ಇತ್ತೀಚೆಗೆ 23 ಆಗಸ್ಟ್ 2024 ರಂದು, 41 ಭಾರತೀಯ ಯಾತ್ರಿಕರು ಸೇರಿದಂತೆ 43 ಜನರನ್ನು ಹೊತ್ತ ಬಸ್ ನೇಪಾಳದ ತನಾಹು ಜಿಲ್ಲೆಯ ಅಂಬುಖೈರೇನಿ ಬಳಿ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿತು (ಇಲ್ಲಿ, ಇಲ್ಲಿ). ಮಾಧ್ಯಮ ವರದಿಗಳ ಪ್ರಕಾರ, ಅಪಘಾತದಲ್ಲಿ 41 ಜನರು ಸಾವನ್ನಪ್ಪಿದ್ದಾರೆ ಮತ್ತು ಮೃತರಲ್ಲಿ ಹೆಚ್ಚಿನವರು ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯವರು ಎಂದು ಮಹಾರಾಷ್ಟ್ರ ಪರಿಹಾರ ಮತ್ತು ಪುನರ್ವಸತಿ ಸಚಿವ ಗಿರೀಶ್ ಮಹಾಜನ್ 24 ಆಗಸ್ಟ್ 2024 ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು (ಇಲ್ಲಿ, ಇಲ್ಲಿ). ಈ ಘಟನೆಯಲ್ಲಿ “ಗೋರಖ್ಪುರದ ಬಸ್ ಚಾಲಕ ಮುಸ್ತಫಾ ಅಲಿಯಾಸ್ ಮುರ್ತಾಜಾ ಉದ್ದೇಶಪೂರ್ವಕವಾಗಿ ಬಸ್ಸನ್ನು ಸಾವಿರ ಅಡಿ ಆಳದ ಕಮರಿಗೆ ಬೀಳಿಸಿದ್ದು, ಇದರ ಪರಿಣಾಮವಾಗಿ 30 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಚಾಲಕ ಮುಸ್ತಫಾ ಬಸ್ನಿಂದ ಜಿಗಿದು ತನ್ನ ಜೀವವನ್ನು ಉಳಿಸಿದ್ದಾನೆ, ಇದು ಟೂರಿಸಂ ಜಿಹಾದ್” ಎಂಬ ಪೋಸ್ಟ್ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: 23 ಆಗಸ್ಟ್ 2024 ರಂದು, ಬಸ್ ಚಾಲಕ ಮುಸ್ತಫಾ ಅಲಿಯಾಸ್ ಮುರ್ತಾಜಾ ನೇಪಾಳದ ತನಾಹು ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ.
ಫ್ಯಾಕ್ಟ್: ವರದಿಗಳ ಪ್ರಕಾರ, 23 ಆಗಸ್ಟ್ 2024 ರಂದು, 41 ಭಾರತೀಯ ಯಾತ್ರಿಕರು ಸೇರಿದಂತೆ 43 ಜನರನ್ನು ಹೊತ್ತ ಬಸ್ ನೇಪಾಳದ ತನಾಹು ಜಿಲ್ಲೆಯ ಅಂಬುಖೈರೇನಿ ಬಳಿ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿದೆ. ಅಪಘಾತದಲ್ಲಿ ಬಸ್ ಚಾಲಕ ಮುಸ್ತಫಾ ಮತ್ತು ಅವರ ಸಹಾಯಕ ಸಹ ಸಾವನ್ನಪ್ಪಿದ್ದಾರೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.
ನೇಪಾಳದ ತನಾಹು ಜಿಲ್ಲೆಯ ಅಂಬುಖೈರೇನಿ ಬಳಿ ಇತ್ತೀಚೆಗೆ ಸಂಭವಿಸಿದ ಬಸ್ ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸೂಕ್ತ ಕೀವರ್ಡ್ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದಾಗ ಸಾಕಷ್ಟು ವರದಿಗಳು ನಮಗೆ ದೊರಕಿವೆ (ಇಲ್ಲಿ, ಇಲ್ಲಿ, ಇಲ್ಲಿ). ಈ ವರದಿಗಳ ಪ್ರಕಾರ, ಮಹಾರಾಷ್ಟ್ರದ ಸುಮಾರು 110 ಯಾತ್ರಾರ್ಥಿಗಳು ನೇಪಾಳಕ್ಕೆ ಭೇಟಿ ನೀಡಲು ಉತ್ತರ ಪ್ರದೇಶದ ಕೇಸರ್ವಾನಿ ಟ್ರಾನ್ಸ್ಪೋರ್ಟ್ಗೆ ಸೇರಿದ ಮೂರು ಬಸ್ ಗಳಲ್ಲಿ ಗೋರಖ್ಪುರದಿಂದ ನೇಪಾಳಕ್ಕೆ ಪ್ರಯಾಣಿಸಿದ್ದರು. 23 ಆಗಸ್ಟ್ 2024 ರಂದು ನೇಪಾಳದ ತನಾಹು ಜಿಲ್ಲೆಯ ಅಂಬುಖೈರೇನಿ ಬಳಿ 43 ಜನರನ್ನು ಹೊತ್ತ ಬಸ್ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟ 25 ಯಾತ್ರಾರ್ಥಿಗಳ ಶವಗಳನ್ನು 2024 ರ ಆಗಸ್ಟ್ 24 ರ ಸಂಜೆ ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಹಾರಾಷ್ಟ್ರದ ಜಲ್ಗಾಂವ್ಗೆ ಸಾಗಿಸಲಾಯಿತು. ಡ್ರೈವರ್ ಮತ್ತು ಬಸ್ ಕ್ಲೀನರ್ ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ರಸ್ತೆ ಮೂಲಕ ಉತ್ತರ ಪ್ರದೇಶದ ಗೋರಖ್ಪುರಕ್ಕೆ ಕಳುಹಿಸಲಾಯಿತು. ಮಹಾರಾಷ್ಟ್ರ ಪರಿಹಾರ ಮತ್ತು ಪುನರ್ವಸತಿ ಸಚಿವ ಗಿರೀಶ್ ಮಹಾಜನ್ ಅವರು 24 ಆಗಸ್ಟ್ 2024 ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಪಘಾತದಲ್ಲಿ 41 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಉತ್ತರ ಪ್ರದೇಶದ ಬಸ್ ಚಾಲಕ ಮುಸ್ತಫಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದೂ ಹೇಳಿದ್ದಾರೆ.
ಅಪಘಾತದಲ್ಲಿ ಬಸ್ ಚಾಲಕ ಮುಸ್ತಫಾ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿಸುವ ಸುದ್ದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಇದರ ಜೊತೆಗೆ ಅವರ ಅಂತ್ಯಕ್ರಿಯೆಯ ದೃಶ್ಯಗಳನ್ನು ತೋರಿಸುವ ಸುದ್ದಿ ವೀಡಿಯೊ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2024 ರ ಆಗಸ್ಟ್ 23 ರಂದು ಬಸ್ ಚಾಲಕ ಮುಸ್ತಫಾ ಅಲಿಯಾಸ್ ಮುರ್ತಾಜಾ ಕೂಡ ನೇಪಾಳದಲ್ಲಿ ನಡೆದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.