ಬಾಲಿವುಡ್ ನಟಿ ಕಂಗನಾ ರಣಾವತ್ ರಕ್ಷಣೆಗಾಗಿ ಸಾವಿರ ವಾಹನಗಳಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರುಗಳು, ಎಂದು ಹಂಚಿಕೊಳ್ಳುತ್ತಿರುವ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ ಎಷ್ಟು ಸತ್ಯಾಂಶವಿದಿಯೋ ನೋಡೋಣ.
ಪ್ರತಿಪಾದನೆ: ಕಂಗನಾ ರಣಾವತ್ ರಕ್ಷಣೆಗಾಗಿ ಸಾವಿರ ವಾಹನಗಳೊಂದಿಗೆ ಮುಂಬೈಗೆ ಹೊರಟ ಬಿಜೆಪಿ ಕಾರ್ಯಕರ್ತರುಗಳು.
ನಿಜಾಂಶ: ಪೋಸ್ಟ್ ನಲ್ಲಿ ಹಂಚಿಕೊಂಡಿರುವುದು ದೇಶದಲ್ಲಿನ ವಿವಿಧ ಪ್ರದೇಶಗಳಲ್ಲಿ ತೆಗೆದ ಹಳೆಯ ಕಾನ್ವಾಯ್ ಫೋಟೋಗಳು. ಈ ಫೋಟೋಗಳಿಗೂ ಕಂಗನಾ ರಣಾವತ್ ಮತ್ತು ಮಹರಾಷ್ಟ್ರ ಸರ್ಕಾರದ ನಡುವೆ ಜರುಗುತ್ತಿರುವ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್ ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪು.
ಫೋಟೋ -1:
ಪೋಸ್ಟ್ ನಲ್ಲಿನ ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ, ಅದೇ ಫೋಟೋವನ್ನು’05 ಮಾರ್ಚ್ 2017’ ರಂದು ಪೋಸ್ಟ್ ಮಾಡಿರುವ ಒಂದು ಟ್ವೀಟ್ ಸಿಕ್ಕಿತು. ಮತ್ತೊಬ್ಬ ಫೇಸ್ಬುಕ್ ಬಳಕೆದಾರ, ಈ ಫೋಟೋವನ್ನು ಒಂದು ಬ್ರಾಹ್ಮಣ ಸಂಘಕ್ಕೆ ಸಂಬಂಧಿಸಿದ ರ್ಯಾಲಿಯದು ಎಂದು ಹೇಳುತ್ತಾ ಪೋಸ್ಟ್ ಮಾಡಿದ್ದಾರೆ. ಆದರೆ, ಈ ಫೋಟೋಗೆ ಸಂಬಂಧಿಸಿದಂತೆ ಅಧಿಕೃತ ವಿವರಗಳು ದೊರೆಯಲಿಲ್ಲ.
ಫೋಟೋ – 2:
ಈ ಪೋಸ್ಟ್ ನಲ್ಲಿನ ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ, ಅದೇ ಫೋಟೋವನ್ನು ಫೇಸ್ಬುಕ್ ನಲ್ಲಿ ‘22 ಡಿಸೆಂಬರ್ 2019’ರಂದು ಹಂಚಿಕೊಂಡಿರುವ ಒಂದು ಪೋಸ್ಟ್ ಸಿಕ್ಕಿತು. ಫೋಟೋದಲ್ಲಿ ಕಾಣಿಸುತ್ತಿರುವುದು ಗುಜರಾತ್ ರಾಜ್ಯದಲ್ಲಿ ಕರ್ಣಿಸೇನ ಮಾಡಿದ ರ್ಯಾಲಿಗೆ ಸಂಬಂಧಿಸಿದ್ದು ಎಂದು ಅದರಲ್ಲಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಸಹ ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುತ್ತಾ ಇದೇ ವಿಷಯವನ್ನು ಹೇಳಿದ್ದಾರೆ. ಈ ಫೋಟೋ ಗುಜರಾತ್ ಗೆ ಸಂಬಂಧಿಸಿದ್ದು ಎಂಬುದಕ್ಕೆ ಅಧಿಕೃತ ಆಧಾರಗಳು ಸಿಗದೆ ಇದ್ದರು ಸಹ, ಪೋಸ್ಟ್ ನಲ್ಲಿನ ಈ ಫೋಟೋ ಹಳೆಯದು ಎಂದು ಖಚಿತವಾಗಿ ಹೇಳಬಹುದು.
ಕೊನೆಯದಾಗಿ, ಕಂಗನಾ ರಣಾವತ್ ರಕ್ಷಣೆಗಾಗಿ ಸಾವಿರಾರು ವಾಹನಗಳಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರುಗಳು ಎಂದು ಸಂಬಂಧವಿಲ್ಲದ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.