ದೆಹಲಿಯ ರೈತ ಚಳುವಳಿಯನ್ನು ಮುನ್ನಡೆಸುತ್ತಿರುವವರಲ್ಲಿ ಒಬ್ಬರಾದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಮುಸ್ಲಿಮರಿಂದ ಸಹಾನುಭೂತಿ ಪಡೆಯಲು “ಅಲ್ಲಾಹು ಅಕ್ಬರ್” ಎಂದು ಘೋಷಣೆ ಕೂಗುತ್ತಿದ್ದಾರೆ ಎಂದಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. ರಾಕೇಶ್ ಟಿಕಾಯತ್ ಕೃಷಿ ಕಾನೂನುಗಳ ವಿರುದ್ಧದ ಸಾರ್ವಜನಿಕ ಸಭೆಯಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಾರೆ. ಅದೇ ಸಾರ್ವಜನಿಕ ಸಭೆಯಲ್ಲಿ ಹಿಂದೂ ರೈತರು ಕೋಪದಿಂದ ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗಿದ್ದಾರೆ ಎಂದು ವಿಡಿಯೊ ಹಂಚಿಕೊಳ್ಳಲಾಗುತ್ತಿದ್ದು, ಇದು ನಿಜವೇ ಎಂಬುದನ್ನು ನೋಡೋಣ.
ಪ್ರತಿಪಾದನೆ: ರೈತ ಚಳುವಳಿಯ ನಾಯಕ ರಾಕೇಶ್ ಟಿಕಾಯತ್, ಮುಸ್ಲಿಮರ ಸಹಾನುಭೂತಿಗಾಗಿ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದರೆ, ಹಿಂದೂ ರೈತರು ಕೋಪದಿಂದ ‘ಹರಹರ ಮಹಾದೇವ್’ ಎಂದು ಘೋಷಣೆ ಕೂಗಿದ್ದಾರೆ.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಲಾಗಿರುವ ವಿಡಿಯೊವನ್ನು ಎಡಿಟ್ ಮಾಡಲಾಗಿದೆ. ರಾಕೇಶ್ ಟಿಕಾಯತ್ ಮುಜಾಫರ್ ನಗರದಲ್ಲಿ 05 ಸೆಪ್ಟೆಂಬರ್ 2021 ರಂದು ನಡೆದ ಕಿಸಾನ್ ಮಹಾ ಪಂಚಾಯತ್ ಸಭೆಯಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆಯನ್ನು ಕೂಗಿದ್ದು ನಿಜ. ಭಾರತದ ಏಕತೆಯನ್ನು ತಿಳಿಸಲು ರಾಕೇಶ್ ಟಿಕಾಯತ್ ‘ಅಲ್ಲಾಹು ಅಕ್ಬರ್’ಎಂದು ಘೋಷಣೆ ಕೂಗಿ, ರೈತರನ್ನು ‘ಹರ ಹರ ಮಹಾದೇವ್’ ಎಂದು ಕೂಗಲು ಪ್ರೇರೆಪಿಸಿದ್ದಾರೆ. ರೈತರು ಕೋಪದಿಂದ ‘ಹರಹರ ಮಹಾದೇವ್’ ಎಂದು ಘೋಷಣೆ ಕೂಗಿಲ್ಲ. ಅವರು ಮನಃಪೂರ್ವಕವಾಗಿ ಒಪ್ಪಿ ಕೂಗಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಹಕ್ಕು ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ‘ಪಂಜಾಬ್ ತಕ್’ ಸುದ್ದಿ ಚಾನೆಲ್ ಲೋಗೋ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು. ಈ ವಿಡಿಯೋಕ್ಕಾಗಿ ‘ಪಂಜಾಬ್ ತಕ್’ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹುಡುಕಿದಾಗ, ಈ ವಿಡಿಯೋವನ್ನು ‘ಪಂಜಾಬ್ ತಕ್’ ನ್ಯೂಸ್ ಚಾನೆಲ್ 05 ಸೆಪ್ಟೆಂಬರ್ 2021 ರಂದು ಪ್ರಕಟಿಸಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ 05 ಸೆಪ್ಟೆಂಬರ್ 2021 ರಂದು ಮುಜಾಫರ್ ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ಕಾರ್ಯಕ್ರಮದ ನೇರ ದೃಶ್ಯಗಳನ್ನು ವಿವರಿಸುತ್ತದೆ.
‘ಪಂಜಾಬ್ ತಕ್’ ಸುದ್ದಿ ಚಾನೆಲ್ ಪ್ರಕಟಿಸಿದ ವಿಡಿಯೋದಲ್ಲಿ 11:06 ನಿಮಿಷದಲ್ಲಿ, ರಾಕೇಶ್ ಟಿಕಾಯತ್ ಹೀಗೆ ಮಾತನಾಡಿದ್ದಾರೆ. “ಇಂತಹ (ಬಿಜೆಪಿ) ಸರ್ಕಾರಗಳು ದೇಶದಲ್ಲಿ ಮುಂದುವರಿದರೆ, ಅವರು ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತಾರೆ. ಹಿಂದೆ, ಟಿಕಾಯತ್ (ರಾಕೇಶ್ ಟಿಕಾಯತ್ ತಂದೆ ಮತ್ತು ಬಿಕೆಯು ಮಾಜಿ ಅಧ್ಯಕ್ಷ ಮಹೇಂದ್ರ ಸಿಂಗ್ ಟಿಕಾಯತ್) ಸಮಯದಲ್ಲಿ ಘೋಷಣೆಗಳನ್ನು ಕೂಗಲಾಗುತ್ತಿತ್ತು. ‘ಅಲ್ಲಾಹು ಅಕ್ಬರ್’(ತಕ್ಷಣ ಗುಂಪು ‘ಹರ ಹರ ಮಹಾದೇವ’ ಎಂದು ಕೂಗಿತು), ‘ಅಲ್ಲಾಹು ಅಕ್ಬರ್ (ಮತ್ತೆ ಜನಸಮೂಹವು ‘ಹರ ಹರ ಮಹಾದೇವ’ ಎಂದು ಕೂಗಿತು). ಈ ‘ಅಲ್ಲಾಹು ಅಕ್ಬರ್-ಹರ ಹರ ಮಹಾದೇವ್’ ಘೋಷಣೆಗಳು ದೇಶದಲ್ಲಿ ಇದುವರೆಗೆ ನಡೆದ ಚಳುವಳಿಗಳಲ್ಲಿ ಘೋಷಿಸಲಾಗಿದೆ. ಭವಿಷ್ಯದಲ್ಲಿ ನಡೆಯುವ ಚಳುವಳಿಗಳಲ್ಲಿಯೂ ಈ ಘೋಷಣೆಗಳನ್ನು ಕೂಗಲಾಗುತ್ತದೆ. ನಮ್ಮ ಬಳಿ ಗಲಭೆಗಳು ಉದ್ಭವಿಸುವುದಿಲ್ಲ. ಅವರು ಜನರನ್ನು ಬೇರ್ಪಡಿಸಲು ಪ್ರಯತ್ನಿಸಿದರೆ, ನಾವು ಒಂದಾಗಲು ಪ್ರಯತ್ನಿಸುತ್ತೇವೆ. ಸುಳ್ಳು ಪ್ರಚಾರದಿಂದ ಜನರು ಮೋಸ ಹೋಗಬಾರದು, ”ಎಂದು ಹೇಳಿದ್ದಾರೆ.
ಕೆಲವು ಇತರ ಸುದ್ದಿ ವಾಹಿನಿಗಳು ರಾಕೇಶ್ ಟಿಕಾಯತ್ ಕಿಸಾನ್ ಮಹಾ ಪಂಚಾಯತ್ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೀಡಿಯೋವನ್ನು ಪ್ರಕಟಿಸಿವೆ. ಆ ವಿಡಿಯೋಗಳನ್ನು ಇಲ್ಲಿ ನೋಡಬಹುದು. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಕಿಸಾನ್ ಮಹಾ ಪಂಚಾಯತ್ ಸಭೆಯಲ್ಲಿ ಭಾಷಣ ಮಾಡಿದ ರಾಕೇಶ್ ಟಿಕಾಯತ್ ವಿಡಿಯೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.
ರಾಕೇಶ್ ಟಿಕಾಯತ್ ಅವರ ಅಲ್ಲಾ ಹೋ ಅಕ್ಬರ್ ‘ಘೋಷಣೆಯ ಕುರಿತು ಸಂಪೂರ್ಣ ಸ್ಪಷ್ಟತೆಯೊಂದಿಗೆ 07 ಸೆಪ್ಟೆಂಬರ್ 2021 ರಂದು ‘ಬಿಬಿಸಿ ನ್ಯೂಸ್ ಹಿಂದಿ’ಯಲ್ಲಿ’ ವಿಡಿಯೊವನ್ನು ಪ್ರಕಟಿಸಿದ್ದಾರೆ. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ರಾಕೇಶ್ ಟಿಕಾಯತ್ ಮುಸ್ಲಿಮರ ಸಹಾನುಭೂತಿಗಾಗಿ ‘ಅಲ್ಲಾಹು ಅಕ್ಬರ್’ ಎಂದು ಜಪಿಸಲಿಲ್ಲ ಎಂದು ಹೇಳಬಹುದಾಗಿದೆ.
ಒಟ್ಟಾರೆಯಾಗಿ, ಎಡಿಟ್ ಮಾಡಿದ ವಿಡಿಯೋವನ್ನು ರೈತ ಚಳುವಳಿಯ ನಾಯಕ ರಾಕೇಶ್ ಟಿಕಾಯತ್ ಅವರು ಮುಸ್ಲಿಮರ ಸಹಾನುಭೂತಿಗಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.