Fake News - Kannada
 

ಖಮ್ಮಂನ ಪ್ರಕಾಶ ನಗರ ಸೇತುವೆಯ ಮೇಲೆ ಜೆಸಿಬಿ ಚಾಲಕ ಸುಭಾನ್ ಪ್ರವಾಹ ಸಂತ್ರಸ್ತರನ್ನು ರಕ್ಷಿಸುತ್ತಿದ್ದಾರೆ ಎಂದು ಸೌದಿ ಅರೇಬಿಯಾದಿಂದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

0

ತೆಲಂಗಾಣದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತೆಲಂಗಾಣ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ವಿವಿಧ ವರದಿಗಳ ಪ್ರಕಾರ, ಈ ಪ್ರವಾಹದಿಂದಾಗಿ ಖಮ್ಮಮ್ ಮತ್ತು ಮಹಬೂಬಾಬಾದ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಇನ್ನೂ ಹಲವು ಪ್ರದೇಶಗಳು ಪ್ರವಾಹದಲ್ಲಿ ಸಿಲುಕಿದೆ. ಖಮ್ಮಂನ ಪ್ರಕಾಶ್ ನಗರ ಸೇತುವೆಯ ಮೇಲೆ ಪ್ರವಾಹದಲ್ಲಿ ಸಿಲುಕಿದ್ದ ಒಂಬತ್ತು ಜನರನ್ನು ಜೆಸಿಬಿ ಆಪರೇಟರ್ ಸುಭಾನ್ ಧೈರ್ಯದಿಂದ ರಕ್ಷಿಸಿದ್ದಾರೆ ಎಂದು ಹಲವಾರು ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ”ಖಮ್ಮಂನ ಪ್ರಕಾಶ ನಗರ ಸೇತುವೆಯ ಮೇಲೆ ಪ್ರವಾಹದಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಿಸುತ್ತಿರುವ ಜೆಸಿಬಿ ಆಪರೇಟರ್ ಸುಭಾನ್” ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಇತ್ತೀಚೆಗೆ ಖಮ್ಮಂನ ಪ್ರಕಾಶ ನಗರ ಸೇತುವೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 9 ಜನರನ್ನು ಜೆಸಿಬಿ ಆಪರೇಟರ್ ಸುಭಾನ್ ರಕ್ಷಿಸಿದ ದೃಶ್ಯಗಳು.

ಫ್ಯಾಕ್ಟ್: ಖಮ್ಮಂನ ಪ್ರಕಾಶ ನಗರ ಸೇತುವೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಿಸಲು ಸುಭಾನ್ ಎಂಬ ಜೆಸಿಬಿ ನಿರ್ವಾಹಕ ಧೈರ್ಯದಿಂದ ತನ್ನ ಜೆಸಿಬಿಯೊಂದಿಗೆ ಸೇತುವೆಯತ್ತ ತೆರಳಿದ್ದು ನಿಜ. ಆದರೆ, ಈ ವಿಡಿಯೋದಲ್ಲಿರುವ ದೃಶ್ಯಗಳು ಈ ಘಟನೆಯನ್ನು ತೋರಿಸುವುದಿಲ್ಲ. ಏಪ್ರಿಲ್ 2024 ರಲ್ಲಿ ಸೌದಿ ಅರೇಬಿಯಾದ ಅಸಿರ್ ಪ್ರಾಂತ್ಯದ ಬಿಶಾ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಕೆಲವು ಯುವಕರನ್ನು ಅಯದ್ ಬಿನ್ ದಗಾಶ್ ಅಲ್ ಅಕ್ಲಾಬಿ ಎಂಬ ವ್ಯಕ್ತಿ ತನ್ನ ಬುಲ್ಡೋಜರ್‌ನೊಂದಿಗೆ ರಕ್ಷಿಸುತ್ತಿರುವುದನ್ನು ಈ ವೈರಲ್ ವೀಡಿಯೊ ತೋರಿಸುತ್ತದೆ. ಹಾಗಾಗಿ ಪೋಸ್ಟ್ ಸೂಚಿಸಿರುವುದು ತಪ್ಪಾಗಿದೆ.

ಖಮ್ಮಂನ ಪ್ರಕಾಶ ನಗರ ಸೇತುವೆಯ (ಇಲ್ಲಿ, ಇಲ್ಲಿ, ಇಲ್ಲಿ) ಪ್ರವಾಹದಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲು ಜೆಸಿಬಿ ಆಪರೇಟರ್ ಸುಭಾನ್ ಧೈರ್ಯದಿಂದ ತಮ್ಮ ಜೆಸಿಬಿಯೊಂದಿಗೆ ಸೇತುವೆಯತ್ತ ತೆರಳಿದ್ದು ನಿಜ. ಆದರೆ, ಈ ವೈರಲ್ ವೀಡಿಯೊ ಆ ಘಟನೆಗೆ ಸಂಬಂಧಿಸಿದ್ದಲ್ಲ. 

ಈ ವೈರಲ್ ವೀಡಿಯೊದ ಕುರಿತ ಮಾಹಿತಿಗಾಗಿ, ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು 28 ಏಪ್ರಿಲ್ 2024 ರಂದು ಗಲ್ಫ್ ನ್ಯೂಸ್ (Gulf News) ಪ್ರಕಟಿಸಿದ ನ್ಯೂಸ್ ರಿಪೋರ್ಟ್ ಗೆ ಹಾದಿಯಾಯಿತು. ಇಲ್ಲಿನ ಲೇಖನವು ವೈರಲ್ ವೀಡಿಯೊದ ಅದೇ ದೃಶ್ಯಗಳನ್ನು ತೋರಿಸುವ ಫೋಟೋವನ್ನು ಸಹ ಪ್ರಕಟಿಸಿದೆ. ಈ ಲೇಖನದ ಪ್ರಕಾರ, ಈ ವೈರಲ್ ವೀಡಿಯೊದಲ್ಲಿ ಸೌದಿ ಅರೇಬಿಯಾದ ಅಸಿರ್ ಪ್ರಾಂತ್ಯದ ಬಿಶಾ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಕೆಲವು ಯುವಕರನ್ನುಅಯ್ದ್ ಬಿನ್ ದಗಾಶ್ ಅಲ್ ಅಕ್ಲಾಬಿ ಎಂಬ ವ್ಯಕ್ತಿ ತನ್ನ ಬುಲ್ಡೋಜರ್‌ನೊಂದಿಗೆ  ರಕ್ಷಿಸುತ್ತಿರುವುದನ್ನು ತೋರಿಸುತ್ತದೆ. ಈ ಘಟನೆಯ ವೈರಲ್ ವೀಡಿಯೊದ ದೃಶ್ಯಗಳನ್ನು ಹೊಂದಿರುವ ಹೆಚ್ಚಿನ ಸುದ್ದಿಗಳನ್ನು ಇಲ್ಲಿ ಕಾಣಬಹುದು.

ಕೊನೆಯದಾಗಿ ಹೇಳುವುದಾದರೆ, ಸೌದಿ ಅರೇಬಿಯಾದಿಂದ ವೀಡಿಯೊವನ್ನು ಖಮ್ಮಂ ಪ್ರಕಾಶ್ ನಗರ ಸೇತುವೆಯ ಮೇಲೆ ಪ್ರವಾಹದಲ್ಲಿ ಸಿಲುಕಿದ 9 ಜನರನ್ನು ಜೆಸಿಬಿ ಆಪರೇಟರ್ ಸುಭಾನ್ ರಕ್ಷಿಸುವ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. 

Share.

Comments are closed.

scroll