Fake News - Kannada
 

2022 ರ ಶಶಿ ತರೂರ್ ಅವರ ಕಾಲಿನ ಗಾಯದ ಫೋಟೋವನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗುತ್ತಿದೆ

0

ಲೋಕಸಭಾ ಸಂಸದ ಶಶಿ ತರೂರ್ ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಫೋಟೋ (ಇಲ್ಲಿ) ಇತ್ತೀಚಿನದೆಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.  ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್:  2024 ರಲ್ಲಿ ಗಾಯಗೊಂಡ ಸಂಸದ ಶಶಿ ತರೂರ್ ಅವರ ಫೋಟೋ. 

ಫ್ಯಾಕ್ಟ್: ಈ ಫೋಟೋ ಡಿಸೆಂಬರ್ 2022 ರಲ್ಲಿ ಸಂಸತ್ತಿನಲ್ಲಿ ನಡೆಯುವಾಗ ಅವರ ಎಡಗಾಲು ಉಳುಕಿದಾಗ ತೆಗೆದದ್ದು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.

ಈ ವೈರಲ್ ಕ್ಲೇಮ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಡಿಸೆಂಬರ್ 2022 ರಲ್ಲಿ ಶಶಿ ತರೂರ್ ಮಾಡಿದ ‘X’ ಪೋಸ್ಟ್ ನಮಗೆ ಸಿಕ್ಕಿತು.

ವೈರಲ್ ಫೋಟೋವನ್ನು ಒಳಗೊಂಡಿರುವ ಈ ಪೋಸ್ಟ್ (ಆರ್ಕೈವ್ ಲಿಂಕ್) ನಲ್ಲಿ, ಶಶಿ ತರೂರ್ ಸಂಸತ್ತಿನಲ್ಲಿ ನಡೆಯುತ್ತಿರುವಾಗ ಎಡವಿ ಬಿದ್ದ ಕಾರಣ ತಮ್ಮ ಎಡಗಾಲು ತೀವ್ರವಾಗಿ ಉಳುಕಿಕೊಂಡಿದೆ ಎಂದು ಉಲ್ಲೇಖಿಸಿದ್ದಾರೆ. 2022 ರ ಈ ಬಗ್ಗೆ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ, ಅದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದಲ್ಲದೆ, ಅವರು ಇತ್ತೀಚೆಗೆ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆಯೇ ಎಂದು ತಿಳಿಯಲು ನಾವು ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಪರಿಶೀಲಿಸಿದೆವು. ಆದರೆ, ಡಿಸೆಂಬರ್ 12, 2024 ರಂದು ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ಟ್ರೋಲರ್‌ಗಳನ್ನು ಟೀಕಿಸಿ ಅವರು ಮಾಡಿದ ಒಂದು ಟ್ವೀಟ್ ಅನ್ನು ಹೊರತುಪಡಿಸಿ, ಅವರ ಪ್ರೊಫೈಲ್‌ನಲ್ಲಿ ನಮಗೆ ಅಂತಹ ಯಾವುದೇ ಪೋಸ್ಟ್‌ಗಳು ಕಂಡುಬಂದಿಲ್ಲ. ಅದೇ ಟ್ವೀಟ್‌ನಲ್ಲಿ, ಅವರು ಆರಾಮಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಇನ್ನು ಹೆಚ್ಚಾಗಿ, ಅವರ ಟ್ವೀಟ್ ನಂತರ ಅವರ ಬಗ್ಗೆ ಅಂತಹ ಸುದ್ದಿ ವರದಿಯಾಗಿದೆಯೇ ಎಂದು ಪರಿಶೀಲಿಸಲು ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಆದರೆ ನಮಗೆ ಯಾವುದೇ ವರದಿಗಳು ಸಿಕ್ಕಿಲ್ಲ. 

ಒಟ್ಟಾರೆಯಾಗಿ ಹೇಳುವುದಾದರೆ,  ಶಶಿ ತರೂರ್ ಅವರ ಗಾಯಗೊಂಡ ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡಿರುವ  2022 ರ ಹಳೆಯ ಫೋಟೋವನ್ನು ಇತ್ತೀಚಿನ ಫೋಟೋ ಎಂದು ಹಂಚಿಕೊಳ್ಳಲಾಗಿದೆ.

Share.

Comments are closed.

scroll