Fake News - Kannada
 

ಅಮೇರೀಕಾಗೆ ಸಂಬಂಧಿಸಿದ ಹೆಲಿಕಾಪ್ಟರ್‌ಗಳನ್ನು ತೋರಿಸುತ್ತಾ ಭಾರತ ಪಾಂಗೋಂಗ್‌ ಸರೋವರದ ಮೇಲೆ ಗಸ್ತು ತಿರುಗುತ್ತಿದೆ ಎಂದು ಶೇರ್‌ ಮಾಡುತ್ತಿದ್ದಾರೆ

0

ಚೈನಾ ಕುತಂತ್ರಗಳನ್ನು ಭಗ್ನ ಮಾಡುವುದಕ್ಕಾಗಿ ಭಾರತದ ‌ ಅಪಾಚಿ ಹೆಲಿಕಾಪ್ಟರ್‌ಗಳು ಪಾಂಗೋಂಗ್ ಸರೋವರದ ಹತ್ತಿರ ಗಸ್ತು ಸುತ್ತುತ್ತಿವೆ ಎಂದು ಹಂಚಿಕೊಳ್ಳುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರತಿಪಾದಿಸಿರುವುದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪಾಂಗೋಂಗ್ ಸರೋವರದ ಮೇಲೆ ಭಾರತ ಸೈನ್ಯದ ಹೆಲಿಕಾಪ್ಟರ್ ಗಳು  ಗಸ್ತು ಸುತ್ತುತ್ತಿವೆ.

ನಿಜಾಂಶ: ವಿಡಿಯೋದಲ್ಲಿ ತೋರಿಸಿದ ಹೆಲಿಕಾಪ್ಟರ್‌ಗಳು ಭಾರತ ಸೈನ್ಯಕ್ಕೆ ಸಂಬಂಧಿಸಿದವಲ್ಲ. ಅಮೇರಿಕಾ ದೇಶದಲ್ಲಿನ ಹವಾಸು ಸರೋವರದ ಮೇಲೆ ಯು.ಎಸ್‌ ಅಪಾಚಿ ಹೆಲಿಕಾಪ್ಟರ್‌ಗಳು ಸಂಚರಿಸುತ್ತಿರುವ ವಿಡಿಯೋ ಅದು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪು.

ವಿಡಿಯೋದಲ್ಲಿನ ಸ್ಕ್ರೀನ್‌ ಶಾಟ್‌ಗಳನ್ನು ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ, ‘chonday.com’ ಎಂಬ  ಪ್ಲಾಟ್‌ ಫಾರ್ಮ್ ನಲ್ಲಿ ಅಮೆರಿಕಾದಲ್ಲಿನ ಹಾವಾಸ ಸರೋವರದ ಮೇಲೆ ಕಡಿಮೆ ಎತ್ತರದಲ್ಲಿ ಸಂಚರಿಸುತ್ತಿರುವ ಯು.ಎಸ್‌ ಅಪಾಚಿ ಹೆಲಿಕಾಪ್ಟರ್‌ಗಳು ಎಂದು ಶೇರ್‌ ಮಾಡಿದ ವಿಡೀಯೋದಲ್ಲಿ ಇವೆ ದೃಶ್ಯಗಳು ಕಾಣಿಸುತ್ತವೆ. ಈ ಸುದ್ದಿಯ ಆಧಾರದ ಮೇಲೆ ಗೂಗಲ್‌ನಲ್ಲಿ ಹುಡುಕಿದಾಗ, 2018ರಲ್ಲಿ ಪೋಸ್ಟ್‌ ಮಾಡಿದ ಯೂಟ್ಯೂಬ್‌ ವಿಡಿಯೋದಲ್ಲಿಯೂ ಸಹ ಇವೆ ದೃಶ್ಯಗಳು ಕಾಣಿಸಿದವು. ಆ ವಿಡಿಯೋ ಕೆಳೆಗೆ ಹಾವಾಸು ಸರೋವರದ ಹತ್ತಿರ ತೆಗೆದ ವಿಡಿಯೋ ಇದು ಎಂದು ಬರೆದಿರುವುದನ್ನು ಗಮನಿಸಬಹುದು.

ಭಾರತ ಅಪಾಚಿ ಹೆಲಿಕಾಪ್ಟರ್‌ಗಳು ತೆಳು ಬೂದಿಯ ಬಣ್ಣದಲ್ಲಿ ಇರುತ್ತದೆ, ಆದರೆ ವಿಡಿಯೋದಲ್ಲಿ ಕಾಣಿಸುತ್ತಿರುವ ಅಪಾಚಿ ಹೆಲಿಕಾಪ್ಟರ್‌ಗಳು ಕಪ್ಪು ಬಣ್ಣದಲ್ಲಿ ಇರುವುದನ್ನು ನಾವು ನೋಡಬಹದು. ಹಾಗಯೇ, ವಿಡಿಯೋದಲ್ಲಿ ಹೆಲಿಕಾಪ್ಟರ್‌ಗಳ ಮೇಲೆ ಭಾರತ ದೇಶ ಚಿಹ್ನೆಗಳು ಸಹ ಇಲ್ಲ. ಇವೆಲ್ಲವುಗಳ ಆಧಾರದ ಮೇಲೆ, ಈ ವಿಡಿಯೋ ಖಚಿತವಾಗಿ ಅಮೇರಿಕಾದಲ್ಲಿ ತೆಗೆದದ್ದು ಎಂದು ಹೇಳಬಹುದು.

ಒಟ್ಟಾರೆಯಾಗಿ, ಅಮೆರಿಕಾಗೆ ಸಂಬಂದಿಸಿದ ಹೆಲಿಕಾಪ್ಟರ್‌ಗಳ ವಿಡಿಯೋವನ್ನು ತೋರಿಸುತ್ತಾ ಪಾಂಗೋಂಗ್‌ ಸರೋವರದ ಮೇಲೆ ಗಸ್ತು ನಿರ್ವಹಿಸುತ್ತಿರುವ ಭಾರತ ಸೈನ್ಯದ ಹೆಲಿಕಾಪ್ಟರ್ ಗಳು ಎಂದು ಶೇರ್‌ ಮಾಡುತ್ತಿದ್ದಾರೆ.

Share.

About Author

Comments are closed.

scroll