊಹಮ್ಮದ್ ಹುಸೇನ್, 37C ಸೀಟನ್ನು ಆಕ್ರಮಿಸಿಕೊಂಡಿದ್ದರು ಮತ್ತು 41C ಸೀಟಿನಲ್ಲಿದ್ದ ಶೇಖ್ ಅಜರುದ್ದೀನ್ ಸೀಟ್ :ಎಂದು ಈ ವರದಿಯು ಇಬ್ಬರು ವ್ಯಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಈ ಮಾಹಿತಿಯು ವಿಮಾನದಲ್ಲಿನ ವಾಗ್ವಾದದ ವಿವರಗಳನ್ನು ದೃಢೀಕರಿಸುತ್ತದೆ.
ಹೆಚ್ಚುವರಿಯಾಗಿ,ಈ ವಾಗ್ವಾದದ ವೀಡಿಯೊ ವೈರಲ್ ಆದ ನಂತರ, ಏರ್‌ಲೈನ್ ಭಾಗಿದಾರರಿಗೆ ಕ್ಷಮೆಯಾಚಿಸಿದೆ. ಆದಾಗ್ಯೂ, ಘಟನೆಯನ್ನು ವರದಿ ಮಾಡಿದ ಸಾಮಾಜಿಕ ಮಾಧ್ಯಮ ಖಾತೆಯು 2023 ರಿಂದ ನಿಷ್ಕ್ರಿಯವಾಗಿದೆ. ಜನವರಿ 2024 ರಲ್ಲಿ, ಥಾಯ್ ಸ್ಮೈಲ್ ಏರ್ವೇಸ್ ಥಾಯ್ ಏರ್ವೇಸ್ ಇಂಟರ್ನ್ಯಾಷನಲ್ ಜೊತೆಗೆ ವಿಲೀನಗೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಥಾಯ್ಲೆಂಡ್‌ನಿಂದ ಕೋಲ್ಕತ್ತಾಗೆ ಆಗವಿಸಿದ ವಿಮಾನದಲ್ಲಿ ನಡೆದ ಜಗಳದ ಹಳೆಯ ವೀಡಿಯೊವನ್ನು ಕೋಮುವಿವಾದದ ಸುಳ್ಳು ಆರೋಪದೊಂದಿಗೆ ಹಂಚಿಕೊಳ್ಳಲಾಗಿದೆ.