Fake News - Kannada
 

ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ರೈಲು ಟಿಕೆಟ್ ದರದಲ್ಲಿ ರಿಯಾಯಿತಿಗಳನ್ನು ಪುನಃಸ್ಥಾಪಿಸಿಲ್ಲ

0

ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ರೈಲು ಟಿಕೆಟ್ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡುವ ಹೊಸ ನೀತಿಯನ್ನು ಘೋಷಿಸಿದೆ ಎಂದು ಹೇಳುವ  ಪೋಷ್ಟೊಂದು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ರೈಲು ಟಿಕೆಟ್‌ಗಳಲ್ಲಿ 50% ರಿಯಾಯಿತಿ ನೀಡುವ ಹೊಸ ನೀತಿಯನ್ನು ಪ್ರಕಟಿಸಿದೆ.

ಪೋಸ್ಟ್: ಈ ಹೇಳಿಕೆ ಸುಳ್ಳು. ಕೋವಿಡ್-19 ಕ್ರಮಗಳ ಭಾಗವಾಗಿ ಭಾರತೀಯ ರೈಲ್ವೆ ಮಾರ್ಚ್ 2020 ರಲ್ಲಿ ಹಿರಿಯ ನಾಗರಿಕರ ರಿಯಾಯಿತಿಗಳನ್ನು ರದ್ದುಗೊಳಿಸಿತ್ತು. ಆರ್ಥಿಕ ನಿರ್ಬಂಧಗಳಿಂದಾಗಿ ಈ ರಿಯಾಯಿತಿಗಳನ್ನು ಪುನಃಸ್ಥಾಪಿಸುವ ಯಾವುದೇ ಯೋಜನೆಗಳಿಲ್ಲ ಎಂದು ಸರ್ಕಾರ ಪದೇ ಪದೇ ಸ್ಪಷ್ಟಪಡಿಸಿದೆ. ಐಆರ್‌ಸಿಟಿಸಿ ಪೋರ್ಟಲ್ ಸಹ ಹಿರಿಯ ನಾಗರಿಕರಿಗೆ ಸಾಮಾನ್ಯ ಪ್ರಯಾಣಿಕರಂತೆಯೇ ಅದೇ ದರವನ್ನು ವಿಧಿಸುತ್ತದೆ ಎಂದು ತಿಳಿಸಿದೆ. ಹೆಚ್ಚುವರಿಯಾಗಿ, 2025-26 ರ ಕೇಂದ್ರ ಬಜೆಟ್‌ನಲ್ಲಿ ಈ ರಿಯಾಯಿತಿಗಳನ್ನು ಪುನಃಸ್ಥಾಪಿಸುವ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ಸುಳ್ಳು.

ರೈಲ್ವೆ ಸಚಿವಾಲಯ (ಆರ್ಕೈವ್) ಪ್ರಕಾರ, COVID-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ, ಕೇಂದ್ರ ಸರ್ಕಾರವು ಮಾರ್ಚ್ 2020 ರಲ್ಲಿ ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಸೇರಿದಂತೆ ಹಲವಾರು ರಿಯಾಯಿತಿಗಳನ್ನು ಹಿಂತೆಗೆದಿದೆ. ಇದಕ್ಕೂ ಮೊದಲು, ರೈಲ್ವೆ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಟಿಕೆಟ್ ದರದಲ್ಲಿ 50% ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ 40% ರಿಯಾಯಿತಿಯನ್ನು ನೀಡಿತ್ತು. ಆದರೆ, ಈ ರಿಯಾಯಿತಿಯನ್ನು ಪುನಃಸ್ಥಾಪಿಸುವುದಾಗಿ ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಿಸಿಲ್ಲ. IRCTC ಪೋರ್ಟಲ್ ಸಹ ಹಿರಿಯ ನಾಗರಿಕರಿಗೆ ಟಿಕೆಟ್ ಬೆಲೆಗಳು ಸಾಮಾನ್ಯ ವರ್ಗದ ಪ್ರಯಾಣಿಕರಂತೆಯೇ ಇರುತ್ತವೆ ಎಂದು ತಿಳಿಸಿದೆ. 

A close up of a document  AI-generated content may be incorrect.

