Fake News - Kannada
 

ತಾಲಿಬಾನಿಗಳು ಕಲ್ಲಿನಿಂದ ಹೊಡೆದು ಮಹಿಳಾ ಪೈಲಟ್‌ರನ್ನು ಸಾಯಿಸಿದ್ದಾರೆ ಎಂದು ಫರ್ಖುಂಡಾ ಮಲಿಕ್ಜಾಡಾ ಅವರ ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

0

ಅಫ್ಘಾನಿಸ್ತಾನ ವಾಯುಪಡೆಯ ನಾಲ್ಕು ಮಹಿಳಾ ಪೈಲಟ್‌ಗಳಲ್ಲಿ ಒಬ್ಬರಾದ ಸಫಿಯಾ ಫಿರೋಜಿಯನ್ನು ತಾಲಿಬಾನ್‌ಗಳು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ. ಅದರ ದೃಶ್ಯಗಳು ಎಂದು ಹೇಳಿಕೊಳ್ಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಕ್ರೂರವಾಗಿ ಹಲ್ಲೆಗೊಳಗಾದ ಮಹಿಳೆಯ ಮುಖದಲ್ಲಿ ರಕ್ತ ತುಂಬಿರುವ ಚಿತ್ರಣವಿದೆ. ಈ ಪೋಸ್ಟ್ ಸಫಿಯಾ ಫಿರೋಜಿಯನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ  ಎಂದು ಪ್ರತಿಪಾದಿಸಲಾಗಿದೆ. ಹಾಗಾದರೇ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ  ಪರಿಶೀಲಿಸೋಣ.

ಪ್ರತಿಪಾದನೆ: ಅಫ್ಘಾನ್ ವಾಯುಪಡೆಯ ಪೈಲಟ್, ಸಫಿಯಾ ಫಿರೋಜಿಯನ್ನು ತಾಲಿಬಾನ್ ಕೊಲೆ ಮಾಡುತ್ತಿರುವ ಫೋಟೋ.

ಸತ್ಯಾಂಶ: ಫೋಟೋದಲ್ಲಿರುವ ಮಹಿಳೆ ಫರ್ಖುಂಡಾ  ಮಲಿಕ್ಜಾಡಾ, ಅಫಘಾನ್ ವಾಯುಪಡೆಯ ಪೈಲಟ್ ಸಫಿಯಾ ಫಿರೋಜಿ ಅಲ್ಲ. 2015 ರಲ್ಲಿ ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಫರ್ಖುಂಡಾ  ಮಲಿಕ್ಜಾಡಾ ಅವರನ್ನು ಗುಂಪೊಂದು ಹೊಡೆದು ಸಾಯಿಸಿತು. ಅವರು ಖುರಾನ್ ಅನ್ನು ಸುಟ್ಟಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಅವರು ಫರ್ಖುಂಡಾ  ಮಲಿಕ್ಜಾಡಾರನ್ನು ಕೊಂದಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಕಂಡು ಬಂದದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಚಿತ್ರ 2018ರಲ್ಲಿ ನಡೆದ ಪ್ರತಿಭಟನೆಯ ವರದಿಯಲ್ಲಿ ಕಾಣಿಸಿಕೊಂಡಿದೆ. ಇದು ಕಾಬೂಲ್‌ನಲ್ಲಿ ನಡೆದ ಫರ್ಖುಂಡಾ ಹತ್ಯಾಕಾಂಡದ ಚಿತ್ರ ಎಂಬ ವರದಿಗಳು ಸಿಕ್ಕಿವೆ. ಅವುಗಳನ್ನು ಇಲ್ಲಿ ಕಾಣಬಹುದು. ಈ ಲೇಖನಗಳು ಕ್ರೂರವಾಗಿ ಹಲ್ಲೆಗೊಳಗಾದ ಮಹಿಳೆಯನ್ನು ಫರ್ಖುಂಡ ಮಲಿಕ್ಜಾಡಾ ಎಂದು ಉಲ್ಲೇಖಿಸಿವೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ವಿವರಗಳಿಗಾಗಿ ಹುಡುಕಿದಾಗ, ‘ದಿ ನ್ಯೂಯಾರ್ಕ್ ಟೈಮ್ಸ್’ ಫರ್ಖುಂಡಾ ಮಲಿಕ್ಜಾಡಾದ ದುರಂತ ಸಾವನ್ನು ವರದಿ ಮಾಡುವ ಲೇಖನವನ್ನು ಪ್ರಕಟಿಸಿರುವುದು ದೊರಕಿದೆ. ಈ ಘಟನೆ 2015 ರಲ್ಲಿ ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಲೇಖನದ ಪ್ರಕಾರ, ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಫರ್ಖುಂಡಾ ಮಲಿಕ್ಜಾಡಾ ಅವರನ್ನು ಗುಂಪೊಂದು ಹೊಡೆದು ಸಾಯಿಸಿತು. ಮಲಿಕ್ಜಾಡಾರು ಖುರಾನ್ ಸುಟ್ಟ ಸುಳ್ಳು ಆರೋಪದ ಮೇಲೆ ಹಲ್ಲೆ ಮಾಡಿ ಕೊಲ್ಲಲಾಯಿತು. ಈ ಘಟನೆಯ ಸಂಪೂರ್ಣ ವಿವರಗಳನ್ನು  ಹಲವಾರು ಸುದ್ದಿ ಜಾಲತಾಣಗಳು ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಓದಬಹುದು. ಫರ್ಖುಂಡ ಮಲಿಕ್ಜಾಡಾ ಅಫ್ಘಾನಿಸ್ತಾನ ವಾಯುಸೇನೆಯಲ್ಲಿ ಪೈಲಟ್ ಆಗಿದ್ದರು ಎಂದು ಎಲ್ಲಿಯೂ ವರದಿಯಾಗಿಲ್ಲ.

