Fake News - Kannada
 

2024 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ಮೋದಿ ಅವರ ಹೆಸರು ನಿರ್ದೇಶಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ

0

ಇತ್ತೀಚಿಗೆ ನೊಬೆಲ್ ಪ್ರಶಸ್ತಿ ಸಮಿತಿಯ ಡೆಪ್ಯುಟಿ ಲೀಡರ್ ಅಸ್ಲೆ ತೋಜೆ ಅವರು ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡುವ ವೀಡಿಯೊ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2024 ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ಮೋದಿ ಅವರ ಹೆಸರನ್ನು ಸೂಚಿಸಲಾಗಿದೆ ಎಂದು ವಿಡಿಯೋದಲ್ಲಿ ಹೇಳಿಕೊಳ್ಳಲಾಗಿದೆ. ಆಸ್ಲೆ ಟೋಜೆ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಪ್ರಧಾನಿ ಮೋದಿಯವರ ಹಸ್ತಕ್ಷೇಪವನ್ನು ಚರ್ಚಿಸಿ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಪರಿಣಾಮಗಳನ್ನು ರಷ್ಯಾಕ್ಕೆ ತಿಳಿಹೇಳಿದ  ಭಾರತದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: 2024 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ಮೋದಿ ಹೆಸರನ್ನು ಸೂಚಿಸಲಾಗಿದೆ.

ಫ್ಯಾಕ್ಟ್: 2024 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ಮೋದಿ ಅವರ ನಾಮನಿರ್ದೇಶನ ಮಾಡಲಾಗಿದೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಇದಲ್ಲದೆ, ನೊಬೆಲ್ ಪ್ರಶಸ್ತಿ ಶಾಸನಗಳು ನಾಮನಿರ್ದೇಶನಗಳು ಮತ್ತು ನಾಮನಿರ್ದೇಶಿತರ ವಿವರಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ. 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ನೀಡಲಾಯಿತು. ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಪ್ರಧಾನಿ ಮೋದಿಯವರ ಹಸ್ತಕ್ಷೇಪದ ಕುರಿತು ಆಸ್ಲೆ ತೋಜೆ ಚರ್ಚಿಸುತ್ತಿರುವ ವೈರಲ್ ವೀಡಿಯೊ ಮಾರ್ಚ್ 2023 ರಲ್ಲಿ ತೋಜೆ ಭಾರತಕ್ಕೆ ಭೇಟಿ ನೀಡಿದಾಗ ಆಡಿದ ಮಾತಾಗಿದೆ. ಈ ಸಮಯದಲ್ಲಿ, ಟೋಜೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ಭಾರತವನ್ನು ವಿಶೇಷವಾಗಿ ಪ್ರಧಾನಿ ಮೋದಿಯನ್ನು ಹೊಗಳಿದರು. ಈ ಕುರಿತು ಮಾರ್ಚ್ 2023 ರಲ್ಲಿ ಹಲವಾರು ಪ್ರಮುಖ ಸುದ್ದಿ ಸಂಸ್ಥೆಗಳು ಲೇಖನಗಳನ್ನು ಪ್ರಕಟಿಸಿದ್ದವು. ಟೋಜೆ ಅವರ ಕಾಮೆಂಟ್‌ಗಳನ್ನು ಉಲ್ಲೇಖಿಸಿ ಪಿಎಂ ಮೋದಿ ಅವರು 2023 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಸೂಚಿಸಲಾಗಿದೆ. ಆದರೆ ತದನಂತರ ಟೋಜೆ ನಂತರ ಮಾಧ್ಯಮದ ಕ್ಲೇಮ್ಗಳನ್ನು ನಿರಾಕರಿಸಿ, ತಾನು ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂದು ಪ್ರಧಾನಿ ಮೋದಿಯನ್ನು ಎಲ್ಲಿಗೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

