Fake News - Kannada
 

ಬೆಂಜಮಿನ್ ನೆತನ್ಯಾಹುವನ್ನು ಭಯೋತ್ಪಾದಕ ಎಂದು ಘೋಷಿಸುವ ಪೋಸ್ಟರ್ ಅನ್ನು ಕಿಂಗ್ ಚಾರ್ಲ್ಸ್ III ಅನಾವರಣಗೊಳಿಸಿದ ದೃಶ್ಯಗಳಂತೆ ಎಡಿಟ್ ಮಾಡಿದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಕಿಂಗ್ ಚಾರ್ಲ್ಸ್ III ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪೋಸ್ಟರ್ ಅನ್ನು ಭಯೋತ್ಪಾದಕ ಅನಾವರಣ ಮಾಡುತ್ತಿರುವುದನ್ನು ತೋರಿಸುವ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುರೋಪ್ ನೆತನ್ಯಾಹುವನ್ನು ಭಯೋತ್ಪಾದಕ ಎಂದು ಘೋಷಿಸಿ, ನಂತರ ಈ ಪೋಸ್ಟರ್ ಅನ್ನು ‘ನಿನ್ನೆ’ (22 ಅಕ್ಟೋಬರ್ 2024) ಅನಾವರಣಗೊಳಿಸಲಾಯಿತು ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಕಿಂಗ್ ಚಾರ್ಲ್ಸ್ III ಇಸ್ರೇಲಿ ಪಿಎಂ ಬೆಂಜಮಿನ್ ನೆತನ್ಯಾಹು ಅವರನ್ನು ಭಯೋತ್ಪಾದಕ ಎಂದು ಘೋಷಿಸುವ ಪೋಸ್ಟರ್ ಅನ್ನು ಅನಾವರಣಗೊಳಿಸುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಇದು ಡಿಜಿಟಲ್ ಮಾರ್ಪಡಿಸಿದ ವೀಡಿಯೊ. ಮೂಲ ವೀಡಿಯೊವು ಮೇ 2024ರಂದು, ಕಿಂಗ್ ಚಾರ್ಲ್ಸ್ ತನ್ನ ಅಧಿಕೃತ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ತೋರಿಸುತ್ತದೆ. ಯುರೋಪ್ ಬೆಂಜಮಿನ್ ನೆತನ್ಯಾಹುವನ್ನು ಭಯೋತ್ಪಾದಕ ಎಂದು ಘೋಷಿಸಿದ ಕುರಿತಾದ ಯಾವುದೇ ವರದಿಗಳು ದೊರಕಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಕ್ಲೈಮ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ಮೇ 2024 ರ ಈ ವೀಡಿಯೊದ ಒರಿಜಿನಲ್ ವರ್ಷನ್ ಗೆ ನಮ್ಮನ್ನು ಕರೆದೊಯ್ಯಿತು. ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಹಲವಾರು ಮಾಧ್ಯಮ ಚಾನಲ್‌ಗಳ (ಇಲ್ಲಿ ಮತ್ತು ಇಲ್ಲಿ) ಯು ಟ್ಯೂಬ್ ನಲ್ಲಿ ಇದನ್ನು ಅಪ್‌ಲೋಡ್ ಮಾಡಲಾಗಿದೆ.

ಇದು ಕಿಂಗ್ ಚಾರ್ಲ್ಸ್ III ತನ್ನ ಪಟ್ಟಾಭಿಷೇಕದ ನಂತರ ತನ್ನ ಮೊದಲ ಅಧಿಕೃತ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ತೋರಿಸುತ್ತದೆ. ಅವರು ಇದನ್ನು 14 ಮೇ 2024 ರಂದು ಯುಕೆಯ ಲಂಡನ್‌ನಲ್ಲಿರುವ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಅನಾವರಣಗೊಳಿಸಿದರು. Instagram ನಲ್ಲಿ ರಾಜಮನೆತನದ ಅಫೀಷಿಯಲ್ ಪೇಜ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮತ್ತು ಇತರ ಸುದ್ದಿ ವರದಿಗಳಲ್ಲಿ (ಇಲ್ಲಿ ಮತ್ತು ಇಲ್ಲಿ), ಕಿಂಗ್ ಚಾರ್ಲ್ಸ್ III ಅವರು ಕೆಂಪು ಬಣ್ಣದ ಉಡುಪಿನಲ್ಲಿ ಅವರ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು.

ಬೆಂಜಮಿನ್ ನೆತನ್ಯಾಹು ಅವರನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡುವ ಪೋಸ್ಟರ್‌ನೊಂದಿಗೆ ಅವರ ಭಾವಚಿತ್ರವನ್ನು ಬದಲಿಸಲು ಈ ವೀಡಿಯೊವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

ಇದಲ್ಲದೆ, ಯುರೋಪ್ ನೆತನ್ಯಾಹುವನ್ನು ಭಯೋತ್ಪಾದಕ ಎಂದು ಘೋಷಿಸಿದೆಯೇ ಎಂದು ಪರಿಶೀಲಿಸಲು ನಾವು ಇಂಟರ್ನೆಟ್ ಅನ್ನು ಸಹ ಹುಡುಕಿದ್ದೇವೆ. ಆದರೆ, ಅಂತಹ ಕ್ಲೇಮ್ ಅನ್ನು ತಿಳಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜ ಚಾರ್ಲ್ಸ್ III ಇಸ್ರೇಲಿ ಪಿಎಂ ಬೆಂಜಮಿನ್ ನೆತನ್ಯಾಹು ಅವರ ಪೋಸ್ಟರ್ ಅನ್ನು ಅನಾವರಣಗೊಳಿಸಿದ ದೃಶ್ಯಗಳಂತೆ ಎಡಿಟ್ ಮಾಡಿದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ, ಅದು ಅವರನ್ನು ಭಯೋತ್ಪಾದಕ ಎಂದು ಲೇಬಲ್ ಮಾಡುವಂತೆ ಮಾಡಲಾಗಿದೆ. 

Share.

Comments are closed.

scroll