ನಾಥೂರಾಮ್ ಗೋಡ್ಸೆಗೆ ಮರಣದಂಡನೆ ವಿಧಿಸಿದ ನ್ಯಾಯಮೂರ್ತಿ ಜಿ ಡಿ ಖೋಸ್ಲಾ ಅವರು ತಮ್ಮ “ದಿ ಮರ್ಡರ್ ಆಫ್ ಮಹಾತ್ಮ ಅಂಡ್ ದಿ ಅದರ್ ಕೇಸಸ್ ಫ್ರಮ್ ಜಡ್ಜ್ ಡೈರಿ” ಪುಸ್ತಕದಲ್ಲಿ ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಗೋಡ್ಸೆಯ ನ್ಯಾಯಾಲಯದ ಹೇಳಿಕೆಯನ್ನು ವಿವರಿಸುವ ಪುಸ್ತಕದ ಭಾಗಗಳೂ ಸೇರಿವೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ನಾಥೂರಾಂ ಗೋಡ್ಸೆಯ ವಿಚಾರಣೆಯ ಹೊಣೆ ವಹಿಸಿದ್ದ ನ್ಯಾಯಮೂರ್ತಿ ಜಿ ಡಿ ಖೋಸ್ಲಾ ಅವರು ತಮ್ಮ “ದಿ ಮರ್ಡರ್ ಆಫ್ ಮಹಾತ್ಮ” ಪುಸ್ತಕದಲ್ಲಿ ಅವರ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಫ್ಯಾಕ್ಟ್: ನ್ಯಾಯಮೂರ್ತಿ ಖೋಸ್ಲಾ ತಮ್ಮ ಪುಸ್ತಕದಲ್ಲಿ ಮರಣದಂಡನೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಯಾವುದೇ ಸಂದರ್ಭದಲ್ಲೂ ಗೋಡ್ಸೆ ನಿರಪರಾಧಿ ಎಂದಾಗಲಿ ಅಥವಾ ಅವರು ಯಮರಾಜನೆಂದಾಗಲಿ, ಅಮಾಯಕ ದೇಶಭಕ್ತನಿಗೆ ಶಿಕ್ಷೆ ವಿಧಿಸಿದ್ದಾರೆ ಎಂದಾಗಲಿ, ಅಥವಾ ಆಡಳಿತ ಸರ್ಕಾರದ ಪ್ರಭಾವದಿಂದಾಗಲಿ ಮರಣದಂಡನೆ ವಿಧಿಸಿದರು ಎಂದು ಅವರು ಎಲ್ಲಿಯೂ ಉಲ್ಲೇಖಿಸಲಿಲ್ಲ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗೋಡ್ಸೆ ಮತ್ತು ಅವರ ಸಹ-ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಯ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಜಿಡಿ ಖೋಸ್ಲಾ ಅವರು 1965 ರಲ್ಲಿ ನಡೆದ ಘಟನೆಗಳ ಆಧಾರಿತ ‘ದಿ ಮರ್ಡರ್ ಆಫ್ ದಿ ಮಹಾತ್ಮ’ ಎಂಬ ಪುಸ್ತಕವನ್ನು ಬರೆದಿದ್ದಾರೆ.
ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ, ಗೋಡ್ಸೆ 150 ಪ್ಯಾರಾಗ್ರಾಫ್ ಹೇಳಿಕೆಯನ್ನು ಓದಲು ಐದು ಗಂಟೆಗಳಿಗೂ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದರು. ನ್ಯಾಯಮೂರ್ತಿ ಖೋಸ್ಲಾ ಅವರು ತಮ್ಮ ಪುಸ್ತಕದಲ್ಲಿ ಗೋಡ್ಸೆ ಅವರ ಹೇಳಿಕೆಯು ಅಲ್ಲಿ ನೆರೆದಿದ್ದ ಜನರ ಮೇಲೆ ಭಾವನಾತ್ಮಕ ಪ್ರಭಾವ ಬೀರಿತ್ತು ಮತ್ತು ಆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ನೀರವ ಮೌನವಿತ್ತು ಎಂದು ಉಲ್ಲೇಖಿಸಿದ್ದಾರೆ ಎಂದು ವೈರಲ್ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಖೋಸ್ಲಾ ಅವರು ಮರಣದಂಡನೆಯ ಪರಿಕಲ್ಪನೆಯ ಬಗ್ಗೆ ತಮ್ಮ ಅಸಮಾಧಾನವನ್ನು ಈ ಪುಸ್ತಕದಲ್ಲಿ ತಿಳಿಸಿದ್ದು, ಒಬ್ಬ ಅಮಾಯಕನಿಗೆ ಮರಣದಂಡನೆ ವಿಧಿಸುವುದು ಅವರ ಅನುಭವದ ದಿನಗಳಲ್ಲಿಅವರಿಗಿದ್ದ ಬಹುದೊಡ್ಡ ಭಯವೆಂದು ಉಲ್ಲೇಖಿಸಿದ್ದಾರೆ. ಆದ್ರೆ ಅವರೆಲ್ಲಿಯೂ ಗೋಡ್ಸೆ ನಿರಪರಾಧಿ ಎಂದಾಗಲಿ, ಅಥವಾ ಯಮರಾಜನೆಂದಾಗಲಿ ಉಲ್ಲೇಖಿಸಲಿಲ್ಲ ಮತ್ತು ತಾನು ಒಬ್ಬ ಅಮಾಯಕ ದೇಶಭಕ್ತನಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಹೇಳಲಿಲ್ಲ.
ಖೋಸ್ಲಾ ಅವರು ಗೋಡ್ಸೆಯ ಅಪರಾಧದ ಗಂಭೀರತೆಯನ್ನು ಕಂಡುಕೊಂಡು ಮರಣದಂಡನೆಯು ಸೂಕ್ತವಾದ ಶಿಕ್ಷೆಯೇ ಎಂಬುವುದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ತಮಗಿದ್ದ ಅನುಮಾನಗಳನ್ನು ಹೊರಹಾಕಿದ್ದರು. ಆದಾಗ್ಯೂ, ನ್ಯಾಯಮೂರ್ತಿ ಖೋಸ್ಲಾ ಅವರು ಯಾವುದೇ ಸರ್ಕಾರದ ಪ್ರಭಾವದಿಂದ ಮರಣದಂಡನೆ ವಿಧಿಸಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹ ವಿಷಯ.

“ವ್ಯಕ್ತಿಯೋರ್ವ ಸಾವಿನಂಚಿನಲ್ಲಿದ್ದಾನೆ” ಎಂದು ಗೋಡ್ಸೆ ಹೇಳಿರುವ ಮಾತನ್ನುಅವರು ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ ಜೈಲಿನಲ್ಲಿದ್ದ ಗೋಡ್ಸೆಯ ಅಂತಿಮ ದಿನಗಳನ್ನು ನೆನೆಸಿಕೊಂಡ, ನ್ಯಾಯಮೂರ್ತಿ ಖೋಸ್ಲಾ ಅವರು ”ಜೈಲಿನಲ್ಲಿದ್ದ ಕೊನೆಯ ದಿನಗಳಲ್ಲಿ ಗೋಡ್ಸೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪಪಟ್ಟಿದ್ದರು ಮತ್ತು ತನಗೆ ಇನ್ನೊಂದು ಅವಕಾಶವನ್ನು ನೀಡಿದರೆ ಮುಂದಿನ ಜೀವನವನ್ನು ದೇಶ ಸೇವೆ ಮತ್ತು ಶಾಂತಿ ಕಾಪಾಡುವಲ್ಲಿ ಶ್ರಮಿಸುತ್ತೇನೆ” ಎಂದು ಹೇಳಿದ್ದರು.

ಈ ಹಂತದಲ್ಲಿ, ಗೋಡ್ಸೆ ತನ್ನ ಕೊಲೆಯ ಅಪರಾಧವನ್ನು ವಿರೋಧಿಸಲಿಲ್ಲ ಅಥವಾ ಮರಣದಂಡನೆಯ ಕುರಿತಾಗಿ ಪ್ರಶ್ನಿಸಲಿಲ್ಲ ಎಂಬುವುದನ್ನು ಗಮನಿಸಬೇಕಾಗಿದೆ. ಅವರ ತೀರ್ಪು ಕೇವಲ ಮನವಿಗೆ ಸಂಬಂಧಿಸಿದಂತೆ ತೀರ್ಪನ್ನು ಪ್ರಶ್ನಿಸುವುದರ ಮೇಲೆ ಮಾತ್ರ ನಿರ್ಧಾರವಾಗಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ನ್ಯಾಯಮೂರ್ತಿ ಖೋಸ್ಲಾ ಅವರು ತಮ್ಮ ಪುಸ್ತಕದಲ್ಲಿ ಸರ್ಕಾರದ ಪ್ರಭಾವದಿಂದ ಗೋಡ್ಸೆಗೆ ಶಿಕ್ಷೆ ವಿಧಿಸಿದ ಯಾವುದೇ ಉಲ್ಲೇಖವನ್ನು ಮಾಡಲಿಲ್ಲ.