Fake News - Kannada
 

ನೀಲ್ಕಮಲ್ಫರ್ನಿಚರ್ಕಂಪನಿ ‘ಪಾಕಿಸ್ತಾನ್ ಮುರ್ದಾಬಾದ್’ ಎಂದಿರುವ ಈ ಸ್ಟಿಕ್ಕರ್ಗಳನ್ನು ಕಸದಬುಟ್ಟಿಯ ಮೇಲೆ ಅಂಟಿಸಿಲ್ಲ

0

ಪಾಕಿಸ್ತಾನವನ್ನು ವಿರೋಧಿಸಿ ದೇಶಪ್ರೇಮವನ್ನು ಮೆರೆದಿರುವ ನೀಲ್​ಕಮಲ್​ಫರ್ನಿಚರ್​ಕಂಪನಿಯು, ನೀಲ್​ಕಮಲ್​ಕಸದ ಬುಟ್ಟಿಯ ಮೇಲೆ ‘ಪಾಕಿಸ್ತಾನ್​ಮುರ್ದಾಬಾದ್​’ ಎಂಬ ಸ್ಟಿಕ್ಕರ್​ಅಂಟಿಸಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ಶೇರ್​ಆಗಿದೆ. ಬನ್ನಿ ಸತ್ಯವೇನೆಂದು ತಿಳಿಯೋಣ.

ಪ್ರತಿಪಾದನೆ: ‘ಪಾಕಿಸ್ತಾನ್​ಮುರ್ದಾಬಾದ್​’ ಸ್ಟಿಕ್ಕರ್​ಗಳನ್ನು ತನ್ನ ಕಸದಬುಟ್ಟಿಗಳ ಮೇಲೆ ಅಂಟಿಸುವ ಮೂಲಕ ದೇಶಪ್ರೇಮ ಮೆರೆದ ದಿ ನೀಲ್​ಕಮಲ್​ಫರ್ನಿಚರ್​ಕಂಪನಿ.

ಸತ್ಯಾಂಶ: ಈ ಫೋಟೋವನ್ನು 2019ರಲ್ಲಿ ಉದಯಪುರ್ರೈಲ್ವೆ ನಿಲ್ದಾಣದಲ್ಲಿ ತೆಗೆಯಲಾಗಿದೆ. ಉದಯ್​​ಪುರ ರೈಲ್ವೆ ನಿಲ್ದಾಣದಲ್ಲಿ ಇದ್ದ ನೀಲ್​ಕಮಲ್​ಪ್ಲಾಸ್ಟಿಕ್​ಕಸದಬುಟ್ಟಿಯ ಮೇಲೆ ಉದಯಪುರ್​​ನಲ್ಲಿನ ಕೆಲವು ಅಪರಿಚಿತ ವ್ಯಕ್ತಿಗಳು ‘ಪಾಕಿಸ್ತಾನ್​ಮುರ್ದಾಬಾದ್​’ ಸ್ಟಿಕ್ಕರ್​ಗಳನ್ನು ಅಂಟಿಸಿದ್ದರು. ಈ ಸ್ಟಿಕ್ಕರ್​ಗಳನ್ನು ನೀಲ್​ಕಮಲ್​ಫರ್ನಿಚರ್​ಕಂಪನಿ ಅಂಟಿಸಿಲ್ಲ. ಹೀಗಾಗಿ ಈ ಪೋಸ್ಟ್​ನಲ್ಲಿರುವ ಪ್ರತಿಪಾದನೆ ತಪ್ಪಾಗಿದೆ.

ಇಲ್ಲಿ ಶೇರ್​ಆಗಿರುವ ಫೋಟೋದ ಹಿನ್ನೆಲೆಯನ್ನು ಹುಡುಕಿದಾಗ, ಇದೇ ರೀತಿಯ ಫೋಟೋ ಹೊಂದಿರುವ ಲೇಖನ ‘ಪತ್ರಿಕಾ’ ಸುದ್ದಿ ಜಾಲತಾಣದಲ್ಲಿ ಫೆಬ್ರುವರಿ 2019ರಲ್ಲಿ ಪ್ರಕಟವಾಗಿರುವುದು ತಿಳಿದುಬಂದಿದೆ. ಚಿತ್ರದಲ್ಲಿ ಕಾಣುತ್ತಿರುವ ಕಸದಬುಟ್ಟಿಗಳು ಉದಯಪುರ್ಸಿಟಿ ರೈಲ್ವೆ ನಿಲ್ದಾಣದಲ್ಲಿ ಇದ್ದಂತಹುಗಳಾಗಿವೆ ಎಂದು ಲೇಖನ ಹೇಳುತ್ತದೆ. ಉದಯಪುರ ರೈಲ್ವೆ ನಿಲ್ದಾಣದಲ್ಲಿದ್ದ ನೀಲ್​ಕಮಲ್ ಪ್ಲಾಸ್ಟಿಕ್​ಕಸದಬುಟ್ಟಿಯ ಮೇಲೆ ಕೆಲವರು ಅಪರಿಚಿತ ಉದಯಪುರ ಸ್ಥಳೀಯ ನಿವಾಸಿಗಳು ಈ ಸ್ಟಿಕ್ಕರ್​ಗಳನ್ನು ಅಂಟಿಸಿದ್ದಾರೆ ಎಂದು ವರದಿಯಾಗಿದೆ. ರೈಲ್ವೆ ನಿಲ್ದಾಣದಲ್ಲಿದ್ದ ಕಸದಬುಟ್ಟಿಗಳ ಮೇಲೆ ಈ ಸ್ಟಿಕ್ಕರ್​ಗಳನ್ನು ಅಂಟಿಸುವ ಮೂಲಕ ಪುಲ್ವಾಮ ದಾಳಿಯ ವಿರುದ್ಧ ಉದಯಪುರ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸ್ಥಳೀಯ ಪತ್ರಕರ್ತರು ತಿಳಿಸಿದ ಬಳಿಕ  ರೈಲ್ವೆ ನಿಲ್ದಾಣದಲ್ಲಿದ್ದ 10ರಿಂದ 12 ಕಸದ ಬುಟ್ಟಿಗಳ ಮೇಲೆ ಅಂಟಿಸಲಾಗಿದ್ದ ‘ಪಾಕಿಸ್ತಾನ್​ಮುರ್ದಾಬಾದ್​’ ಸ್ಟಿಕ್ಕರ್​ಗಳನ್ನು ರೈಲ್ವೆ ನಿಲ್ದಾಣದ ಅಧಿಕಾರಿಗಳು ತೆರವು ಮಾಡಿದ್ದಾರೆ. ಈ ಸ್ಟಿಕ್ಕರ್​ಗಳನ್ನು ಅಂಟಿಸಿದ ಸ್ಥಳೀಯರು ಯಾರೆಂಬುದನ್ನು ರೈಲ್ವೆ ನಿಲ್ದಾಣದ ಅಧಿಕಾರಿಗಳು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇದೇ ರೀತಿಯ ವರದಿ ಫೆಬ್ರುವರಿ 2019ರಲ್ಲಿ ‘ಉದಯಪುರ್​ಟೈಮ್ಸ್​’ ಸುದ್ದಿ ಜಾಲತಾಣದಲ್ಲಿ ವರದಿಯಾಗಿರುವುದನ್ನು ಕಾಣಬಹುದು.

ನೀಲ್​ಕಮಲ್​ನ ನಿಜವಾದ ಪ್ಲಾಸ್ಟಿಕ್​ಕಸದಬುಟ್ಟಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಪಾಕಿಸ್ತಾನ ವಿರೋಧಿ ಸ್ಟಿಕ್ಕರ್​ಗಳನ್ನು ತನ್ನ ಕಸದಬುಟ್ಟಿಯ ಮೇಲೆ ನೀಲ್​ಕಮಲ್​ಫರ್ನಿಚರ್​ಕಂಪನಿ ಅಂಟಿಸಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಉದಯಪುರ್​ರೈಲ್ವೆ ನಿಲ್ದಾಣದಲ್ಲಿದ್ದ ಕಸದಬುಟ್ಟಿಗಳ ಮೇಲೆ ‘ಪಾಕಿಸ್ತಾನ್​ಮುರ್ದಾಬಾದ್​’ ಸ್ಟಿಕ್ಕರ್​ಗಳನ್ನು ನೀಲ್​ಕಮಲ್​ಫರ್ನಿಚರ್​ಕಂಪನಿ ಅಂಟಿಸಿಲ್ಲ.

Share.

About Author

Comments are closed.

scroll