ಸಫಿಯಾ ಫಿರೋಜಿ ಯಾರು?

ಸಫಿಯಾ ಫಿರೋಜಿ ಬಗ್ಗೆ ವಿವರಗಳನ್ನು ಹುಡುಕಿದಾಗ, ಸಫಿಯಾ ಫಿರೋಜಿ ನಿಜವಾಗಿಯೂ ಅಫ್ಘಾನ್ ವಾಯುಪಡೆಯ ಮಹಿಳಾ ಪೈಲಟ್ ಎಂದು ತಿಳಿಯಿತು. ಈ ಹಿಂದೆ ಹಲವಾರು ಸುದ್ದಿ ವೆಬ್‌ಸೈಟ್‌ಗಳು ಸಫಿಯಾ ಫಿರೋಜಿ ಕುರಿತು ಸುದ್ದಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಓದಬಹುದು.

ಅಫಘಾನಿಸ್ತಾನದಲ್ಲಿ ತಾಲಿಬಾನ್ ನಿಂದ ಸಫಿಯಾ ಫಿರೋಜಿಯನ್ನು ಇತ್ತೀಚೆಗೆ ಗಲ್ಲಿಗೇರಿಸಲಾಯಿತು ಎಂದು ಎಲ್ಲಿಯೂ ವರದಿಯಾಗಿಲ್ಲ. ಆದಾಗ್ಯೂ, ಕೆಲವು ಸುದ್ದಿ ವೆಬ್‌ಸೈಟ್‌ಗಳು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡ ನಂತರ ತಾಲಿಬಾನ್ ಕೆಲವು ಅಫಘಾನ್ ವಾಯುಪಡೆಯ ಪೈಲಟ್‌ಗಳನ್ನು ಗಲ್ಲಿಗೇರಿಸಿತು ಎಂದು ವರದಿ ಮಾಡಿದೆ.

 ಸಂಕ್ಷಿಪ್ತವಾಗಿ ಹೇಳುವುದಾದರೆ, ಫರ್ಖುಂಡಾ ಮಲಿಕ್ಜಾಡಾನ ಹತ್ಯೆಗೆ ಸಂಬಂಧಿಸಿದ ಹಳೆಯ ಫೋಟೋವನ್ನು ಅಫ್ಘಾನ್ ಏರ್‌ಫೋರ್ಸ್ ಪೈಲಟ್ ಸಫಿಯಾ ಫಿರೋಜಿಯನ್ನು ಗಲ್ಲಿಗೇರಿಸುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll