Fake News - Kannada
 

ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆಯವರನ್ನು ಎದ್ದು ಕುರ್ಚಿ ಖಾಲಿ ಮಾಡುವಂತೆ ಹೇಳಿದ್ದಾರೆ ಎಂಬ ಹೇಳಿಕೆ ಸುಳ್ಳು

0

 ರಾಹುಲ್ ಗಾಂಧಿ ಸಭೆಯ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೀಟ್ ನಿಂದ ಎದ್ದು ಹೋಗುವಂತೆ  ಹೇಳಿ ನಂತರ ಖರ್ಗೆ ಎದ್ದು ನಿಲ್ಲುತ್ತಿರುವುದನ್ನು ತೋರಿಸುವ ವಿಡಿಯೋ ಎಂದು  24 ಸೆಕೆಂಡುಗಳ ವಿಡಿಯೋ ಕ್ಲಿಪ್ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಹುಲ್ ಗಾಂಧಿ ಎದ್ದು ತಮ್ಮ ಸ್ಥಾನವನ್ನು ಖಾಲಿ ಮಾಡಲು ಹೇಳಿದ್ದಾರೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಸಭೆಯ ಸಮಯದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾಗ ಖಾಲಿ ಮಾಡುವಂತೆ ಕೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವೈರಲ್ ಕ್ಲೇಮ್ ನಲ್ಲಿ ಹೇಳಿರುವ ಹೇಳಿಕೆ ಸುಳ್ಳು. ದೆಹಲಿಯಲ್ಲಿ ಹೊಸ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಉದ್ಘಾಟನೆಯ ಸಮಯದಲ್ಲಿ, ರಾಹುಲ್ ಗಾಂಧಿ ಎದ್ದು ನಿಂತು ಖರ್ಗೆ ಅವರ ಕುರ್ಚಿಯನ್ನು ಹಿಂದಕ್ಕೆ ಎಳೆದುಕೊಂಡು ತಮ್ಮ ಭಾಷಣಕ್ಕಾಗಿ ವೇದಿಕೆಗೆ ಹೋಗಲು ಅವಕಾಶ ಮಾಡಿಕೊಟ್ಟರು ನಂತರ ರಾಹುಲ್ ಅವರಿಗೆ ನಿಗದಿಪಡಿಸಿದ ಮತ್ತೊಂದು ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ಆದ್ದರಿಂದ ಈ ಕ್ಲೇಮ್ ಸುಳ್ಳು.

ಈ ವೈರಲ್ ವೀಡಿಯೊದ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ಈ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಪೂರ್ಣ ವೀಡಿಯೊವನ್ನು ಜನವರಿ 15, 2025 ರಂದು ಕಾಂಗ್ರೆಸ್‌ನ ಅಫೀಷಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ ಎಂದು ಕಂಡುಕೊಂಡೆವು (ಇಲ್ಲಿ ಮತ್ತು ಇಲ್ಲಿ). ದೆಹಲಿಯಲ್ಲಿ ಹೊಸ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಉದ್ಘಾಟನೆಯನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಹೇಳಿಕೆಗೆ ಸಂಬಂಧಿಸಿದ ಘಟನೆಗಳ ಸರಿಯಾಗಿ ಪೂರ್ಣ ವೀಡಿಯೊದಲ್ಲಿ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಉದ್ಘಾಟನೆಯ ನಂತರ, ಕೆ.ಸಿ. ವೇಣುಗೋಪಾಲ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಜಯ್ ಮಾಕನ್ ವೇದಿಕೆಯಲ್ಲಿ ಕ್ರಮವಾಗಿ ಕುಳಿತಿದ್ದರು. ರಾಹುಲ್ ಗಾಂಧಿ ತಮ್ಮ ನಿಗದಿತ ಸ್ಥಳದಲ್ಲಿ ಕುಳಿತಿರುವುದು ಕಂಡುಬರುತ್ತದೆ. ನಂತರ 46:45 ನಿಮಿಷಗಳ ಸಮಯದಲ್ಲಿ, ಅಜಯ್ ಮಾಕನ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಲು ಆಹ್ವಾನಿಸಿದರು. ಆ ಸಮಯದಲ್ಲಿ, ರಾಹುಲ್ ಗಾಂಧಿ ಎದ್ದುನಿಂತು, ಖರ್ಗೆ ಅವರ ಕುರ್ಚಿಯನ್ನು ಹಿಂದಕ್ಕೆ ಎಳೆದು, ಮಾತನಾಡಲು ಮೈಕ್ ಕಡೆಗೆ ಹೋಗಲು ಸಹಾಯ ಮಾಡಿದರು. ಖರ್ಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ನಂತರ, ರಾಹುಲ್ ಗಾಂಧಿ ಹಿಂತಿರುಗಿ ಅವರಿಗೆ ನಿಗದಿಪಡಿಸಿದ ಕುರ್ಚಿಯಲ್ಲಿ ಕುಳಿತರು. ಈ ಘಟನೆಯು ಕೆಳಗಿನ ಕೊಲಾಜ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಖರ್ಗೆ ತಮ್ಮ ಭಾಷಣವನ್ನು ಮುಗಿಸಿದ ನಂತರ, ಅವರು ಹಿಂತಿರುಗಿ ತಮ್ಮ ಕುರ್ಚಿಯಲ್ಲಿ ಕುಳಿತರು. ರಾಹುಲ್ ಗಾಂಧಿ ಖರ್ಗೆ ಅವರನ್ನು ಎದ್ದೇಳಲು ಅಥವಾ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಲು ಒತ್ತಾಯಿಸಿದ ಯಾವುದೇ ಕ್ಷಣವೂ ಪೂರ್ಣ ವೀಡಿಯೊದಲಿಲ್ಲ. 

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದ್ದು ತಮ್ಮ ಕುರ್ಚಿಯನ್ನು ಖಾಲಿ ಮಾಡುವಂತೆ ಹೇಳಿದ್ದಾರೆ ಎಂಬ ಹೇಳಿಕೆ ಸುಳ್ಳು.

Share.

Comments are closed.

scroll