ಹಿರಿಯ ನಾಗರಿಕರಿಗೆ ರಿಯಾಯಿತಿಗಳನ್ನು ಮತ್ತೆ ಪರಿಚಯಿಸುವ ಯಾವುದೇ ಯೋಜನೆಗಳಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಪದೇ ಪದೇ ಸ್ಪಷ್ಟಪಡಿಸಿದ್ದಾರೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಮಾತನ್ನು 2022 ರಲ್ಲಿಯೂ ಹೇಳಿದ್ದಾರೆ. ಕಡಿಮೆ ಟಿಕೆಟ್ ಬೆಲೆಗಳಿಂದಾಗಿ ಭಾರತ ಸರ್ಕಾರವು ಈಗಾಗಲೇ ಪ್ರಯಾಣ ವೆಚ್ಚದ ಸರಿಸುಮಾರು 50% ರಷ್ಟು ಸಬ್ಸಿಡಿ ನೀಡುತ್ತಿದೆ. ಅಂಗವಿಕಲರು, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಮಾರ್ಚ್ 2022 ರಲ್ಲಿ, ಸಾಂಕ್ರಾಮಿಕ ರೋಗದ ನಂತರ ಒಟ್ಟು ಪ್ರಯಾಣಿಕರ ಆದಾಯದಲ್ಲಿನ ಕುಸಿತದಿಂದ ಉಂಟಾದ ಗಮನಾರ್ಹ ಆರ್ಥಿಕ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಗರಿಕರಿಗೆ ಈ ರಿಯಾಯಿತಿಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಏಪ್ರಿಲ್ 2023 ರಲ್ಲಿ, ಹಿರಿಯ ನಾಗರಿಕರ ರಿಯಾಯಿತಿಗಳನ್ನು ಮತ್ತೆ ಪರಿಚಯಿಸುವ ವಿಷಯವನ್ನು ಸುಪ್ರೀಂ ಕೋರ್ಟ್ ಮುಂದೆ ತಂದಾಗ, ನ್ಯಾಯಾಲಯವು ಮಧ್ಯಪ್ರವೇಶಿಸಲು ನಿರಾಕರಿಸಿತು. ಈ ನಿರ್ಧಾರವು ಹಿರಿಯ ನಾಗರಿಕರ ಅಗತ್ಯತೆಗಳು ಮತ್ತು ರೈಲ್ವೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಆಧರಿಸಿರಬೇಕು ಎಂದು ಹೇಳಿತ್ತು.

A screenshot of a website  AI-generated content may be incorrect.

ಇದಲ್ಲದೆ, ಡಿಸೆಂಬರ್ 2024 ರಲ್ಲಿ, ಲೋಕಸಭೆಯಲ್ಲಿ ಇದೇ ವಿಷಯವನ್ನು ಹೇಳಿದಾಗ, ಭಾರತ ಸರ್ಕಾರವು ಎಲ್ಲಾ ವರ್ಗದ ಪ್ರಯಾಣಿಕರಿಗೆ (ಹಿರಿಯ ನಾಗರಿಕರು ಸೇರಿದಂತೆ) ಒದಗಿಸುವ ಒಟ್ಟು ಸಬ್ಸಿಡಿ ಪ್ರಸ್ತುತ ₹56,993 ಕೋಟಿಗಳಷ್ಟಿದೆ. ಹೆಚ್ಚುವರಿಯಾಗಿ, 2025-26 ರ ಕೇಂದ್ರ ಬಜೆಟ್ ಹಿರಿಯ ನಾಗರಿಕರಿಗೆ ರೈಲು ದರಗಳಲ್ಲಿ ರಿಯಾಯಿತಿಗಳನ್ನು ಮರುಸ್ಥಾಪಿಸುವ ಯಾವುದೇ ಯೋಜನೆಯನ್ನು ಉಲ್ಲೇಖಿಸಿಲ್ಲ ವೈಷ್ಣವ್ ಪ್ರತಿಕ್ರಿಯಿಸಿದ್ದರು

A document with text on it  AI-generated content may be incorrect.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ಸರ್ಕಾರವು ಹಿರಿಯ ನಾಗರಿಕರಿಗೆ ರೈಲು ದರದಲ್ಲಿ ರಿಯಾಯಿತಿಗಳನ್ನು ಪುನಃಸ್ಥಾಪಿಸಿದೆ ಎಂಬ ಕ್ಲೇಮ್ ಸುಳ್ಳು.

Share.

Comments are closed.

scroll