Fake News - Kannada
 

ಎಳೆನೀರು ಮಾರುವ ತನ್ನ ತಾಯಿಯನ್ನು ಅಚ್ಚರಿಗೊಳಿಸಿದ ಸೇನಾ ಸೈನಿಕನ ಸ್ಕ್ರಿಪ್ಟ್ ವೀಡಿಯೊವನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

 ರೈಲ್ವೆ ನಿಲ್ದಾಣದಲ್ಲಿ ಎಳೆನೀರು ಮಾರುವ ತನ್ನ ತಾಯಿಗೆ ಗೊತ್ತಿಲ್ಲದೆ ಸೇವೆ ಸಲ್ಲಿಸಿದ ನಂತರ ಆಕೆಗೆ ನಮಸ್ಕರಿಸುವ ಮೂಲಕ ಯೋಧನೊಬ್ಬ ಆಶ್ಚರ್ಯಚಕಿತನಾಗಿಸುವ ವಿಡಿಯೋವೊಂದು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ನಿಜ ಘಟನೆಯೆಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.  

ಕ್ಲೇಮ್: ಸೈನಿಕನೊಬ್ಬ ಎಳನೀರು ಮಾರಾಟ ಮಾಡುವ ತನ್ನ ತಾಯಿಗೆ ನಮಸ್ಕಾರ ಮಾಡುವ ಮೂಲಕ ಆಶ್ಚರ್ಯಗೊಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೀಡಿಯೊದಲ್ಲಿರುವುದು ನಿಜ ಘಟನೆಯಲ್ಲ. ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊವಾಗಿದ್ದು, ನಟಿ ಸಂಜನಾ ಗಲ್ರಾನಿ ಅವರು 12 ನವೆಂಬರ್ 2024 ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.ಇಲ್ಲಿ ಸ್ಕ್ರಿಪ್ಟ್ ಮಾಡಿದ ನಾಟಕಗಳು, ವಿಡಂಬನೆಗಳು ಮತ್ತು ಜಾಗೃತಿ ವೀಡಿಯೊಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಇತರ ವೀಡಿಯೊಗಳಲ್ಲಿ  ಸಹ ವೈರಲ್ ವೀಡಿಯೊ ಸ್ಕ್ರಿಪ್ಟ್ ಮತ್ತು ಕಾಲ್ಪನಿಕವಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು 12 ನವೆಂಬರ್ 2024 ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಒರಿಜಿನಲ್ ವೀಡಿಯೊ (ಆರ್ಕೈವ್ ಲಿಂಕ್) ಗೆ ನಮ್ಮನ್ನು ಕರೆದೊಯ್ಯಿತು. ಇಲ್ಲಿ ನಟಿ ಸಂಜನಾ ಗಲ್ರಾನಿ, “ಸೆಲ್ಯೂಟ್ ದಿಸ್ ಮಾದರ್..!” ಎಂದು ಹೇಳಿಕೊಂಡಿದ್ದಾರೆ. 

ಕ್ಯಾಪ್ಶನ್ ಮತ್ತು ವೀಡಿಯೊದ ಕೊನೆಯಲ್ಲಿ ಡೆಸ್ಕಲಿಮೆರ್ ಅನ್ನು ನೀಡಿದ್ದನ್ನು ನಾವು ಗಮನಿಸಿದ್ದೇವೆ. ಇಲ್ಲಿ “Thank you for watching! Please note that this page features scripted dramas, parodies, and awareness videos. These short films are created for entertainment and educational purposes only. All characters and situations depicted in the videos are fictional and intended to raise awareness, entertain, and educate.” ಎಂದು ಹೇಳಿಕೊಂಡಿದ್ದಾರೆ. 

15 ನವೆಂಬರ್ 2024 ರಂದು “3RD EYE” ಯೂಟ್ಯೂಬ್ ಚಾನಲ್ ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು (ಆರ್ಕೈವ್  ಲಿಂಕ್) ನಾವು  ಕಂಡುಕೊಂಡಿದ್ದೇವೆ. “3RD EYE” ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ರಚಿಸುತ್ತದೆ. ಅದು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟವಾಗಿದೆ. ಇತರ ವೈರಲ್ ವೀಡಿಯೊಗಳಲ್ಲಿ ಸಹ ಇವೆಲ್ಲಾ ಸ್ಕ್ರಿಪ್ಟ್ ಮತ್ತು ಕಾಲ್ಪನಿಕ ಎಂದು ದೃಢಪಡಿಸಿದೆ. 

ಈ ಮೊದಲು ಸಹ ಫಾಕ್ಟ್ಲಿ ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ “3rd Eye”  ಮೂಲಕ ನಿಜ ಘಟನೆ ಎಂದು ವೈರಲ್ ಆಗಿದ್ದ ವೀಡಿಯೊಗಳನ್ನು ನಿರಾಕರಿಸಿದೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಒಟ್ಟಾರೆಯಾಗಿ ಹೇಳುವುದಾದರೆ, ಎಳನೀರು ಮಾರುವ ತನ್ನ ತಾಯಿಯನ್ನು ಅಚ್ಚರಿಗೊಳಿಸುವ ಸೈನಿಕನ ಸ್ಕ್ರಿಪ್ಟ್ ವೀಡಿಯೊವನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll