Fake News - Kannada
 

ದೂರದರ್ಶಕ ಆವಿಷ್ಕಾರಕ್ಕೂ ಮೊದಲೆ ಹಿಂದೂಗಳು ನವಗ್ರಹಗಳನ್ನು ಬರಿಗಣ್ಣಿನಿಂದ ನೋಡಿ ಪೂಜಿಸಿದ್ದರು ಎಂಬುದು ದಿಕ್ಕುತಪ್ಪಿಸುವ ಹೇಳಿಕೆ

0

ಗೆಲಿಲಿಯೋ 1609 ರಲ್ಲಿ ದೂರದರ್ಶಕವನ್ನು ಕಂಡುಹಿಡಿದ ನಂತರ ಗ್ರಹಗಳ ಬಗ್ಗೆ ತಿಳಿದುಕೊಂಡಿದ್ದರು. ಆದರೆ ನವಗ್ರಹಗಳ ಬಗ್ಗೆ ಹಿಂದೂಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು, ಇದು ಹೇಗೆ ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಪ್ರತಿಪಾದನೆ ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಎಷ್ಟು ಸತ್ಯವಿದೆ ಎಂದು ನೋಡೋಣ.

ಪ್ರತಿಪಾದನೆ : ದೂರದರ್ಶಕದ ಆವಿಷ್ಕಾರಕ್ಕೂ ಮೊದಲೆ ಹಿಂದೂಗಳು ನವಗ್ರಹಗಳ ಬಗ್ಗೆ ಮಾತನಾಡುತ್ತಿದ್ದರು.

ನಿಜಾಂಶ : ದೂರದರ್ಶಕವನ್ನು ಕಂಡುಹಿಡಿಯುವ ಮೊದಲೇ ಹಿಂದೂಗಳು ನವಗ್ರಹಗಳ ಬಗ್ಗೆ ಹೇಳಿದ್ದು ಸತ್ಯ. ಆದಾಗ್ಯೂ, ಹಿಂದೂ ನವಗ್ರಹಗಳು ಮತ್ತು ಆಧುನಿಕ ವಿಜ್ಞಾನಿಗಳು ಪರಿಗಣಿಸುವ ಗ್ರಹಗಳ ಪಟ್ಟಿಯಲ್ಲಿ ವ್ಯತ್ಯಾಸಗಳಿವೆ. ಉದಾಹರಣೆಗೆ, ಹಿಂದೂಗಳ ನವಗ್ರಹಗಳು ಸೂರ್ಯನನ್ನು ಒಳಗೊಂಡಿವೆ, ಆದರೆ ಆಧುನಿಕ ವಿಜ್ಞಾನಿಗಳು ಸೂರ್ಯನನ್ನು ನಕ್ಷತ್ರವೆಂದು ಪರಿಗಣಿಸುತ್ತಾರೆ ಮತ್ತು ಗ್ರಹವೆಂದು ಪರಿಗಣಿಸುವುದಿಲ್ಲ. ಇದಲ್ಲದೆ, ಹಿಂದೂಗಳು ನವಗ್ರಹಗಳನ್ನು ಪರಿಗಣಿಸುವದನ್ನು ದೂರದರ್ಶಕದ ಸಹಾಯವಿಲ್ಲದೆ ವಿವಿಧ ಸಂದರ್ಭಗಳಲ್ಲಿ ಬರಿಗಣ್ಣಿನಿಂದ ನೋಡಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ದಿಕ್ಕು ತಪ್ಪಿಸುವಂತಿದೆ.

ಪೋಸ್ಟ್‌ನಲ್ಲಿ ಉಲ್ಲೇಖಿಸಿರುವುದನ್ನು ಅಂತರ್ಜಾಲದಲ್ಲಿ ಹುಡುಕಿದಾಗ, ದೂರದರ್ಶಕವನ್ನು ಕಂಡುಹಿಡಿಯುವ ಹಲವಾರು ವರ್ಷಗಳ ಹಿಂದೆ ಹಿಂದೂಗಳು ನವಗ್ರಹಗಳ ಬಗ್ಗೆ ಹೇಳಿದ್ದು ನಿಜ. ನವಗ್ರಹಗಳ ಹೆಸರುಗಳನ್ನು ಇಲ್ಲಿ ಓದಬಹುದು – ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು. ಆದರೂ, ಹಿಂದೂಗಳು ಹೇಳುವ ನವಗ್ರಹಗಳಿಗೂ ಮತ್ತು ಆಧುನಿಕ ವಿಜ್ಞಾನಿಗಳು ಪರಿಗಣಿಸುವ ಗ್ರಹಗಳ ಪಟ್ಟಿಯಲ್ಲಿ ವ್ಯತ್ಯಾಸಗಳಿವೆ.

ಹಿಂದೂಗಳ ನವಗ್ರಹಗಳು ಸೂರ್ಯನನ್ನೂ ಒಳಗೊಂಡಿವೆ, ಆದರೆ ಆಧುನಿಕ ವಿಜ್ಞಾನಿಗಳು ಸೂರ್ಯನನ್ನು ನಕ್ಷತ್ರವೆಂದು ಪರಿಗಣಿಸುತ್ತಾರೆ ಮತ್ತು ಗ್ರಹವೆಂದು ಪರಿಗಣಿಸುವುದಿಲ್ಲ. ಚಂದ್ರನನ್ನು ಸಹ ಗ್ರಹವೆಂದು ಪರಿಗಣಿಸಲಾಗುವುದಿಲ್ಲ. ಆಧುನಿಕ ವಿಜ್ಞಾನಿಗಳಿಂದ ಗ್ರಹಗಳೆಂದು ಪರಿಗಣಿಸಲ್ಪಟ್ಟ ಯುರೇನಸ್ ಮತ್ತು ನೆಪ್ಚೂನ್ ಹಿಂದೂ ನವಗ್ರಹಗಳಲ್ಲಿ ಇಲ್ಲ. ಇದಲ್ಲದೆ, ರಾಹು ಮತ್ತು ಕೇತುಗಳು ಸಹ ಗ್ರಹಗಳಲ್ಲ.

ಹಿಂದೂಗಳು ನವಗ್ರಹಗಳೆಂದು ಪರಿಗಣಿಸುವದನ್ನು ದೂರದರ್ಶಕದ ಸಹಾಯವಿಲ್ಲದೆ ವಿವಿಧ ಸಂದರ್ಭಗಳಲ್ಲಿ ಬರಿಗಣ್ಣಿನಿಂದ ನೋಡಬಹುದು. ಅವುಗಳ ಬಗ್ಗೆ ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಆದರೆ ಅವುಗಳನ್ನು ಹೆಸರಿಗೆ ಮಾತ್ರ ಪುರಾಣದ ರೀತಿಯಲ್ಲಿ ಗ್ರಹಗಳೆಂದು ಕರೆಯಲಾಗುತ್ತದೆಯೆ ಹೊರತು ವೈಜ್ಞಾನಿಕ ಗ್ರಹಗಳಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ನವಗ್ರಹಗಳು ಪುರಾಣದ ಕಲ್ಪನೆಯಾಗಿವೆ. ಅವುಗಳಿಗೆ ವೈಜ್ಞಾನಿಕ ಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ದಿಕ್ಕುತಪ್ಪಿಸುವಂತಿದೆ.

Share.

Comments are closed.

scroll