2024 ರ ನೊಬೆಲ್ ಪ್ರಶಸ್ತಿಗಳನ್ನು ಅಕ್ಟೋಬರ್ 2024 ರಲ್ಲಿ (ಇಲ್ಲಿ) ಘೋಷಿಸಲಾಗಿದೆ ಎಂಬುದನ್ನು ಗಮನಿಸಬೇಕಾದ ಅಂಶ. ನಾರ್ವೇಜಿಯನ್ ನೊಬೆಲ್ ಸಮಿತಿಯು 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಿರೋಷಿಮಾ ಮತ್ತು ನಾಗಾಸಾಕಿ ಪರಮಾಣು ಬಾಂಬ್ ಸ್ಫೋಟದಿಂದ ಬದುಕುಳಿದವರ ಧ್ವನಿಯನ್ನು ವರ್ಧಿಸುವ ಮೂಲಕ ‘ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ’ ಪ್ರಯತ್ನಗಳಿಗಾಗಿ ಜಪಾನಿನ ಸಂಸ್ಥೆ ನಿಹಾನ್ ಹಿಡಾಂಕ್ಯೊಗೆ ನೀಡಿದೆ (ಇಲ್ಲಿ, ಇಲ್ಲಿ). 


ನೊಬೆಲ್ ಪ್ರಶಸ್ತಿ ಸಮಿತಿಯ ಡೆಪ್ಯುಟಿ ಲೀಡರ್ ಆಸ್ಲೆ ಟೋಜೆ ಅವರು ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡುವ ಈ ವೈರಲ್ ವೀಡಿಯೊದ ಕುರಿತು ವಿವರಗಳನ್ನು ಸಂಗ್ರಹಿಸಲು ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ವೀಡಿಯೊವು ಮಾರ್ಚ್ 2023 ರದ್ದು  ಎಂದು ಕಂಡುಬಂದಿದೆ (ಇಲ್ಲಿ, ಇಲ್ಲಿ). 

ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಡೆಪ್ಯುಟಿ ಲೀಡರ್ ಅಸ್ಲೆ ಟೋಜೆ ಮಾರ್ಚ್ 2023 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ತಿಳಿದು ಬಂದಿದೆ. ಅವರು 14 ಮಾರ್ಚ್ 2023 ರಂದು ನವದೆಹಲಿಯಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ (IIC) ನಲ್ಲಿ ಇಂಡಿಯಾ ಸೆಂಟರ್ ಫೌಂಡೇಶನ್ ಆಯೋಜಿಸಿದ್ದ ‘ಆಲ್ಟ್ರ್ನೆಟ್ ಡೆವಲಪ್ಮೆಂಟ್ ಮಾಡೆಲ್ ಅಂಡ್ ಪೀಸ್’ ಕುರಿತು ರೌಂಡ್ಟ್ಯಾಬ್ಲೆ/ದುಂಡುಮೇಜಿನ ಚರ್ಚೆಯಲ್ಲಿ ಭಾಗವಹಿಸಿದರು.  ಈ ಸಮ್ಮೇಳನದಲ್ಲಿ, ರಷ್ಯಾ-ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಜಾಗತಿಕ ಶಾಂತಿಯ ಕುರಿತು ಟೋಜೆ ಮಾತನಾಡಿದರು. ಸಮ್ಮೇಳನದ ನಂತರ, ಅವರು ಅನೇಕ ಸುದ್ದಿ ಸಂಸ್ಥೆಗಳೊಂದಿಗೆ ಕೂಡ ಮಾತುಕತೆ ನಡೆಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಟೋಜೆ ಅವರು ಭಾರತವನ್ನು ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ತಡೆಯುವಲ್ಲಿ ಪ್ರಧಾನಿ ಮೋದಿ ಅವರ ಮಧ್ಯಸ್ಥಿಕೆಗಾಗಿ ಅವರು ಶ್ಲಾಘಿಸಿದ್ದಾರೆ.

ಈ ಟೀಕೆಗಳನ್ನು ಅನುಸರಿಸಿ, ಹಿಂದೂಸ್ತಾನ್ ಟೈಮ್ಸ್, ಎಕನಾಮಿಕ್ ಟೈಮ್ಸ್, TOI, ABP, CNBC, WION, Mint, ZEE, ABN, ಜಾಗರಣ್ ಮತ್ತು ASIANET ನಂತಹ ಹಲವಾರು ಪ್ರಮುಖ ಸುದ್ದಿ ಸಂಸ್ಥೆಗಳು ಮಾರ್ಚ್ 2023 ರಲ್ಲಿ ಲೇಖನಗಳನ್ನು ಪ್ರಕಟಿಸಿದೆ. ಟೋಜೆ ಅವರ ಕಾಮೆಂಟ್‌ಗಳನ್ನು ಉಲ್ಲೇಖಿಸಿ 2023 ರ ನೊಬೆಲ್‌ಗೆ ಶಾಂತಿ ಪ್ರಶಸ್ತಿಗೆ ಪಿಎಂ ಮೋದಿ ಪ್ರಮುಖ ಸ್ಪರ್ಧಿ ಎಂದು ಸೂಚಿಸಿದೆ.

ಆದರೆ, ಅಸ್ಲೆ ಟೋಜೆ ಅವರು  ANI ಯೊಂದಿಗೆ ಮಾತನಾಡುವಾಗ, ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿಯಾಗಿ ಪಿಎಂ ಮೋದಿಯನ್ನು ಉಲ್ಲೇಖಿಸಿದ್ದಾರೆ ಎಂಬ ಮಾಧ್ಯಮ ಹೇಳಿಕೆಗಳನ್ನು ನಿರಾಕರಿಸಿದ್ದಾರೆ ಎಂದು ಹೇಳುವ ಅನೇಕ ಲೇಖನಗಳನ್ನು (ಇಲ್ಲಿ, ಇಲ್ಲಿ) ನಾವು ಕಂಡುಕೊಂಡಿದ್ದೇವೆ.

ನೊಬೆಲ್ ಶಾಂತಿ ಪ್ರಶಸ್ತಿಯ ಕಾನೂನುಗಳು ನಿರೀಕ್ಷಿತ ಅಭ್ಯರ್ಥಿಗಳ ವಿವರಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ ಎಂಬುದು ಗಮನಿಸಬೇಕಾದ ಅಂಶ. ಸಾಮಾನ್ಯವಾಗಿ, 50 ವರ್ಷಗಳ ನಂತರ ನಾಮಿನೇಷನ್ ಮತ್ತು ನಾಮಿನೇಟರ್‌ಗಳ ವಿವರಗಳನ್ನು ತಿಳಿಸುವುದಿಲ್ಲ. ಈ ಸೂತ್ರ ಇನ್ವೆಸ್ಟಿಗೇಷನ್ ಮತ್ತು ಅಭಿಪ್ರಾಯಗಳಿಗೂ ಅನ್ವಯಿಸುತ್ತದೆ. ನೊಬೆಲ್ ಫೌಂಡೇಶನ್‌ನ ವಿವರವಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. 

ಫಾಕ್ಟ್ಲಿ ಈ ಹಿಂದೆಯೂ ಅಂದರೆ  2023 ರ ಮಾರ್ಚ್‌ನಲ್ಲಿ ಇದೇ ರೀತಿಯ ಕ್ಲೇಮ್ ಫ್ಯಾಕ್ಟ್ ಚೆಕ್ ಮಾಡಲಾಗಿದೆ.  ನೊಬೆಲ್ ಪ್ರಶಸ್ತಿ ಸಮಿತಿಯ ಡೆಪ್ಯುಟಿ ಲೀಡರ್ ಅಸ್ಲೆ ಟೋಜೆ ಅವರು ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿಯಾಗಿ ಭಾರತೀಯ ಪ್ರಧಾನಿ ಮೋದಿಯನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ನೀಡಲಾಗಿದೆ. ಹಾಗಾಗಿ ಭಾರತದ ಪ್ರಧಾನಿ ಮೋದಿ ಅವರನ್ನು 2024 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಹೇಳಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ.

Share.

Comments are closed.

scroll