Fake News - Kannada
 

ಭಾರತದ ಓಟಗಾರ್ತಿ ಹಿಮಾ ದಾಸ್ ಮಿಲ್ಕಾ ಸಿಂಗ್ ಅವರ ದಾಖಲೆಯನ್ನು ಮುರಿದಿಲ್ಲ

0

ಭಾರತದ ಸ್ಪ್ರಿಂಟರ್ ಹಿಮಾ ದಾಸ್ ಇತ್ತೀಚೆಗೆ ಭಾರತದ ಅಪ್ರತಿಮ ಓಟಗಾರ ಮಿಲ್ಕಾ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳುವ ಪೋಸ್ಟ್‍ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಿಮಾ ದಾಸ್ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಅವರ ಸಾಧನೆಯನ್ನು ಎಲ್ಲಾ ಮಾಧ್ಯಮ ಸುದ್ದಿ ವಾಹಿನಿಗಳು ನಿರ್ಲಕ್ಷಿಸಿವೆ ಎಂದು ಪ್ರತಿಪಾದಿಸಿ ಪೋಸ್ಟ್‍ಅನ್ನು ಹಂಚಿಕೊಳ್ಳಲಾಗಿದೆ.

ಪ್ರತಿಪಾದನೆ : ಭಾರತದ ಓಟಗಾರ್ತಿ ಹಿಮಾ ದಾಸ್ ಮಿಲ್ಕಾ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.

ನಿಜಾಂಶ : ಭಾರತದ ಓಟಗಾರ್ತಿ ಹಿಮಾ ದಾಸ್ CWG 2022 ರಲ್ಲಿ ಮಹಿಳೆಯರ 200m ಓಟ ಮತ್ತು 4x100m ರಿಲೇಯಲ್ಲಿ ಭಾಗವಹಿಸಿದರು. ಹಿಮಾ ದಾಸ್ ಮಹಿಳೆಯರ 200m ಫೈನಲ್‌ಗೆ 0.02 ಸೆಕೆಂಡ್‌ನಿಂದ ಅರ್ಹತೆ ಕಳೆದುಕೊಂಡರು ಮತ್ತು ಭಾರತದ ಮಹಿಳೆಯರ 4x100m ರಿಲೇ ತಂಡವು 5ನೇ ಸ್ಥಾನದೊಂದಿಗೆ ಮುಕ್ತಾಯವಾಯಿತು. ಸದ್ಯಕ್ಕೆ, ಮಿಲ್ಕಾ ಸಿಂಗ್ ಅವರ ಯಾವುದೇ ದಾಖಲೆಗಳನ್ನು ಹಿಮಾ ದಾಸ್ ಮುರಿದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದೆ ತಪ್ಪಾಗಿದೆ.

ಭಾರತೀಯ ಓಟಗಾರ್ತಿ ಹಿಮಾ ದಾಸ್ ಅವರು ಮಿಲ್ಕಾ ಸಿಂಗ್ ಅವರ ಯಾವುದೇ ಅಥ್ಲೆಟಿಕ್ ದಾಖಲೆಗಳನ್ನು ಮುರಿದಿದ್ದಾರೆಯೇ ಎಂದು ಪರಿಶೀಲಿಸಲು ಹುಡುಕಿದಾಗ, ಇದನ್ನು ಖಚಿತಪಡಿಸುವ ಯಾವುದೇ ವರದಿಗಳು ನಮಗೆ ಲಭ್ಯವಾಗಿಲ್ಲ. ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ನಾವು ‘Olympics.com’ ವೆಬ್‌ಸೈಟ್‌ನಲ್ಲಿ ಮಿಲ್ಕಾ ಸಿಂಗ್ ಮತ್ತು ಹಿಮಾ ದಾಸ್ ಅವರ ವೈಯಕ್ತಿಕ ಅತ್ಯುತ್ತಮ ಅಥ್ಲೆಟಿಕ್ ದಾಖಲೆಗಳನ್ನು ಕಂಡುಕೊಂಡಿದ್ದೇವೆ. ‘Olympics.com’ ವೆಬ್‌ಸೈಟ್‌ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಹಿಮಾ ದಾಸ್‌ಗೆ ಹೋಲಿಸಿದರೆ ಮಿಲ್ಕಾ ಸಿಂಗ್ ಇನ್ನೂ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಮಿಲ್ಕಾ ಸಿಂಗ್ ಅವರು 200 ಮೀಟರ್ ಓಟವನ್ನು 20.7 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ದಾಖಲೆಯನ್ನು ಹೊಂದಿದ್ದಾರೆ, ಆದರೆ ಹಿಮಾ ದಾಸ್ 200 ಮೀಟರ್‌ನಲ್ಲಿ 22.88 ಸೆಕೆಂಡುಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹಿಮಾ ದಾಸ್‌ಗೆ ಹೋಲಿಸಿದರೆ ಮಿಲ್ಕಾ ಸಿಂಗ್ ಇನ್ನೂ 400 ಮೀಟರ್ ಓಟ ಮತ್ತು 4×400 ಮೀ ರಿಲೇಯಲ್ಲಿ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ.

CWG 2022 ರಲ್ಲಿ ನಡೆದ ಮಹಿಳೆಯರ 200m ಓಟ ಮತ್ತು 4x100m ರಿಲೇಯಲ್ಲಿ ಭಾರತದ ಓಟಗಾರ್ತಿ ಹಿಮಾ ದಾಸ್ ಭಾಗವಹಿಸಿದರು. ಹಿಮಾ ದಾಸ್ ಮಹಿಳೆಯರ 200m ಫೈನಲ್‌ಗೆ 0.02 ಸೆಕೆಂಡ್‌ನಿಂದ ಅರ್ಹತೆಯನ್ನು ಕಳೆದುಕೊಂಡರು ಮತ್ತು ಭಾರತವು ಮಹಿಳೆಯರ 4x100m ರಿಲೇಯಲ್ಲಿ ಐದನೇ ಸ್ಥಾನವನ್ನು ಗಳಿಸಿತು. CWG 2022 ಸೆಮಿಫೈನಲ್‌ನಲ್ಲಿ, ಹಿಮಾ ದಾಸ್ 200 ಮೀ ಓಟವನ್ನು 23.42 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ಭಾರತದ ಅಥ್ಲೀಟ್ ಪರಮ್‌ಜಿತ್ ಸಿಂಗ್ ಅವರು ಮಿಲ್ಕಾ ಸಿಂಗ್ ಅವರ 400 ಮೀಟರ್ ರಾಷ್ಟ್ರೀಯ ದಾಖಲೆಯನ್ನು 1998 ರಲ್ಲಿ ಮುರಿದಿದ್ದರು, ಮಿಲ್ಖಾ ಅವರು ರೋಮ್ ಒಲಿಂಪಿಕ್ಸ್‌ನಲ್ಲಿ ಅದನ್ನು ಸ್ಥಾಪಿಸಿದ 38 ವರ್ಷಗಳ ನಂತರ. ಮಿಲ್ಕಾ ಸಿಂಗ್ ಅವರ ಕೈ-ಸಮಯದ 45.6 ಸೆಕೆಂಡುಗಳ ದಾಖಲೆಯನ್ನು ಎಲೆಕ್ಟ್ರಾನಿಕ್ ಟೈಮಿಂಗ್‌ನಲ್ಲಿ 45.74 ಸೆಕೆಂಡುಗಳಿಗೆ ಪರಿವರ್ತಿಸಲಾಯಿತು, ಇದನ್ನು ಪರಮ್‌ಜಿತ್ 1998 ರಲ್ಲಿ 45.70 ಸೆಕೆಂಡುಗಳಲ್ಲಿ ಓಡುವ ಮೂಲಕ ಉತ್ತಮಗೊಳಿಸಿದರು.

ಈ ಹಿಂದೆ, IAAF ವಿಶ್ವ U20 ಚಾಂಪಿಯನ್‌ಶಿಪ್ ಟಂಪೆರೆ 2018 ರಲ್ಲಿ ಹಿಮಾ ದಾಸ್ 400m ಓಟವನ್ನು ಗೆದ್ದ ವೀಡಿಯೊವು CWG 2022 ರಲ್ಲಿ ಚಿನ್ನ ಗೆದ್ದ ವೀಡಿಯೊವಾಗಿ ವೈರಲ್ ಆಗಿದ್ದು, ವಾಸ್ತವವಾಗಿ ಈ ಪ್ರತಿಪಾದನೆಯನ್ನು ತಳ್ಳಿಹಾಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಅಪ್ರತಿಮ ಓಟಗಾರ ಮಿಲ್ಕಾ ಸಿಂಗ್ ಅವರ ಯಾವುದೇ ದಾಖಲೆಗಳನ್ನು ಹಿಮಾ ದಾಸ್ ಮುರಿದಿಲ್ಲ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll