Fake News - Kannada
 

ವ್ಯಕ್ತಿಯೊಬ್ಬ ಹೊಂಡಕ್ಕೆ ಬಿದ್ದು ಸಂಪೂರ್ಣವಾಗಿ ಮುಳುಗಿ ಹೋದಂತೆ ಕಾಣುವುದು ಎಡಿಟ್ ಮಾಡಿರುವ ವಿಡಿಯೋ

0

ವ್ಯಕ್ತಿಯೊಬ್ಬ ಬೇಲಿಯನ್ನು ಹಾರಿ ಗುಂಡಿಯೊಳಗೆ ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಗುಂಡಿಗೆ ಬಿದ್ದು ಸಂಪೂರ್ಣವಾಗಿ ನಾಪತ್ತೆಯಾಗಿದ್ದಾನೆ ಎಂಬ ಹೇಳೀಕೆಯೊಂದಿಗೆ ಪೋಸ್ಟ್‍ಅನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸೋಣ.

ಪ್ರತಿಪಾದನೆ: ವ್ಯಕ್ತಿಯೊಬ್ಬ ಗುಂಡಿಗೆ ಬಿದ್ದು ಸಂಪೂರ್ಣವಾಗಿ ನಾಪತ್ತೆಯಾಗಿರುವ ವಿಡಿಯೋ.

ಸತ್ಯಾಂಶ: ಇದು ಎಡಿಟ್ ಮಾಡಿದ ವೀಡಿಯೊ. ವ್ಯಕ್ತಿ ಹಳ್ಳಕ್ಕೆ ಬಿದ್ದದ್ದು ನಿಜವಾದರೂ ಆತ ಸಂಪೂರ್ಣವಾಗಿ ಕಣ್ಮರೆಯಾಗುವುದಿಲ್ಲ. ಅವನು ತಕ್ಷಣ ಗುಂಡಿಯಿಂದ ಮೇಲೆದ್ದು ಬರುತ್ತಾನೆ . ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅನೇಕ ರೀತಿಯ ವೀಡಿಯೊಗಳು ಕಂಡುಬಂದಿವೆ. ಟ್ವಿಟರ್ ಬಳಕೆದಾರರು ತಮ್ಮ ಪ್ರೊಫೈಲ್‌ನಲ್ಲಿ ವೀಡಿಯೊದ ಮೂಲ ಆವೃತ್ತಿಯನ್ನು ಪೋಸ್ಟ್ ಮಾಡಿದ್ದಾರೆ. ಮೂಲ ವೀಡಿಯೊದಲ್ಲಿ, ವ್ಯಕ್ತಿಯು ಹಳ್ಳಕ್ಕೆ ಬೀಳುವುದನ್ನು ನೋಡಬಹುದು, ಆದರೆ ಅವನು ಸಂಪೂರ್ಣವಾಗಿ ಕಣ್ಮರೆಯಾಗಲಿಲ್ಲ. ಅವನು ತಕ್ಷಣ ಗುಂಡಿಯಿಂದ ಎದ್ದು ಹೊರಬರುತ್ತಾನೆ. ವೀಡಿಯೊದ ಮೂಲ ಆವೃತ್ತಿಯನ್ನು Instagram ನಲ್ಲಿ ಪೋಸ್ಟ್ ಮಾಡಿರುವುದನ್ನು ಸಹ ಕಾಣಬಹುದು.

ಇಂಡೋನೇಷ್ಯಾದಲ್ಲಿ 2024 ರ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಲಾಗುತ್ತದೆ ಎನ್ನುವ ವದಂತಿಗಳ ಹಬ್ಬಿದ್ದ ಸಂದಭ‍್ದಲ್ಲಿ ಅದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ಸೆರೆಹಿಡಿದ ವೀಡಿಯೊ ಇದು ಎಂದು ವರದಿಯಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಬೇಲಿಯನ್ನು ಹಾರಿ ಗುಂಡಿಗೆ ಬಿದ್ದು ಸಂಪೂರ್ಣವಾಗಿ ಮುಳುಗಿ ಹೋದಂತೆ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

Share.

Comments are closed.

scroll