Fake News - Kannada
 

ಜೂನ್ 2025 ರಲ್ಲಿ ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯ ವೀಡಿಯೊ ಎಂದು ಹೇಳಿಕೊಳ್ಳುವ ವೀಡಿಯೊ ಗೇಮ್ ಅನ್ನು ಹಂಚಿಕೊಳ್ಳಲಾಗುತ್ತಿದೆ

0

ಜೂನ್ 01, 2025 ರಂದು, ಉಕ್ರೇನ್ ರಷ್ಯಾದಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿತು. ಆಪರೇಷನ್ ಸ್ಪೈಡರ್ಸ್ ವೆಬ್ ಎಂದು ಕರೆಯಲ್ಪಡುವ ಈ ದಾಳಿಯಲ್ಲಿ ಕೆಲವು ರಷ್ಯಾದ ಯುದ್ಧವಿಮಾನಗಳು ಮತ್ತು ವಾಯುನೆಲೆಗಳು ನಾಶವಾದವು ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ಸಂದರ್ಭದಲ್ಲಿ, ಈ ದಾಳಿಗೆ ಸಂಬಂಧಿಸಿದೆ ಎಂದು ಹೇಳಲಾಗುವ ಡ್ರೋನ್‌ಗಳು ಯುದ್ಧವಿಮಾನಗಳನ್ನು ನಾಶಪಡಿಸುವ ವೀಡಿಯೊ (ಇಲ್ಲಿ) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಾದ್ರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಜೂನ್ 01, 2025 ರಂದು ರಷ್ಯಾದ ಸೇನಾ ನೆಲೆಗಳ ಮೇಲೆ ಉಕ್ರೇನ್ ಡ್ರೋನ್ ದಾಳಿಯ ದೃಶ್ಯಗಳು.

ಫ್ಯಾಕ್ಟ್: ಜೂನ್ 01, 2025 ರಂದು ಉಕ್ರೇನ್ ಡ್ರೋನ್‌ಗಳು ರಷ್ಯಾದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದು ನಿಜ. ಆದರೆ,  ವೈರಲ್ ಆಗಿರುವ ವೀಡಿಯೊ ಈ ದಾಳಿಗೆ ಸಂಬಂಧಿಸಿಲ್ಲ. ಇವು ‘ಆರ್ಮಾ 3’ ವಿಡಿಯೋ ಗೇಮ್‌ನಿಂದ ಸಂಗ್ರಹಿಸಲಾದ ದೃಶ್ಯಗಳಾಗಿವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ಸುಳ್ಳು.

ಮೊದಲಿಗೆ, ವೈರಲ್ ವೀಡಿಯೊದಲ್ಲಿರುವ ದೃಶ್ಯಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಾವು ಮಾಡಿದಾಗ ಪೂರ್ತಿ ವೀಡಿಯೊವನ್ನು (ಆರ್ಕೈವ್) 01 ಜೂನ್ 2025 ರಂದು ‘UWC’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ವೀಡಿಯೊ ಶೀರ್ಷಿಕೆಯು ಉಕ್ರೇನ್ ದಾಳಿಯಲ್ಲಿ 40 ರಷ್ಯಾದ ಯುದ್ಧವಿಮಾನಗಳು ನಾಶವಾದವು ಎಂದು ಹೇಳುತ್ತದೆ. ಆದರೆ, ವೀಡಿಯೊ ವಿವರಣೆಯು ಈ ವೀಡಿಯೊ ‘Arma 3’ ಎಂಬ ವೀಡಿಯೊ ಗೇಮ್‌ನಿಂದ ಬಂದಿದೆ ಎಂದು ಹೇಳುತ್ತದೆ. ಈ ವೀಡಿಯೊವನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ಸ್ಪಷಪಡಿಸಲಾಗಿದೆ. 

A screenshot of a video game  AI-generated content may be incorrect.

ಈ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ, Arma 3 ವೀಡಿಯೊಗಳನ್ನು ಬಳಸಿಕೊಂಡು ರಚಿಸಲಾದ ಹೆಚ್ಚಿನ ಕಾಲ್ಪನಿಕ ಯುದ್ಧ ವೀಡಿಯೊಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡೆವು. ಅಲ್ಲದೆ, ಈ ಚಾನೆಲ್‌ನಲ್ಲಿರುವ ಎಲ್ಲಾ ವೀಡಿಯೊಗಳು ಕಾಲ್ಪನಿಕವಾಗಿದ್ದು, ನೈಜ ಘಟನೆಗಳನ್ನು ಆಧರಿಸಿಲ್ಲ ಎಂದು ಚಾನೆಲ್ ವಿವರಣೆಯು ಸ್ಪಷ್ಟವಾಗಿ ಹೇಳುತ್ತದೆ.

ಆಪರೇಷನ್ ಸ್ಪೈಡರ್ಸ್ ವೆಬ್ ಬಗ್ಗೆ ವಿವಿಧ ಅಂತರರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ)ಇವೆ. ಹಾಗಾಗಿ ಇದು ವೈರಲ್ ವೀಡಿಯೊಗಿಂತ ಭಿನ್ನವಾಗಿವೆ.

ಕೊನೆಯದಾಗಿ ಹೇಳುವುದಾದರೆ, ಜೂನ್ 2025 ರಲ್ಲಿ ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯ ವೀಡಿಯೊ ಎಂದು ವೀಡಿಯೊ ಗೇಮ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll