ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ತೀರದಲ್ಲಿ ಹಲವಾರು ಶವಗಳು ತೇಲುತ್ತಿವೆ ಅಥವಾ ತೇಲಿ ಬಂದವು ಎಂದು ಅನೇಕ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನದಿ ತೀರದಲ್ಲಿ ತೇಲುತ್ತಿರುವ ಶವಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹ ಒಂದೆರಡು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಲೇಖನದ ಮೂಲಕ, ಈ ಪೋಸ್ಟ್‌ಗಳಲ್ಲಿನ ವಾದಗಳನ್ನು ಫ್ಯಾಕ್ಟ್‌ಚೆಕ್ ಮಾಡೋಣ.
ಪ್ರತಿಪಾದನೆ: ಗಂಗೆಯಲ್ಇ ತೇಲುತ್ತಿರುವ ಶವಗಳ ಇತ್ತೀಚಿನ ಚಿತ್ರಗಳು.ನ
ಿಜಾಂಶ: ಇವೆಲ್ಲವೂ 2008, 2012 ಮತ್ತು 2007 ರಲ್ಲಿ ವಾರಣಾಸಿ ಮತ್ತು ಹರಿದ್ವಾರದಲ್ಲಿನ ಗಂಗಾ ನದಿಯ ದಡದಲ್ಲಿ ತೆಗೆದ ಹಳೆಯ ಚಿತ್ರಗಳಾಗಿವೆ. ಗಂಗಾದಲ್ಲಿ ತೇಲುತ್ತಿರುವ ಶವಗಳ ಇತ್ತೀಚಿನ ಆವಿಷ್ಕಾರಕ್ಕೂ ಈ ಚಿತ್ರಗಳಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ದಿಕ್ಕುತಪ್ಪಿಸುವಂತಿದೆ.
ಚಿತ್ರ 1:
ಈ ಚಿತ್ರವನ್ನು 2008ರಲ್ಲಿ ಉತ್ತರ ಪ್ರದೇಶದ ವಾರಣಾಸಿ ಘಾಟ್ ಬಳಿ ತೆಗೆಯಲಾಗಿದೆ. ಈ ಫೋಟೋದ ಮೂಲವು ಅಲಾಮಿ ಸ್ಟಾಕ್ ಇಮೇಜ್ ರೆಪೊಸಿಟರಿಯಲ್ಲಿ ಪತ್ತೆಯಾಯಿತು. ಈ ವೆಬ್‌ಸೈಟ್‌ನಲ್ಲಿನ ಚಿತ್ರದ ವಿವರಣೆಯಲ್ಲಿ ‘ನಾಯಿಯೊಂದು ಉತ್ತರ ಪ್ರದೇಶದ ವಾರಣಾಸಿ ಘಾಟ್‌ನಲ್ಲಿ ಸತ್ತ ಮನುಷ್ಯನನ್ನು ತಿನ್ನುತ್ತದೆ’ ಎಂದು ಬರೆಯಲಾಗಿದೆ.
ಚಿತ್ರ 2:
ಈ ಫೋಟೋವನ್ನು ಗೂಗಲ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಸ್ಟಾಕ್ ಇಮೇಜ್ ರೆಪೊಸಿಟರಿಯ ಗೆಟ್ಟಿ ಇಮೇಜಸ್‌ನಲ್ಲಿ ದೊರಕಿದೆ. ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಈ ಚಿತ್ರಕ್ಕೆ ಸಂಬಂಧಿಸಿದ ವಿವರಗಳ ಪ್ರಕಾರ, ಚಿತ್ರವನ್ನು 2012 ರಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಗಂಗಾ ನದಿಯ ದಡದಲ್ಲಿ ಕ್ಲಿಕ್ ಮಾಡಲಾಗಿದೆ.
ಚಿತ್ರ 3:
ಈ ಫೋಟೋವನ್ನು ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಅಮೆರಿಕಾದ ಇಮೇಜ್ ಮತ್ತು ವಿಡಿಯೋ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ನ ಫ್ಲಿಕರ್‌ನಲ್ಲಿ ಕಂಡುಬಂದಿದೆ. ಚಿತ್ರದ ವಿವರಣೆಯಲ್ಲಿ ‘ಗಂಗಾ, ಹರಿದ್ವಾರದಲ್ಲಿ ಮೃತ ದೇಹ ಎಂದು ಬರೆಯಲಾಗಿದೆ. ಫ್ಲಿಕರ್ ಪ್ರಕಾರ, ಚಿತ್ರವನ್ನು 2007 ರಲ್ಲಿ ತೆಗೆಯಲಾಗಿದೆ.
ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ತೀರದಲ್ಲಿ ತೇಲುತ್ತಿರುವ ಕೋವಿಡ್ ರೋಗಿಗಳ ಮೃತ ದೇಹಗಳು ಪತ್ತೆಯಾಗಿವೆ ಎಂಬುದು ನಿಜ. ಅನೇಕ ಸುದ್ದಿ ಸಂಸ್ಥೆಗಳು ಸಹ ಇದನ್ನು ವರದಿ ಮಾಡಿವೆ. ಆದಾಗ್ಯೂ, ಪೋಸ್ಟ್‌ನಲ್ಲಿ ಹಂಚಲಾದ ಮೇಲಿನ ಚಿತ್ರಗಳು ಹಳೆಯವು ಮತ್ತು ಕೋವಿಡ್‌ಗೆ ಯಾವುದೇ ಸಂಬಂಧವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಗಂಗಾದಲ್ಲಿ ತೇಲುತ್ತಿರುವ ಶವಗಳ ಹಳೆಯ ಚಿತ್ರಗಳನ್ನು ಇತ್ತೀಚಿನ ಚಿತ್ರಗಳೆಂದು ಹಂಚಿಕೊಳ್ಳಲಾಗಿದೆ.