Fake News - Kannada
 

ಬಳಕೆದಾರರು ತಮ್ಮ ಉಪನಾಮವನ್ನು ತಿಳಿಸದೆ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು IRCTC ಸೂಚಿಸಿದೆ

0

IRCTCಯ  ಹೊಸ ಬುಕಿಂಗ್ ನಿಯಮದ ಬಗ್ಗೆ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳು ಹರಿದಾಡುತ್ತಿದ್ದು, ವೈರಲ್  ನಿಯಮದ ಪ್ರಕಾರ, ಒಬ್ಬ ವ್ಯಕ್ತಿ  IRCTCಯ ವೈಯಕ್ತಿಕ ಖಾತೆಯನ್ನು ಬಳಸಿಕೊಂಡು ಒಬ್ಬ ವ್ಯಕ್ತಿ ತನ್ನ ಸಂಬಂಧಿಗಳಿಗೆ ಮತ್ತು ಅದೇ ಹೆಸರಿರುವ ಬೇರೆ ವ್ಯಕ್ತಿಗಳಿಗೆ ಟಿಕೆಟ್ ಬುಕ್ ಮಾಡಬಹುದಷ್ಟೇ ಹೊರತು, ತನ್ನ ಸ್ನೇಹಿತರು ಅಥವಾ ಹೊರಗಿನವರಿಗೆ ಟಿಕೆಟ್‌ಗಳನ್ನು ಬುಕ್ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ 10,000 ರೂ.ಗಳ ದಂಡ, 3 ವರ್ಷ ಜೈಲು ಶಿಕ್ಷೆ ಅಥವಾ ಎರಡಕ್ಕೂ ಕಾರಣವಾಗಬಹುದು ಎಂದು ಇಲ್ಲಿ ತಿಳಿಸಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: IRCTCಯ ಹೊಸ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ತನ್ನ  IRCTCಯ ವೈಯಕ್ತಿಕ ಖಾತೆಯನ್ನು ಬಳಸಿಕೊಂಡು ರಕ್ತ ಸಂಬಂಧಿಗಳಿಗೆ ಅಥವಾ ಅದೇ ಹೆಸರಿನವರಿಗೆ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಫ್ಯಾಕ್ಟ್: ಆದರೆ ಮಾನ್ಯತೆ ಪಡೆದ  IRCTCಯ  ಖಾತೆಯ ಮೂಲಕ ಬುಕಿಂಗ್ ಮಾಡುವ ಬಳಕೆದಾರರು ತಮ್ಮ ಹೆಸರನ್ನು  ಪರಿಗಣಿಸದೆ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗಿದೆ ಎಂದು IRCTC ಸ್ಪಷ್ಟಪಡಿಸಿದೆ. ಇದಲ್ಲದೆ, ವೈಯಕ್ತಿಕ ಬಳಕೆದಾರ ಐಡಿಯನ್ನು ಬಳಸಿ ಬುಕ್ ಮಾಡಿದ ಟಿಕೆಟ್‌ಗಳು ವೈಯಕ್ತಿಕ ಬಳಕೆಗೆ ಮಾತ್ರ ಉಪಯೋಗಿಸಹುದು  ಯಾವುದೇ ಲಾಭಕ್ಕಾಗಿ ಮಾರಾಟ ಮಾಡುವಂತಿಲ್ಲ ಎಂದು ಎಚ್ಚರಿಸಿದೆ. ಆದ್ದರಿಂದ, ಈಮೂಲಕ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.

IRCTC ಯಾವುದೇ ಕ್ರಮಕೈಕೊಂಡರು ಅದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ ಮಾಧ್ಯಮ  ಸಂಸ್ಥೆಗಳಿಂದ ವರದಿ ಮಾಡುತ್ತಾರೆ. ಆದಾಗ್ಯೂ, ವೈರಲ್ ಪೋಸ್ಟ್‌ನಲ್ಲಿ ಕ್ಲೈಮ್ ಮಾಡಿರುವಂತೆ ನಾವು ಪರಿಶೀಲಿಸಿದಾಗ ನಮಗೆ ಯಾವುದೇ ಹೊಸ ಕ್ರಮ ಕೈಕೊಂಡಿರುವುದು ತಿಳಿದುಬಂದಿಲ್ಲ.

ಇಷ್ಟೇಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ವದಂತಿಯಲ್ಲಿ ಇದು 1989ರ ಸೆಕ್ಷನ್ 143ಗೆ ಭಾರತೀಯ ರೈಲ್ವೆ ಕಾಯಿದೆಗೆ ಕಾರಣವೆಂದು ಹೇಳಲಾಗಿದೆ. ಹಾಗಾಗಿ ಈ ಕಾಯ್ದೆಯ ಅಡಿಯಲ್ಲಿ ರೈಲ್ವೇ ಟಿಕೆಟ್‌ಗಳನ್ನು ಸಂಗ್ರಹಿಸುವ ಮತ್ತು ನೀಡುವ ಅನಧಿಕೃತ ವ್ಯವಹಾರಕ್ಕೆ ಸಂಬಂಧಿಸಿದಾಗಿದೆ. ಇದರ ಪ್ರಕಾರ ರೈಲ್ವೇ ನೌಕರರು ಅಥವಾ ಅಧಿಕೃತ ಏಜೆಂಟ್ಗಲ್ಲದೆ ಬೇರೆ ಯಾವುದೇ ವ್ಯಕ್ತಿಗೂ ರೈಲ್ವೇ ಟಿಕೆಟ್‌ಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಅಧಿಕಾರವಿಲ್ಲ. ಒಂದು ವೇಳೆ ಮಾಡಿದರೆ ಅಂತಹವರಿಗೆ ಮೂರು ವರುಷಗಳ ಜೈಲು ಶಿಕ್ಷೆ ಇಲ್ಲವೇ 10,000 ವರೆಗೆ ದಂಡ ವಿಧಿಸಲಾಗುತ್ತದೆ.

ಟಿಕೆಟ್ ಖರೀದಿಸಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿರುವವರಿಗೆ ವಿಧಿಸುವ ಈ  ಶಿಕ್ಷಾ ನಿಯಮವನ್ನುಕುಟುಂಬ ಸದಸ್ಯರಿಗೆ ಮಾತ್ರ ಟಿಕೆಟ್ ಕಾಯ್ದಿರಿಸಬಹುದು ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅಲ್ಲದೆ, ಇಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ಗಳನ್ನು ಬುಕ್ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಎಲ್ಲಿಗೂ ಹೇಳಿಕೊಂಡಿಲ್ಲ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆದ್ದುಕೊಂಡ IRCTC,  ತನ್ನ ಖಾತೆಯ ಮೂಲಕ ಬುಕಿಂಗ್ ಮಾಡುವ ಬಳಕೆದಾರರು ತಮ್ಮ ಹೆಸರನ್ನು ನೀಡದೆ  ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದೆ. ಇದಲ್ಲದೆ, ತಿಂಗಳಿಗೆ ಹೆಚ್ಚೆಂದರೆ 12 ಟಿಕೆಟ್‌ಗಳನ್ನು ತನ್ನ ಯೂಸೆರ್ಸ್ ಬುಕ್ ಮಾಡಬಹುದು, ಆದರೆ IRCTC ಅಕೌಂಟ್ ನಿಂದ ಆಧಾರ್ ಲಿಂಕ್ ಮಾಡಿದ ಯೂಸೆರ್ಸ್ ತಿಂಗಳಿಗೆ 24 ಟಿಕೆಟ್‌ಗಳನ್ನು ಹಾಗೂ ಪ್ರತಿ ಟಿಕೆಟ್ ನಲ್ಲಿ ಕಮ್ಮಿ ಎಂದರೂ ಒಬ್ಬರ ಆಧಾರ್ ಲಿಂಕ್ ಇರಬೇಕೆಂದು ತಿಳಿಸಿದೆ.

ಪರ್ಸನಲ್ ಯೂಸರ್  ಐಡಿಗಳನ್ನು ಬಳಸಿ ಬುಕ್ ಮಾಡಲಾದ ಟಿಕೆಟ್‌ಗಳು ಪರ್ಸನಲ್ ಬಳಕೆಗೆ ಮಾತ್ರವಾಗಿದ್ದು, ಅದನ್ನು ಯಾವುದೇ ರೀತಿಯ ಲಾಭಕ್ಕಾಗಿ ಮಾರಾಟಮಾಡುವಂತಿಲ್ಲ ಎಂಬುದು ಗಮನಿಸಬೇಕಾದ ಅಂಶ. ಈ ಟಿಕೆಟ್‌ಗಳನ್ನುಕಮರ್ಷಿಯಲ್ ವಿಚಾರಗಳಿಗಾಗಿ ಮಾರಾಟ ಮಾಡುವುದು ಕಾನೂನುಬಾಹಿರ  ಮತ್ತು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವಾಗಿದೆ. ಇನ್ನು ಸ್ಪಷ್ಟವಾಗಿ ಹೇಳಬೇಕಾದರೆ, IRCTC ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿಯ ಪ್ರಕಾರ  ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.

ಕೊನೆಯದಾಗಿ ಹೇಳುವುದಾದರೆ, IRCTC ಬಳಕೆದಾರರು ತಮ್ಮ ಹೆಸರನ್ನು ಬಳಸದೆ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು  ಸ್ಪಷ್ಟಪಡಿಸಿದೆ.

Share.

Comments are closed.

scroll