Fake News - Kannada
 

ಫಾಕ್ಸ್ ನ್ಯೂಸ್ ನರೇಂದ್ರ ಮೋದಿಯವರನ್ನು ವಿಶ್ವದ ಎರಡನೇ ಅತ್ಯಂತ ಭ್ರಷ್ಟ ಪ್ರಧಾನಿ ಎಂದು ಹೇಳಿಲ್ಲ

0

ಫಾಕ್ಸ್ ನ್ಯೂಸ್ ವೆಬ್‌ಸೈಟ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಹೇಳುವ ಸ್ಕ್ರೀನ್‌ಶಾಟ್ ಕ್ಲಿಪ್ಪಿಂಗ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫಾಕ್ಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಿಶ್ವದ ಮೂರು ಅಗ್ರ ಭ್ರಷ್ಟ ಪ್ರಧಾನ ಮಂತ್ರಿಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ. ಹಾಗಾದರೆ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಫಾಕ್ಸ್ ನ್ಯೂಸ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.

ಫ್ಯಾಕ್ಟ್ : ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳ ಬಗ್ಗೆ ಫಾಕ್ಸ್ ನ್ಯೂಸ್ ಅಂತಹ ಯಾವುದೇ ವರದಿಯನ್ನು ಪ್ರಕಟಿಸಲಿಲ್ಲ. ಯುಎಸ್ ಮೂಲದ ಫಾಕ್ಸ್ ನ್ಯೂಸ್ ಮಾಧ್ಯಮ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲದ ‘ಫಾಕ್ಸ್ ನ್ಯೂಸ್ ಪಾಯಿಂಟ್’ ಎಂಬ ನಕಲಿ ವೆಬ್‌ಸೈಟ್ ಈ ವರದಿಯನ್ನು ಬಿಡುಗಡೆ ಮಾಡಿದೆ. ‘ಫಾಕ್ಸ್ ನ್ಯೂಸ್ ಪಾಯಿಂಟ್’ವೆಬ್‌ಸೈಟ್ ಈಗ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ದೊರಕಿದ ಕ್ಲಿಪ್ಪಿಂಗ್ ಅನ್ನು ಸ್ಪಷ್ಟವಾಗಿ  ಗಮನಿಸಿದಾಗ, ‘ವಿಶ್ವದ 2017 ರ ಟಾಪ್ 10 ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳು’ ಪಟ್ಟಿಯ ಮೇಲೆ ‘foxnewspoint.com’ ಎಂಬ ಶೀರ್ಷಿಕೆಯನ್ನು ಕಾಣಬಹುದು. ಅಂತರ್ಜಾಲದಲ್ಲಿ ಈ ಕುರಿತು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ವರದಿಯನ್ನು ಜುಲೈ 2017 ರಲ್ಲಿ ಯುಸ್- ಮೂಲದ ಮಾಧ್ಯಮ ಸಂಸ್ಥೆ,  ಫಾಕ್ಸ್ ನ್ಯೂಸ್‌ನೊಂದಿಗೆ ಯಾವುದೇ ಸಂಬಂಧವಿಲ್ಲದ  ವೆಬ್‌ಸೈಟ್ ‘www.foxnewspoint.com’ ಪ್ರಕಟಿಸಿದೆ ಎಂದು ಕಂಡುಬಂದಿದೆ.

‘ಫಾಕ್ಸ್ ನ್ಯೂಸ್ ಪಾಯಿಂಟ್’ ಪ್ರಕಟಿಸಿದ ‘ವಿಶ್ವದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿ 2017′ ವರದಿಯು ನವಾಜ್ ಷರೀಫ್, ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಅವರನ್ನು ವಿಶ್ವದ ಅಗ್ರ ಮೂರು ಭ್ರಷ್ಟ ಪ್ರಧಾನ ಮಂತ್ರಿಗಳೆಂದು ಪರಿಗಣಿಸಿದೆ.

2017 ರಲ್ಲಿ, ‘ಫಾಕ್ಸ್ ನ್ಯೂಸ್ ಪಾಯಿಂಟ್’ ‘2017ರ ವಿಶ್ವದ ಟಾಪ್ 10 ಅತ್ಯಂತ ಭ್ರಷ್ಟ ರಾಜಕಾರಣಿಗಳು‘, ‘2017 ವಿಶ್ವದ ಟಾಪ್ 10 ಅತ್ಯಂತ ಭ್ರಷ್ಟ ಕುಟುಂಬಗಳು‘ ಹಾಗೂ ಇತರ ಹಲವು ವರದಿಗಳನ್ನು ಪ್ರಕಟಿಸಿತು. ‘ಫಾಕ್ಸ್ ನ್ಯೂಸ್ ಪಾಯಿಂಟ್’ ವೆಬ್‌ಸೈಟ್‌ನ ‘About Us’ ವಿಭಾಗದಲ್ಲಿ, ವೆಬ್‌ಸೈಟ್ ಅಥವಾ ಸಂಸ್ಥೆಯು ಯುಎಸ್ ಮೂಲದ ಫಾಕ್ಸ್ ನ್ಯೂಸ್ ಕಂಪನಿಯೊಂದಿಗೆ  ಲಿಂಕ್ ಆಗಿರುವ ಮಾಹಿತಿ ಎಲ್ಲಿಯೂ ಕಂಡುಬಂದಿಲ್ಲ. ‘ಫಾಕ್ಸ್ ನ್ಯೂಸ್ ಪಾಯಿಂಟ್’ಈಗ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಈ ರಾಜಕಾರಣಿಗಳಿಗೆ ಯಾವ ಆಧಾರದ ಮೇಲೆ ಶ್ರೇಣಿಗಳನ್ನು ನಿಗದಿಪಡಿಸಲಾಗಿದೆ ಮತ್ತು ಸಮೀಕ್ಷೆಯ ವಿಧಾನವನ್ನು ವೆಬ್‌ಸೈಟ್ ಯಾವುದೇ ವಿವರಗಳನ್ನು ನೀಡಿಲ್ಲ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಮತ್ತು ಇತರ ಸಂಸ್ಥೆಗಳು ಪ್ರಕಟಿಸಿದ ವರದಿಗಳ ಆಧಾರದ ಮೇಲೆ ಫಾಕ್ಸ್ ನ್ಯೂಸ್ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಕುರಿತು ಲೇಖನಗಳನ್ನು ಪ್ರಕಟಿಸಿತ್ತು. ಆದರೆ ಅತ್ಯಂತ ಭ್ರಷ್ಟ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿರುವ ವರದಿಯನ್ನು ಫಾಕ್ಸ್ ನ್ಯೂಸ್ ಪ್ರಕಟಿಸಿಲ್ಲ. ಸಮೀಕ್ಷೆಯನ್ನು ಯಾವುದೋ ನಕಲಿ ವೆಬ್‌ಸೈಟ್ ಪ್ರಕಟಿಸಿದೆ ಎಂದು ವರದಿ ಮಾಡಿದ್ದು, ಈ ಕುರಿತು  ಹಲವಾರು ಸುದ್ದಿ ವೆಬ್‌ಸೈಟ್‌ಗಳು 2018 ರಲ್ಲಿ ಲೇಖನಗಳನ್ನು ಪ್ರಕಟಿಸಿದ್ದವು.

ಒಟ್ಟಾರೆಯಾಗಿ ಹೇಳುವುದಾದರೆ, ನರೇಂದ್ರ ಮೋದಿಯವರನ್ನು ವಿಶ್ವದ ಎರಡನೇ ಅತ್ಯಂತ ಭ್ರಷ್ಟ ಪ್ರಧಾನಿ ಎಂದು ಪಟ್ಟಿ ಮಾಡಲಾಗಿದೆ ಎಂಬ ಈ ಸುದ್ದಿ ಕ್ಲಿಪ್ಪಿಂಗ್ ನಕಲಿ  ವೆಬ್‌ಸೈಟ್ ನಡೆಸಿದ ಕಾರ್ಯ.

Share.

Comments are closed.

scroll