Fake News - Kannada
 

ಮುಸ್ತಫಾಬಾದ್ AIMIM ಅಭ್ಯರ್ಥಿ ತಾಹಿರ್ ಹುಸೇನ್ ಅವರ ಚುನಾವಣಾ ಪ್ರಚಾರ ರೋಡ್ ಶೋ ಅನ್ನು ಅವರ ಸೋಲನ್ನು ಆಚರಿಸುವ ಚುನಾವಣೋತ್ತರ ಮೆರವಣಿಗೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 05, 2025 ರಂದು ನಡೆದು ಫೆಬ್ರವರಿ 08 ರಂದು ಫಲಿತಾಂಶಗಳನ್ನು ಘೋಷಿಸಲಾಯಿತು. ಬಿಜೆಪಿ 48 ಸ್ಥಾನಗಳೊಂದಿಗೆ ಸ್ಪಷ್ಟ ಗೆಲುವು ಸಾಧಿಸಿದರೆ, ಎಎಪಿ 22 ಸ್ಥಾನಗಳನ್ನು ಗೆದ್ದಿದೆ (ಇಲ್ಲಿ ಮತ್ತು ಇಲ್ಲಿ). ಇದರ ನಡುವೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) ನ ರಾಲಿಯನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇತ್ತೀಚೆಗೆ ದೆಹಲಿ ಚುನಾವಣೆಯಲ್ಲಿ ಸೋತ ನಂತರ AIMIM ನಾಯಕ ತಾಹಿರ್ ಹುಸೇನ್ ಅವರ ಮೆರವಣಿಗೆಯನ್ನು ವೀಡಿಯೊ ತೋರಿಸಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.  

ಕ್ಲೇಮ್: 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ AIMIM ಅಭ್ಯರ್ಥಿ ತಾಹಿರ್ ಹುಸೇನ್ ಮೆರವಣಿಗೆ ನಡೆಸಿದರು.

ಫ್ಯಾಕ್ಟ್: ಚುನಾವಣೆ ನಡೆಯುವ ಮೊದಲು ಅಂದರೆ ಫೆಬ್ರವರಿ 03, 2025 ರಂದು ನಡೆದ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ತಾಹಿರ್ ಹುಸೇನ್ ಅವರ ರೋಡ್ ಶೋ ಅನ್ನು ವೀಡಿಯೊ ತೋರಿಸುತ್ತದೆ. ಫೆಬ್ರವರಿ 03 ರಂದು ಕೊನೆಗೊಂಡ ದೆಹಲಿ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅವರು ಕಸ್ಟಡಿ ಪೆರೋಲ್‌ನಲ್ಲಿದ್ದರು ಎಂದು ರಿಪೋರ್ಟ್ ತಿಳಿಸುತ್ತದೆ. ಹಾಗಾಗಿ  ಯಾವುದೇ ರಾಲಿಯನ್ನು ನಡೆಸಲು ಸಾಧ್ಯವಿಲ್ಲ. ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದಾರೆ. ಆದ್ದರಿಂದ, ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ. 

ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು, ನಾವು AIMIM ನಾಯಕ ತಾಹಿರ್ ಹುಸೇನ್ ಅವರ ಹಿನ್ನೆಲೆ/ಬ್ಯಾಕ್ಗ್ರೌಂಡ್ ವೆರಿಫಿಕೇಷನ್ ಮಾಡಿದ್ದೇವೆ.   ಅವರು ಈ ಹಿಂದೆ ದೆಹಲಿಯಲ್ಲಿ AAP ಯ ಕೌನ್ಸಿಲರ್ ಆಗಿದ್ದರು ಆದರೆ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ 2020 ರಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿ  ಅಮಾನತುಗೊಂಡರು. 2020 ರ ಗಲಭೆಯ ಸಮಯದಲ್ಲಿ ಗುಪ್ತಚರ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿದಂತೆ ಹುಸೇನ್ ಅವರನ್ನು ಬಂಧಿಸಲಾಯಿತು. ಡಿಸೆಂಬರ್ 2024 ರಲ್ಲಿ, ಅವರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) ಗೆ ಸೇರಿದರು ಮತ್ತು ಮುಸ್ತಾಬಾದ್ ಕ್ಷೇತ್ರದಿಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು 33,474 ಮತಗಳನ್ನು ಗಳಿಸಿದರು, ಬಿಜೆಪಿ ಅಭ್ಯರ್ಥಿ ಮೋಹನ್ ಸಿಂಗ್ ಮತ್ತು AAP ಅಭ್ಯರ್ಥಿ ಅದೀಲ್ ಅಹ್ಮದ್ ಅವರಿಗಿಂತ ಹಿಂದಿದ್ದರು. ಅವರು ಬಂಧನದಲ್ಲಿದ್ದಾಗಿನಿಂದ, ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅನೇಕ ಜಾಮೀನು ಮತ್ತು ಪೆರೋಲ್ ವಿನಂತಿಗಳನ್ನು ಮಾಡಲಾಯಿತು. ವರದಿಗಳ ಪ್ರಕಾರ, ಹುಸೇನ್ ಅವರಿಗೆ 29 ಜನವರಿ 2025 ರಿಂದ 03 ಫೆಬ್ರವರಿ 2025 ರವರೆಗೆ ಪ್ರತಿದಿನ 12 ಗಂಟೆಗಳ ಕಾಲ (ಇಲ್ಲಿ ಮತ್ತು ಇಲ್ಲಿ) ಆರು ದಿನಗಳ ಕಸ್ಟಡಿಯಲ್ ಪೆರೋಲ್ ನೀಡಲಾಯಿತು. ದೆಹಲಿ ಚುನಾವಣಾ ಫಲಿತಾಂಶಗಳನ್ನು ಫೆಬ್ರವರಿ 08 ರಂದು ಘೋಷಿಸಲಾಯಿತು.  ಅವರ ಜಾಮೀನು ಅವಧಿ ಫೆಬ್ರವರಿ 03, 2025 ರಂದು ಕೊನೆಗೊಂಡಿತು ಎಂದು ವರದಿಗಳು (ಇಲ್ಲಿ ಮತ್ತು ಇಲ್ಲಿ) ದೃಢಪಡಿಸುತ್ತವೆ. ಚುನಾವಣಾ ಫಲಿತಾಂಶಗಳ ನಂತರ ಯಾವುದೇ ರಾಲಿ ನಡೆಯಲು ಸಾಧ್ಯವಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.

ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ.  ಅದು ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ಒಂದು ದಿನ ಮೊದಲು, ಫೆಬ್ರವರಿ 07, 2025 ರಂದು X ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಅಕೌಂಟ್ ಓನರ್ ಕ್ಯಾಪ್ಶನ್ ನಲ್ಲಿ ಜನರನ್ನು ತನಗೆ ಮತ ಹಾಕುವಂತೆ ಒತ್ತಾಯಿಸುತ್ತಿದ್ದರು, ನಿರ್ದಿಷ್ಟವಾಗಿ ಮುಸ್ತಾಬಾದ್ ಮತ್ತು ಓಖ್ಲಾ ಸ್ಥಾನಗಳನ್ನು ಉಲ್ಲೇಖಿಸುತ್ತಿದ್ದರು.

ಹೆಚ್ಚಿನ ಸಂಶೋಧನೆಯು ನಮಗೆ ಇದೇ ರೀತಿಯ ಹಲವಾರು ವೀಡಿಯೊಗಳನ್ನು ಹುಡುಕಲು ಕಾರಣವಾಯಿತು. ಅವುಗಳಲ್ಲಿ ಹಲವು ತಾಹಿರ್ ಹುಸೇನ್ ಅವರ ಫೇಸ್‌ಬುಕ್ ಪೇಜ್ ನಲ್ಲಿ ಅಪ್‌ಲೋಡ್ ಆಗಿದ್ದವು. ಅವರು ಫೆಬ್ರವರಿ 03 ರಂದು, ಚುನಾವಣೆಗೆ ಎರಡು ದಿನಗಳ ಮೊದಲು ತಮ್ಮ ರೋಡ್‌ಶೋ ರಾಲಿಯ ಫೋಟೋಗಳು ಮತ್ತು ವೀಡಿಯೊಗಳನ್ನು (ಇಲ್ಲಿ ಮತ್ತು ಇಲ್ಲಿ) ಪೋಸ್ಟ್ ಮಾಡಿದ್ದರು. ಹೆಚ್ಚುವರಿಯಾಗಿ, AIMIM ದೆಹಲಿ ಅಧ್ಯಕ್ಷ ಶೋಯೆಬ್ ಜಮಾಲ್ ಸಹ ಅದೇ ಡೇಟ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ, ಭಾರತೀಯ ಸೈಫಿ ಸಮಾಜ ಯುವ (ಕಮ್ರುದ್ದೀನ್ ಸೈಫಿ) ಫೆಬ್ರವರಿ 03, 2025 ರಂದು ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೊವನ್ನು ಸ್ಟ್ರೀಮ್ ಮಾಡಿದರು, ಇದು ವೈರಲ್ ವೀಡಿಯೊಗೆ ಹಲವಾರು ಹೋಲಿಕೆಗಳನ್ನು ತೋರಿಸಿದೆ.

ವೈರಲ್ ವೀಡಿಯೊದಲ್ಲಿರುವ ಜನರ ಮತ್ತು ತಾಹಿರ್ ಹುಸೇನ್ ಅವರ ಚುನಾವಣಾ ಪ್ರಚಾರ ರೋಡ್‌ಶೋಗೆ ಸಂಬಂಧಿಸಿದಂತೆ ಅವರ ಅಕೌಂಟ್ ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದ ಪಕ್ಕಪಕ್ಕದ ಹೋಲಿಕೆಯು ಎರಡೂ ವೀಡಿಯೊಗಳು ಒಂದೇ ಘಟನೆಯದ್ದು ಎಂದು ಖಚಿತಪಡಿಸುತ್ತದೆ.

ಹೆಚ್ಚಿನ ಸಂಶೋಧನೆಯು ತಾಹಿರ್ ಹುಸೇನ್ ಅವರ ರೋಡ್ ಶೋ ಕುರಿತು ಎಬಿಪಿ ಲೈವ್ ವರದಿಯನ್ನು ನಮಗೆ ನೀಡಿತು. ವರದಿಯ ಪ್ರಕಾರ, 2025 ರ ದೆಹಲಿ ವಿಧಾನಸಭಾ ಚುನಾವಣೆಗೆ ಕಸ್ಟಡಿ ಪೆರೋಲ್‌ನ ಕೊನೆಯ ದಿನದಂದು ಎಐಎಂಐಎಂ ಅಭ್ಯರ್ಥಿ ತಾಹಿರ್ ಹುಸೇನ್ ಮುಸ್ತಫಾಬಾದ್‌ನಲ್ಲಿ ರೋಡ್ ಶೋ ನಡೆಸಿದ್ದರು. ಈ ಕಾರ್ಯಕ್ರಮದ ಸಮಯದಲ್ಲಿ, ಅವರು ತಮ್ಮ ಜೈಲು ಶಿಕ್ಷೆಯ ಬಗ್ಗೆ ಭಾವುಕರಾಗಿದ್ದರು ಮತ್ತು ಎಎಪಿ ಮುಸ್ಲಿಂ ಮತದಾರರನ್ನು ನಿರ್ಲಕ್ಷಿಸಿದ್ದಕ್ಕಾಗಿ ಟೀಕಿಸಿದರು. ನ್ಯಾಯಕ್ಕಾಗಿ ಹೋರಾಡುವ ಸ್ಥಳೀಯ ಅಭ್ಯರ್ಥಿಯಾಗಿ ತಮ್ಮನ್ನು ತಾವು ಇರಿಸಿಕೊಂಡ ಅವರು, ಚುನಾವಣೆಯ ನಂತರ ತಮ್ಮನ್ನು ಬಿಡುಗಡೆ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದರು ಮತ್ತು ಅನುಭವಿಸಿದ ಅನ್ಯಾಯದ ವಿರುದ್ಧ ತಮ್ಮನ್ನು ಬೆಂಬಲಿಸುವಂತೆ ಮತದಾರರನ್ನು ಒತ್ತಾಯಿಸಿದರು.

ಹೆಚ್ಚುವರಿಯಾಗಿ, ಹಲವಾರು ವರದಿಗಳು (ಇಲ್ಲಿ ಮತ್ತು ಇಲ್ಲಿ) ಅವರ ಜಾಮೀನು ಅವಧಿ ಫೆಬ್ರವರಿ 03, 2025 ರಂದು ಕೊನೆಗೊಂಡಿತು ಎಂದು ದೃಢಪಡಿಸುತ್ತವೆ. ಇದು ಚುನಾವಣಾ ಫಲಿತಾಂಶಗಳ ಬಂದ ನಂತರ ಯಾವುದೇ ಮೆರವಣಿಗೆ ಅಥವಾ ರಾಲಿ ನಡೆದಿರಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.

ಕೊನೆಯದಾಗಿ ಹೇಳುವುದಾದರೆ, AIMIM ಮುಸ್ತಾಬಾದ್ ಅಭ್ಯರ್ಥಿ ತಾಹಿರ್ ಹುಸೇನ್ ಅವರ ಚುನಾವಣಾ ರೋಡ್‌ಶೋ ರಾಲಿಯನ್ನು ಚುನಾವಣೆಯಲ್ಲಿ ಅವರ ಸೋಲಿನ ನಂತರ ನಡೆದ ಮೆರವಣಿಗೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll