ಏಪ್ರಿಲ್ 22, 2025 ರಂದು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, 26 ಅಮಾಯಕ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇದರಲ್ಲಿ ಒಬ್ಬರು ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್, ತಮ್ಮ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಏಪ್ರಿಲ್ 23, 2025 ರಂದು ಹರಿಯಾಣದ ಅವರ ಹುಟ್ಟೂರಾದ ಕರ್ನಾಲ್‌ನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ, ದಂಪತಿಗಳು ಸುಂದರವಾದ ಬ್ಯಾಕ್ಗ್ರೌಂಡ್ ನಲ್ಲಿ ನಟಿಸುತ್ತಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದು ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಕೊನೆಯ ವೀಡಿಯೊ ಎಂದು ಹೇಳಿಕೊಳ್ಳುತ್ತಿದೆ. ಇದನ್ನು ನ್ಯೂಸ್ ಮೀಡಿಯಾ ಸಹ ವರದಿ ಮಾಡಿದ್ದವು. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಏಪ್ರಿಲ್ 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕೊನೆಯ ವೀಡಿಯೊ.
ಫ್ಯಾಕ್ಟ್: ಈ ವೀಡಿಯೊ ಇನ್‌ಸ್ಟಾಗ್ರಾಮ್ ಬ್ಲಾಗರ್ ಯಾಶಿಕಾ ಶರ್ಮಾ ಶೆರಾವತ್ ಮತ್ತು ಅವರ ಪತಿ ಆಶಿಶ್ ಶೆರಾವತ್ ಅವರದ್ದು. ಇದಕ್ಕೂ ಲೆಫ್ಟಿನೆಂಟ್ ನರ್ವಾಲ್‌ಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಕಾಣಿಸಿಕೊಂಡಿರುವುದು ಲೆಫ್ಟಿನೆಂಟ್ ನವ್ರಾಲ್ ಮತ್ತು ಅವರ ಪತ್ನಿ ಹಿಮಾಂಶಿ ಅಲ್ಲ, ಬದಲಾಗಿ ಇದು ಯಾಶಿಕಾ ಮತ್ತು ಆಶಿಶ್ ವೀಡಿಯೊ ಎಂದು ಅವರೇ ಮತ್ತೊಂದು ವಿಡಿಯೋದ ಮೂಲಕ ಸ್ಪಷ್ಟಪಡಿಸಿದ್ದಾರೆ. ಲೆಫ್ಟಿನೆಂಟ್ ವಿನಯ್ ನವಾಲ್ ಅವರ ಕುಟುಂಬವು ಇದು ಅವರ ವೀಡಿಯೊ ಅಲ್ಲ ಎಂದು ದೃಢಪಡಿಸಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಅನ್ನು ಹುಡುಕಿದೆವು ಮತ್ತು ‘kashmir_weather’ ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಲಾದ ವೀಡಿಯೊ ಕಂಡುಬಂದಿದೆ. ಈ ವೀಡಿಯೊದಲ್ಲಿ ವೈರಲ್ ವೀಡಿಯೊದಲ್ಲಿ ನಾವೇ ಇದ್ದೇವೆ ಮತ್ತು ನಾವು ಜೀವಂತವಾಗಿದ್ದೇವೆ, ಸುರಕ್ಷಿತವಾಗಿದ್ದೇವೆಂದು ದಂಪತಿಗಳುಹೇಳುತ್ತಿದ್ದಾರೆ. ಈ ವೀಡಿಯೊದಲ್ಲಿರುವ ದಂಪತಿಗಳು ವೈರಲ್ ವೀಡಿಯೊ ಮತ್ತು ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕೊನೆಯ ವೀಡಿಯೊ ಎಂದು ಹೇಳಿಕೊಳ್ಳುವ ಮಾಧ್ಯಮ ವರದಿಗಳನ್ನು ಉಲ್ಲೇಖಿಸುವುದನ್ನು ಕಾಣಬಹುದು.
ನಂತರ ನಾವು ಈ ವೀಡಿಯೊದ ಪ್ರಮುಖ ಆಯಾಮಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಪ್ರಭಾವಿ ದಂಪತಿಗಳಾದ ಯಾಶಿಕಾ ಶರ್ಮಾ ಶೆರ್ವಾರ್ಟ್ ಮತ್ತು ಆಶಿಶ್ ಶೆರಾವತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಒರಿಜಿನಲ್ ಕ್ಲಾರಿಫಿಕೇಷನ್ ಅನ್ನು ನಾವು ಕಂಡುಕೊಂಡಿದ್ದೇವೆ. ಯಾಶಿಕಾ ಅವರ ಇನ್‌ಸ್ಟಾಗ್ರಾಮ್ ಬಯೋ ಅವರು ವೀಡಿಯೊ ಕ್ರಿಯೇಟರ್ ಮತ್ತು ಲೈಫ್ಸ್ಟೈಲ್ ಬ್ಲಾಗರ್ ಎಂದು ಹೇಳುತ್ತದೆ.
ಏಪ್ರಿಲ್ 23, 2025 ರಂದು ಅವರು ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ, ವೈರಲ್ ವೀಡಿಯೊದಲ್ಲಿ ಇರುವುದು ನಾವೇ ಎಂದು ಯಾಶಿಕಾ ಹೇಳುತ್ತಿದ್ದು, ಅವರು ಜೀವಂತವಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಲೆಫ್ಟಿನೆಂಟ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಅವರನ್ನು ತೋರಿಸಲಾಗಿದೆ ಎಂದು ವೀಡಿಯೊ ತಪ್ಪಾಗಿ ವರದಿ ಮಾಡಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ನಂತರ ಅವರು ಲೆಫ್ಟಿನೆಂಟ್ ವಿನಯ್ ನವಲ್ ಮತ್ತು ಹಿಮಾಂಶಿ ನರ್ವಾಲ್ ಅವರಿಗೆ ಸಂತಾಪ ಸೂಚಿಸಿದ್ದಾರೆ. ಜನರು ತಮ್ಮ ವೀಡಿಯೊದ ದುರುಪಯೋಗದ ಬಗ್ಗೆ ಪತ್ರಿಕಾ ಮತ್ತು ಚಾನೆಲ್‌ಗಳಿಗೆ ವರದಿ ಮಾಡಿದ್ದು, ಇದನ್ನು ಇಲ್ಲೇ ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ.
ತಮ್ಮ ವೀಡಿಯೊದ ವಿವರಣೆಯಲ್ಲಿ, ಈ ವೀಡಿಯೊ ಬಹಳಷ್ಟು ದ್ವೇಷವನ್ನು ಹುಟ್ಟುಹಾಕಿದ್ದು, ಅದನ್ನು ಡಿಲೀಟ್ ಮಾಡಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ‘ದುಃಖಕರವೆಂದರೆ, ಈ ವೀಡಿಯೊವನ್ನು ಹಲವಾರು ಪೇಜ್ ಗಳು ಮತ್ತು ಸುದ್ದಿ ವಾಹಿನಿಗಳು ದುರುಪಯೋಗಪಡಿಸಿಕೊಂಡಿವೆ. ಇದು ದಿವಂಗತ ವಿನಯ್ ಸರ್ ಮತ್ತು ಅವರ ಪತ್ನಿಯ ಕೊನೆಯ ವೀಡಿಯೊ ಎಂದು ತಪ್ಪಾಗಿ ಹೇಳಿಕೊಂಡಿವೆ. ಅವರ ಕುಟುಂಬಕ್ಕೆ ನಾವು ಸಂತಾಪವನ್ನು ಸೂಚಿಸುತ್ತೇವೆ. ನಮ್ಮ ವೀಡಿಯೊವನ್ನು ದುರುಪಯೋಗಪಡಿಸಿಕೊಳ್ಳುವ ಪೇಜ್ ಗಳನ್ನು ರಿಪೋರ್ಟ್ ಮಾಡುವಂತೆ ನಾವು ದಯೆಯಿಂದ ವಿನಂತಿಸುತ್ತೇವೆ, ಏಕೆಂದರೆ ಅದು ನಿಜವಾಗಿಯೂ ನಿರಾಶಾದಾಯಕವಾಗಿದೆ….’

ಯಶಿಕಾ ಅವರ ಪೇಜ್ ನಲ್ಲಿ, ಈಗ ಡಿಲೀಟ್ ಮಾಡಿರುವ ವೀಡಿಯೊದಂತೆಯೇ ಅದೇ ಬ್ಯಾಕ್ಗ್ರೌಂಡ್ ನಲ್ಲಿ ಅವರು ನೃತ್ಯ ಮಾಡುತ್ತಿರುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಅವರು ಈ ವೀಡಿಯೊವನ್ನು ಏಪ್ರಿಲ್ 19, 2025 ರಂದು ಪೋಸ್ಟ್ ಮಾಡಿದ್ದಾರೆ.

ನಂತರ ನಾವು ಇಂಟರ್ನೆಟ್ ನಲ್ಲಿ ಹೆಚ್ಚುವರಿ ಹುಡುಕಾಟ ನಡೆಸಿದಾಗ, ಲೆಫ್ಟಿನೆಂಟ್ ನರ್ವಾಲ್ ಅವರ ಕುಟುಂಬವು ಈ ವೀಡಿಯೊಗೆ ಪ್ರತಿಕ್ರಿಯಿಸಿದೆ ಮತ್ತುಈ ಕ್ಲೇಮ್ ಅನ್ನು ನಿರಾಕರಿಸಿದೆ ಎಂದು ಹೇಳುವ ಕೆಲವು ಮಾಧ್ಯಮ ವರದಿಗಳು ಕಂಡುಬಂದವು (ಇಲ್ಲಿ, ಇಲ್ಲಿ ಮತ್ತು ಇಲ್ಲಿ).


ವೈರಲ್ ಆದ ವೀಡಿಯೊದಲ್ಲಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಅವರ ಕುಟುಂಬ ನಿರಾಕರಿಸಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ವರದಿಯ ಪ್ರಕಾರ, “ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೊ ಹರಿದಾಡುತ್ತಿದೆ, ಇದರಲ್ಲಿ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ನೃತ್ಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆ ವೀಡಿಯೊ ಅವರಿಗೆ ಸೇರಿದ್ದಲ್ಲ. ವಿನಯ್ ಅವರ ಕುಟುಂಬ ಇದನ್ನು ದೃಢಪಡಿಸಿದೆ ಮತ್ತು ಸುಳ್ಳು ಹೇಳಿಕೆಯನ್ನು ಹರಡುತ್ತಿರುವುದನ್ನು ವಿರೋಧಿಸಿದೆ.”
ಒಟ್ಟಾರೆಯಾಗಿ ಹೇಳುವುದಾದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅಸುನೀಗಿದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರ ಕೊನೆಯ ವೀಡಿಯೊ ಎಂದು ಇನ್‌ಸ್ಟಾಗ್ರಾಮ್ ಬ್ಲಾಗರ್‌ನ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.