Fake News - Kannada
 

ಬಾಂಗ್ಲಾದೇಶದ ಟೋಲ್ ಪ್ಲಾಜಾವನ್ನು ಮುಸ್ಲಿಂ ಗುಂಪೊಂದು ಕೆಡವುತ್ತಿರುವ ವೀಡಿಯೊವನ್ನು ಭಾರತಕ್ಕೆ ಹೋಲಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಮುಸ್ಲಿಂ ಪುರುಷರ ಗುಂಪು ಟೋಲ್ ಪ್ಲಾಜಾದಲ್ಲಿ ಬ್ಯಾರಿಕೇಡ್ ಅನ್ನು ಧ್ವಂಸಗೊಳಿಸು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಳಕೆದಾರನೊಬ್ಬ “ಅವರು ನಿಮ್ಮ ಭವಿಷ್ಯವನ್ನು ತೋರಿಸುತ್ತಿದ್ದಾರೆ!?️!? ಈ ದೃಶ್ಯವನ್ನು ಇಂದು ಮಧ್ಯಾಹ್ನ ಕರ್ಜನ್-ಮಿಯಾಗಮ್ (ಬರೋರಾ ಸೂರತ್ ರಸ್ತೆ) ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ!” ಎಂದು ಕ್ಯಾಪ್ಶನ್ ಹಾಕಿದ್ದು, ಇದು ಭಾರತದಲ್ಲಿ ನಡೆದಿದೆ ಎಂದು ಆರೋಪಿಸಿದ್ದಾರೆ. ಹಾಗಾದರೆ ಈ ವೀಡಿಯೋದ ಹಿಂದಿನ ಸತ್ಯವನ್ನು ತಿಳಿಯೋಣ. 

ಕ್ಲೇಮ್: ಮುಸ್ಲಿಂ ಪುರುಷರ ಗುಂಪು ಭಾರತದಲ್ಲಿ ಟೋಲ್ ಪ್ಲಾಜಾದ ಬ್ಯಾರಿಕೇಡ್ ಅನ್ನು ಕೆಡವುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ಘಟನೆಯು 18 ಸೆಪ್ಟೆಂಬರ್ 2024 ರಂದು ಬಾಂಗ್ಲಾದೇಶದ ಢಾಕಾದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಕುರ್ಲಿ ಟೋಲ್ ಪ್ಲಾಜಾದಲ್ಲಿ ಸಂಭವಿಸಿದೆ. ಸುರಕ್ಷತೆಯ ಕಾರಣಕ್ಕಾಗಿ ಜನರನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಭದ್ರತಾ ಸಿಬ್ಬಂದಿ ತಡೆದು ಪ್ರವೇಶ ನಿರಾಕರಿಸಿದ್ದು ಇದು ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದದ ಸಂದರ್ಭದಲ್ಲಿ, ಟ್ರಕ್‌ನಿಂದ ಕೆಲವು ವ್ಯಕ್ತಿಗಳು ಟೋಲ್ ಪ್ಲಾಜಾದ ಬ್ಯಾರಿಕೇಡ್ ಅನ್ನು ಧ್ವಂಸಗೊಳಿಸಿದರು. ಭಾರತಕ್ಕೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರೆವೆರಿಸೆ ಇಮೇಜ್ ಸೀರಿಚಿಂಗ್ ನಡೆಸಿದಾಗ ನಮಗೆ ಬಾಂಗ್ಲಾದೇಶದ ಮಾಧ್ಯಮ ವರದಿಗಳು ದೊರಕಿದವು (ಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಘಟನೆಯು ಢಾಕಾದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಕುರ್ಲಿ ಟೋಲ್ ಪ್ಲಾಜಾದಲ್ಲಿ 18 ಸೆಪ್ಟೆಂಬರ್ 2024 ರಂದು ಸಂಭವಿಸಿದೆ. ಸುರಕ್ಷತೆಯ ಕಾರಣಕ್ಕಾಗಿ ಜನರನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಭದ್ರತಾ ಸಿಬ್ಬಂದಿ ತಡೆದು  ಪ್ರವೇಶ ನಿರಾಕರಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದದ ಸಂದರ್ಭದಲ್ಲಿ, ಟ್ರಕ್‌ನಿಂದ ಕೆಲವು ಜನರು ಟೋಲ್ ಪ್ಲಾಜಾದ ಬ್ಯಾರಿಕೇಡ್ ಅನ್ನು ಧ್ವಂಸಗೊಳಿಸಿದರು.

ಹೆಚ್ಚುವರಿಯಾಗಿ, 19 ಸೆಪ್ಟೆಂಬರ್ 2024 ರಂದು ಯುಟ್ಯೂಬ್ ನಲ್ಲಿ ‘ಚಾನಲ್ 24’ ಪ್ರಕಟಿಸಿದ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ, ಈ ಘಟನೆಯು ಪಿಕಪ್ ಪ್ರಯಾಣಿಕರು ಮತ್ತು ಎಕ್ಸ್‌ಪ್ರೆಸ್‌ವೇ ಸಿಬ್ಬಂದಿ ನಡುವಿನ “ತಪ್ಪು ತಿಳುವಳಿಕೆ” ಎಂದು ಹೆದ್ದಾರಿ ಪ್ರಾಧಿಕಾರವು ಹೇಳಿದೆ. ಟೋಲ್ ಪಾವತಿಸಿದ್ದರೂ ಪ್ರವೇಶವನ್ನು ನಿರಾಕರಿಸುವ ಬಗ್ಗೆ ಅವರು ವಾದಿಸುತ್ತಿದ್ದರು, ಆದರೆ ಸುರಕ್ಷತೆಯ ಕಾರಣಗಳಿಗಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಟೋಲ್ ಪ್ಲಾಜಾದಲ್ಲಿ ಮುಸ್ಲಿಂ ಪುರುಷರ ಗುಂಪು ಬ್ಯಾರಿಕೇಡ್ ಅನ್ನು ಕೆಡವಿದ ವೀಡಿಯೊವನ್ನು ಭಾರತದ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll